Asianet Suvarna News Asianet Suvarna News

ಸಿಎಂ ಒಪ್ಪಿದರೆ ಮಾತ್ರ ಸರ್ಕಾರಿ ನೌಕರರ ವರ್ಗ

ಸರ್ಕಾರಿ ನೌಕರರ ವರ್ಗಾವಣೆಯನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಅಗತ್ಯವಿದ್ದಲ್ಲಿ ಮಾತ್ರ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ನಡೆಸುವಂತೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ.

CM Approval Is Important For Govt Employees Transfer in Karnataka
Author
Bengaluru, First Published Nov 8, 2019, 10:06 AM IST

ಬೆಂಗಳೂರು [ನ.08]:  ಸರ್ಕಾರಿ ನೌಕರರ ವರ್ಗಾವಣೆಯನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಅಗತ್ಯವಿದ್ದಲ್ಲಿ ಮಾತ್ರ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ನಡೆಸುವಂತೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ  ಸುತ್ತೋಲೆ ಹೊರಡಿಸಿದೆ.

ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ನಂತರ ಮಾಡುವ ನೌಕರರು ಅಥವಾ ಅಧಿಕಾರಿಗಳ ವರ್ಗಾವಣೆಗೆ ಮುಖ್ಯಮಂತ್ರಿ ಗಳ ಪೂರ್ವಾನುಮತಿ ಅಗತ್ಯ ಎಂದು ಹಿಂದೆ 2013 ರಲ್ಲಿಯೇ ಈ ಸಂಬಂಧ ನಿರ್ಧಾರ ಕೈಗೊಂಡು ಆದೇಶ ಹೊರಡಿಸಲಾಗಿತ್ತು. 

ಸಿಎಂ ಒಪ್ಪಿದರೆ ಮಾತ್ರ ಸರ್ಕಾರಿ ನೌಕರರ ವರ್ಗ

ಈ ಸಾಲಿನಲ್ಲಿ ಸಾರ್ವತ್ರಿಕ ವರ್ಗಾವಣೆ ಅವಧಿ ಜುಲೈ 10 ರಂದು ಮುಗಿದ ನಂತರ ಅಕ್ಟೋಬರ್ 10 ರವರೆಗೆ ಆಯಾ ಸಚಿವರೇ ವರ್ಗಾವಣೆ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಲಾಗಿತ್ತು.

ಇದೀಗ ಆ ಅಧಿಕಾರವನ್ನು ಮೊಟಕುಗೊಳಿಸಿ ವರ್ಗಾವಣೆ ಅನಿವಾರ್ಯ ಇದ್ದಲ್ಲಿ ಮಾತ್ರ ಮುಖ್ಯಮಂತ್ರಿಗಳ ಅನುಮೋದನೆ ಪಡೆಯಬೇಕು ಎಂದು ಸೂಚಿಸಲಾಗಿದೆ. 

Follow Us:
Download App:
  • android
  • ios