Asianet Suvarna News Asianet Suvarna News

ವೈರಸ್‌ ಪತ್ತೆಗೆ ಸರ್ಕಾರ ಐಡಿಯಾ: ಶೀಘ್ರ ‘ಪೂಲ್‌ ಸ್ಯಾಂಪಲ್‌ ಟೆಸ್ಟ್‌’!

ವೈರಸ್‌ ಪತ್ತೆಗೆ ಸರ್ಕಾರ ಐಡಿಯಾ: ಶೀಘ್ರ ‘ಪೂಲ್‌ ಸ್ಯಾಂಪಲ್‌ ಟೆಸ್ಟ್‌’| ಸಮುದಾಯಕ್ಕೆ ಹರಡಿದೆಯೇ ಎಂದು ತಿಳಿಯಲು ಸಹಕಾರಿ| ಐವರ ಮಾದರಿ ಒಟ್ಟಿಗೆ ಪರೀಕ್ಷೆ| ಪಾಸಿಟಿವ್‌ ಬಂದರೆ ಪ್ರತೇಕ ಟೆಸ್ಟ್‌

Karnataka Govt To Adopt Pool Sample Testing to accelerate coronavirus testing
Author
Bangalore, First Published Apr 18, 2020, 8:53 AM IST

 ಬೆಂಗಳೂರು(ಏ.18): ಕೊರೋನಾ ಸೋಂಕು ಸಮುದಾಯಕ್ಕೆ ಹರಡಿದೆಯೇ ಎಂಬುದನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಆರೋಗ್ಯ ಇಲಾಖೆಯು ‘ಪೂಲ್‌ ಸ್ಯಾಂಪಲ್‌ ಟೆಸ್ಟಿಂಗ್‌’ ಆರಂಭಿಸಲಿದೆ. ಐಸಿಎಂಆರ್‌ ಮಾರ್ಗಸೂಚಿ ಅನ್ವಯ ಈ ಕುರಿತು ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆಯು, ಹೆಚ್ಚೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲು ಐಸಿಎಂಆರ್‌ ಪೂಲ್‌ ಟೆಸ್ಟಿಂಗ್‌ಗೆ ಆದ್ಯತೆ ನೀಡಲು ತಿಳಿಸಿದೆ.

ಇದರಂತೆ ಪೂಲ್‌ ಮಾದರಿ ಸಂಗ್ರಹಿಸುವ ವೇಳೆ ಸೋಂಕಿನ ಲಕ್ಷಣ ಉಳ್ಳವರ ಮಾದರಿ ಸಂಗ್ರಹಿಸಬಾರದು. ಅಲ್ಲದೆ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರು, ಆರೋಗ್ಯ ಸಿಬ್ಬಂದಿ ಹಾಗೂ ಶೇ.5ಕ್ಕಿಂತ ಹೆಚ್ಚು ಸೋಂಕಿನ ಪಾಸಿಟಿವಿಟಿ ದರ (ಪರೀಕ್ಷಿಸಿದವರಲ್ಲಿ ಶೇ.5ಕ್ಕಿಂತ ಹೆಚ್ಚು ಪಾಸಿಟಿವ್‌) ಹೊಂದಿರುವ ಕಂಟೇನ್‌ಮೆಂಟ್‌ ಪ್ರದೇಶದಲ್ಲಿ ಈ ಮಾದರಿ ಪರೀಕ್ಷೆ ಮಾಡಬಾರದು ಎಂದು ಸೂಚಿಸಲಾಗಿದೆ.

ಶೇ.2ರಿಂದ ಶೇ.5ರ ನಡುವೆ ಪಾಸಿಟಿವಿಟಿ ದರ ಇರುವ ಪ್ರದೇಶದಲ್ಲಿ 5 ಮಂದಿಯ ಗಂಟಲು ದ್ರವವನ್ನು ಒಂದು ಸ್ಟೆರೈಲ್‌ ಟ್ಯೂಬ್‌ನಲ್ಲಿ ಸಂಗ್ರಹಿಸಿ ಚೆನ್ನಾಗಿ ಕುಲುಕಿ ಪೂಲ್‌ ಮಾದರಿ ಪರೀಕ್ಷೆಗೆ ಒಳಪಡಿಸಲಾಗುವುದು. ಮಾದರಿ ಸಂಗ್ರಹಿಸುವ ವೇಳೆ 5 ಮಂದಿಯ ವಿವರಗಳನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು. ಈ ಪೂಲ್‌ ಮಾದರಿಯಲ್ಲಿ ಸೋಂಕು ದೃಢಪಟ್ಟರೆ 5 ಮಂದಿಯನ್ನೂ ಕರೆಸಿ ಪ್ರತ್ಯೇಕವಾಗಿ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಬೇಕು. ಈ ರೀತಿ ಪ್ರತಿ 5 ಮಂದಿಗೆ ಒಂದು ಪರೀಕ್ಷೆಯಂತೆ ಪೂಲ್‌ ಪರೀಕ್ಷೆ ನಡೆಸಬೇಕು ಎಂದು ಹೇಳಿದೆ.

ಟೆಸ್ಟ್‌ ಹೇಗೆ?

ಇದರಡಿ ಐದು ವ್ಯಕ್ತಿಗಳ ಸ್ವಾ್ಯಬ್‌ ಮಾದರಿಯನ್ನು ಒಂದೇ ಸ್ಟೆರೈಲ್‌ ಟ್ಯೂಬ್‌ನಲ್ಲಿ ಸಂಗ್ರಹಿಸಿ ಸಾಮೂಹಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ವೇಳೆ ಪೂಲ್‌ ಮಾದರಿಯಲ್ಲಿ ಕೊರೋನಾ ಸೋಂಕು ಪಾಸಿಟಿವ್‌ ಬಂದರೆ ಐದೂ ಮಂದಿಯನ್ನು ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸಲಾಗುವುದು. ಪೂಲ್‌ ಮಾದರಿ ನೆಗೆಟಿವ್‌ ಬಂದರೆ 5 ಮಂದಿಯಲ್ಲಿ ಯಾರಿಗೂ ಸೋಂಕು ತಗಲಿಲ್ಲ ಎಂಬ ನಿರ್ಧಾರಕ್ಕೆ ಆರೋಗ್ಯ ಇಲಾಖೆ ಬರಲಿದೆ.

Follow Us:
Download App:
  • android
  • ios