Asianet Suvarna News Asianet Suvarna News

ನೆರೆ ಸಂತ್ರಸ್ತರಿಗೆ ದೇಣಿಗೆ ನೀಡಲು ಸಿಎಂ ಮನವಿ

ಸಿಎಂ ಬಿ. ಎಸ್. ಯಡಿಯೂರಪ್ಪ ಸಂತ್ರಸ್ತರಿಗೆ ನೆರವಾಗಲು ಜನರಿಗೆ ಮನವಿ ಮಾಡಿದ್ದಾರೆ. ಬೆಳಗಾವಿ, ಉತ್ತರ ಕನ್ನಡ, ಕೊಡಗು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ಜನತೆಗೆ ಸಂಕಷ್ಟಉಂಟಾಗಿದೆ. ನೊಂದ ಸಂತ್ರಸ್ತರಿಗೆ ಮಾನವೀಯ ನೆಲೆಗಟ್ಟಿನ ಮೇಲೆ ರಾಜ್ಯದ ಜನತೆ ಸ್ಪಂದಿಸಬೇಕು ಎಂದು ಕೋರಿದ್ದಾರೆ.

cm bs yediyurappa requests people to help flood victims
Author
Bangalore, First Published Oct 24, 2019, 8:07 AM IST

ಬೆಂಗಳೂರು(ಅ.24): ರಾಜ್ಯದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಬೆಳಗಾವಿ, ಉತ್ತರ ಕನ್ನಡ, ಕೊಡಗು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ಜನತೆಗೆ ಸಂಕಷ್ಟಉಂಟಾಗಿದೆ. ನೊಂದ ಸಂತ್ರಸ್ತರಿಗೆ ಮಾನವೀಯ ನೆಲೆಗಟ್ಟಿನ ಮೇಲೆ ರಾಜ್ಯದ ಜನತೆ ಸ್ಪಂದಿಸಬೇಕು ಎಂದು ಕೋರಿದ್ದಾರೆ.

ಕಳಸಾ-ಬಂಡೂರಿ ಯೋಜನೆ ದಾರಿ ಶೇ.90 ಸುಗಮ: ಸಿಎಂ.

ಗಾಯದ ಮೇಲೆ ಬರೆ ಎಳೆದಂತೆ ರಾಜ್ಯದಲ್ಲಿ ಮಳೆಯ ರುದ್ರನರ್ತನ ಮುಂದುವರೆದಿದ್ದು, 13 ಮಂದಿಯನ್ನು ಬಲಿ ಪಡೆದಿದೆ. ನೆರೆ ಸಂತ್ರಸ್ತರಿಗೆ ನೆರವಾಗಲು ಮತ್ತು ಬದುಕನ್ನು ಕಟ್ಟಿಕೊಳ್ಳಲು ಸ್ವಪ್ರೇರಣೆಯಿಂದ ದೇಣಿಗೆ ನೀಡಬೇಕು. ಆಸ್ತಕರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯನ್ನು ನೀಡಬಹುದು. ಪೇಟಿಎಂ, ಗೂಗಲ್‌ ಪೇ, ಅಮೆಜಾನ್‌ ಪೇ, ಫೋನ್‌ ಪೇ ಮತ್ತು ಕ್ಯೂ.ಆರ್‌. ಕೋಡ್‌ಗಳ ಮೂಲಕವೂ ದೇಣಿಗೆ ನೀಡಲು ಅವಕಾಶ ಇದೆ. ಆದಾಯ ತೆರಿಗೆ ಕಾಯ್ದೆ 80ಜಿ (2) ಅಡಿ ಅದಕ್ಕೆ ತೆರಿಗೆ ವಿನಾಯಿತಿ ಇದೆ ಎಂದು ಹೇಳಿದ್ದಾರೆ.

ಇಲ್ಲಿಗೆ ದೇಣಿಗೆ ನೀಡಿ

ಖಾತೆಯ ಹೆಸರು - Chief Minister Relief Fund Natural Calamity

ಬ್ಯಾಂಕ್‌ ಹೆಸರು - SBI (State Bank of India)

ಶಾಖೆ - Vidhanasoudha Branch

ಖಾತೆ ಸಂಖ್ಯೆ - 37887098605

ಚೆಕ್‌/ಡಿಡಿ ಕಳುಹಿಸಬೇಕಾದ ವಿಳಾಸ - ನಂ.235-ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು - 560001

Follow Us:
Download App:
  • android
  • ios