Asianet Suvarna News Asianet Suvarna News

ಗೋವಾ ಪ್ಲ್ಯಾನ್ ಕ್ಯಾನ್ಸಲ್ ಮಾಡ್ಬೇಡಿ: ಬದಲಿ ರಸ್ತೆ ಇದೆ!

ಬೆಳಗಾವಿ-ಗೋವಾ ರಸ್ತೆ ಮಾರ್ಗ ಬಂದ್! ರಾಷ್ಟ್ರೀಯ ಹೆದ್ದಾರಿ ನವೀಕರಣದ ಹಿನ್ನೆಲೆಯಲ್ಲಿ ರಸ್ತೆ ಮಾರ್ಗ ಬಂದ್! ಬದಲಿ ಮಾರ್ಗ ಅನುಸರಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿ ಆದೇಶ! ಅನಮೋದ್ ಘಾಟ್ ಮತ್ತು ರಾಮನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ನವೀಕರಣ
 

Belgaum-Goa Highway Closed From Today Due To Road Upgrade
Author
Bengaluru, First Published Nov 19, 2018, 7:15 PM IST

ಪೋಂಡಾ(ನ.19): ರಾಷ್ಟ್ರೀಯ ಹೆದ್ದಾರಿ ನವೀಕರಣದ ಹಿನ್ನೆಲೆಯಲ್ಲಿ ಬೆಳಗಾವಿ-ಗೋವಾ ರಸ್ತೆ ಮಾರ್ಗವನ್ನು ಮುಚ್ಚಲಾಗಿದೆ. ಇಲ್ಲಿನ ಅನಮೋದ್ ಘಾಟ್ ಮತ್ತು ರಾಮನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ನವೀಕರಣ ಕಾಯರ್ಯ ಇಂದಿನಿಂದ ಆರಂಭವಾಗುತ್ತಿದ್ದು, ಬೆಳಗಾವಿ-ಗೋವಾ ರಸ್ತೆ ಮಾರ್ಗವನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾನಾಪುರದ ಮೇಲೆ ಹಾದು ಹೋಗುವ ನಂ.4A ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 84 ಕಿ.ಮೀ. ರಸ್ತೆಯನ್ನು ನವೀಕರಣ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬದಲಿ ಮಾಗರ್ಗ ಅನುಸರಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಲಘು ವಾಹನಗಳು ಬೆಳಗಾವಿ-ಚಂದಗಡ್-ಅಂಬೋಲಿ-ಸಾವಂತವಾಡಿ-ಗೋವಾ ಮಾರ್ಗವನ್ನು  ಬಳಸಬಹುದಾಗಿದ್ದು, ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ನಂ. 54 ಮತ್ತು ಜಾಂಬೋಟಿ-ಚೋರ್ಲಾ ರಾಜ್ಯ ಹೆದ್ದಾರಿ ನಂ. 31 ನ್ನು ಕೂಡ ಬಳಸಬಹುದಾಗಿದೆ. ಆದರೆ ಭಾರೀ ವಾಹನಗಳು ಕಡ್ಡಾಯವಾಗಿ ಬೆಳಗಾವಿ-ಚಂದಗಡ್-ಅಂಬೋಲಿ-ಸಾವಂತವಾಡಿ-ಗೋವಾ ಮಾರ್ಗವನ್ನೇ ಬಳಸಬೇಕೆಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ-ಗೋವಾ ಹೆದ್ದಾರಿ ಬಂದ್‌

Follow Us:
Download App:
  • android
  • ios