Asianet Suvarna News Asianet Suvarna News

ಸಿಲಿಕಾನ್ ಸಿಟಿಯಲ್ಲಿ ಎರಡು ದಿನ ಮಳೆ ಆರ್ಭಟ

ಸಿಲಿಕಾನ್‌ಸಿಟಿ ಬೆಂಗಳೂರಿನಲ್ಲಿ ಮತ್ತೆ ಎರಡು ದಿನಗಳ ಕಾಲ ಮಳೆ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದೊಂದು ವಾರದಿಂದ ಆಗಾಗ ಕಾಣಿಸಿಕೊಳ್ಳುತ್ತಿದ್ದ ಮಳೆ ಅ.31 ಮತ್ತು ನ.1ರಂದು ವರ್ಷಧಾರೆ ಸುರಿಸಲಿದ್ದಾನೆ. ಮುಂದಿನ 48 ಗಂಟೆಗಳ ಕಾಲ ಮೋಡಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.

heavy rain to be lashes in silicon city
Author
Bangalore, First Published Oct 31, 2019, 7:40 AM IST

ಬೆಂಗಳೂರು(ಅ.31): ಸಿಲಿಕಾನ್‌ಸಿಟಿ ಬೆಂಗಳೂರಿನಲ್ಲಿ ಮತ್ತೆ ಎರಡು ದಿನಗಳ ಕಾಲ ಮಳೆ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದೊಂದು ವಾರದಿಂದ ಆಗಾಗ ಕಾಣಿಸಿಕೊಳ್ಳುತ್ತಿದ್ದ ಮಳೆ ಅ.31 ಮತ್ತು ನ.1ರಂದು ವರ್ಷಧಾರೆ ಸುರಿಸಲಿದ್ದಾನೆ. ಮುಂದಿನ 48 ಗಂಟೆಗಳ ಕಾಲ ಮೋಡಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.

ನಿನ್ನೆ ಅಲ್ಲಲ್ಲಿ ತುಂತುರು ಮಳೆ:

ನಗರದಲ್ಲಿ ಬುಧವಾರ ಮುಂಜಾನೆಯಿಂದಲೂ ಮೋಡ ಮುಸುಕಿದ ವಾತಾವರಣವಿತ್ತು. ದಿನವಿಡೀ ಮೋಡ ಮತ್ತು ಬಿಸಿಲಿನ ಕಣ್ಣಮುಚ್ಚಾಲೆ ನಡೆದಿತ್ತು. ಮಧ್ಯಾಹ್ನ ಮತ್ತು ಸಂಜೆ ಹೊತ್ತಿಗೆ ಅಲ್ಲಲ್ಲಿ ತುಂತುರು ಮಳೆ ಆರಂಭಗೊಂಡಿತ್ತು.

ಸಂಜೆ ಕಚೇರಿಗಳು, ಶಾಲೆಗಳು ಬಿಡುವ ಹೊತ್ತಿಗೆ ಮಳೆಯಾಗಿದ್ದರಿಂದ ಮಕ್ಕಳು, ನಾಗರಿಕರು, ವಾಹನ ಸವಾರರು ತೊಂದರೆಗೀಡಾದರು. ದೊಮ್ಮಲೂರು, ಶಾಂತಿನಗರ, ಹಲಸೂರು, ಎಂ.ಜಿ.ರಸ್ತೆ, ಹೆಬ್ಬಾಳ, ಸಂಜಯನಗರ, ಆಡುಗೋಡಿ, ರಾಜಾಜಿನಗರ, ಶ್ರೀನಿವಾಸನಗರ, ಹನುಮಂತನಗರ, ಮೈಸೂರು ರಸ್ತೆ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ, ಬೊಮ್ಮನಹಳ್ಳಿ ಸೇರಿದಂತೆ ಹಲವಡೆ ಸಾಧಾರಣ ಸುರಿಯಿತು.

111 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ

ಮಳೆಯಿಂದಾಗಿ ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಯಶವಂತಪುರ, ಮೇಖ್ರಿ ವೃತ್ತ, ಹನುಮಂತ ನಗರ, ಎಂ.ಜಿ.ರಸ್ತೆ ಸೇರಿದಂತೆ ಹಲವು ಕಡೆ ವಾಹನ ಸಂಚಾರಕ್ಕೆ ಧಕ್ಕೆಯಾಗಿತ್ತು. ಕೊಡಿಗೇಹಳ್ಳಿ, ಭದ್ರಪ್ಪ ಲೇಔಟ್‌, ಮಂಗಮ್ಮನಪಾಳ್ಯ, ಶಂಕರಪುರಂ-ಬಸವೇಶ್ವರ ನಡುವಿನ ಮಾರ್ಗ ಸೇರಿದಂತೆ ಹಲವಡೆಗೆ ರಸ್ತೆ ಗುಂಡಿಗಳಲ್ಲಿ ನೀರು ತುಂಬಿದ್ದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ಹಾಗೆಯೇ ಮಲ್ಲೇಶ್ವರಂ 15 ಮತ್ತು 16ನೇ ಅಡ್ಡರಸ್ತೆಗಳ ನಡುವೆ ಒಂದು ಮರ ಉರುಳಿ ಬಿದ್ದ ಪ್ರಕರಣ ಹೊರತುಪಡಿಸಿದರೆ ನಗರದಲ್ಲಿ ಮಳೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸನ್ನಿ ಲಿಯೋನ್ ಕಳ್ಳತನ ಮಾಡಿದ್ರಾ? ವಿವಾದದಲ್ಲಿ ಸಿಲುಕಿದ ನಟಿ

Follow Us:
Download App:
  • android
  • ios