Asianet Suvarna News Asianet Suvarna News

ಕಾಯ್ದಿರಿಸಲಾಗಿದ್ದ ಡಿಕೆಶಿ ಜಾಮೀನು ತೀರ್ಪಿಗೆ ಕೋರ್ಟ್‌ನಿಂದ ಮುಹೂರ್ತ ಫಿಕ್ಸ್

ನವದೆಹಲಿಯ ಮನೆಯಲ್ಲಿ ದಾಖಲೆ ರಹಿತ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ಅವರ ಜಾಮೀನು ತೀರ್ಪಿಗ ಕೋರ್ಟ್‌ ಕೊನೆಗೂ ಮುಹೂರ್ತ ಫಿಕ್ಸ್ ಮಾಡಿದೆ. ಜಾಮೀನು ತೀರ್ಪು ಯಾವಾಗ..? ಮುಂದೆ ಓದಿ

Congress Leader dk shivakumar bail judgement On Oct 23 Says delhi high court
Author
Bengaluru, First Published Oct 22, 2019, 7:57 PM IST

ನವದೆಹಲಿ/ಬೆಂಗಳೂರು, (ಅ.22): ಕಾಯ್ದಿರಿಸಲಾಗಿದ್ದ ಕಾಂಗ್ರೆಸ್ ನಾಯಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರ ಜಾಮೀನು ತೀರ್ಪಿಗೆ ಕೊನೆಗೂ ದೆಹಲಿ ಹೈಕೋರ್ಟ್‌ ದಿನಾಂಕ ನಿಗದಿಪಡಿಸಿದೆ.

ಕೊನೆಗೂ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಅಂತ್ಯ: ಆದ್ರೆ ಇವತ್ತೂ ರಿಲೀಫ್ ಸಿಗ್ಲಿಲ್ಲ

ಇಡಿ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದ ಬೆನ್ನಲ್ಲೇ ಡಿಕೆ ಶಿವಕುಮಾರ್​ ಪರ ವಕೀಲರು ಜಾಮೀನು ನೀಡುವಂತೆ ಹೈಕೋರ್ಟ್​ಗೆ ಮನವಿ ಮಾಡಿದ್ದರು. ಅ. 18ರಂದು  ಈ ಬಗ್ಗೆ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್​​  ತೀರ್ಪು ಕಾಯ್ದರಿಸಿತ್ತು ಅಷ್ಟೇ. ಆದ್ರೆ  ದಿನಾಂಕವನ್ನು ಹೇಳಿರಲಿಲ್ಲ.

ಇದೀಗ ಕೋರ್ಟ್ ಡಿಕೆಶಿ ಬೇಲ್ ತೀರ್ಪು ನೀಡುವ ಬಗ್ಗೆ ದಿನಾಂಕ ಪ್ರಕಟಿಸಿದ್ದು, ನಾಳೆ ಅಂದ್ರೆ ಅ.23ರಂದು ಡಿಕೆಶಿ ಜಾಮೀನು ತೀರ್ಪು ಹೊರಬೀಳಲಿದೆ.

ಕೊನೆಗೂ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಅಂತ್ಯ: ಈ ಬಗ್ಗೆ ಡಿಕೆ ಸುರೇಶ್ ಮೊದಲ ಮಾತು

ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಪರ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಪರ ವಕೀಲ ನಟರಾಜ್​ ವಾದ ಮಂಡಿಸಿದ್ದರು. ವಾದ ಪ್ರತಿ ವಾದ ಆಲಿಸಿದ ಹೈಕೋರ್ಟ್​  ತೀರ್ಪು ಕಾಯ್ದಿರಿಸಿತ್ತು. 

ಅಕ್ರಮ ಹಣ ವರ್ಗಾವಣೆ ಆರೋಪದಂತೆ ನ್ಯಾಯಾಂಗ ಬಂಧನದಲ್ಲಿರುವ ಡಿಕೆಶಿಗೆ ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟ್​ ಜಾಮೀನು ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್​ ಜಾಮೀನಿಗಾಗಿ ದೆಹಲಿ ಹೈಕೋರ್ಟ್​ ಮೊರೆಹೋಗಿದ್ದರು.

Follow Us:
Download App:
  • android
  • ios