Asianet Suvarna News Asianet Suvarna News

ಬೆಂಗಳೂರು: ರಾತ್ರಿ ವೇಳೆ ರಸ್ತೆಗುಂಡಿ ಪರಿಶೀಲನೆಗೆ ಮೇಯರ್‌ ನಿರ್ಧಾರ

ಬೆಂಗಳೂರಿನ ಸುಮ್ಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ ಕಾಣಿಸಿಕೊಂಡ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಇದೀಗ ಮೇಲ್ಸೇತುವೆಗಳ ಅಧ್ಯಯನ ನಡೆಸಿ, ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ನಗರದ ರಸ್ತೆ ಗುಂಡಿ ಮುಚ್ಚಿರುವ ಬಗ್ಗೆ ಬಿಬಿಎಂಬಿ ಆಯುಕ್ತರು ಮತ್ತು ಮೇಯರ್‌ ರಾತ್ರಿ ವೇಳೆ ತಪಾಸಣೆ ನಡೆಸುವುದಕ್ಕೆ ತೀರ್ಮಾನಿಸಿದ್ದಾರೆ.

 

bangalore mayor decides to check potholes in night
Author
Bangalore, First Published Nov 3, 2019, 8:30 AM IST

ಬೆಂಗಳೂರು(ನ.03):  ಬೆಂಗಳೂರಿನ ಸುಮ್ಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ ಕಾಣಿಸಕೊಂಡ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಇದೀಗ ಮೇಲ್ಸೇತುವೆಗಳ ಅಧ್ಯಯನ ನಡೆಸಿ, ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ನಗರದ ರಸ್ತೆ ಗುಂಡಿ ಮುಚ್ಚಿರುವ ಬಗ್ಗೆ ಬಿಬಿಎಂಬಿ ಆಯುಕ್ತರು ಮತ್ತು ಮೇಯರ್‌ ರಾತ್ರಿ ವೇಳೆ ತಪಾಸಣೆ ನಡೆಸುವುದಕ್ಕೆ ತೀರ್ಮಾನಿಸಿದ್ದಾರೆ.

ನಗರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಈಗಾಗಲೇ ಶೇ.10 ರಷ್ಟುರಸ್ತೆ ಗುಂಡಿಗಳನ್ನು ಭರ್ತಿ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚುವುದಕ್ಕೆ ನೀಡಲಾಗಿರುವ ಗಡುವಿಗೂ ಮುನ್ನವೇ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ.

ಸುಮ್ಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ: 10 ದಿನ ಸಂಚಾರ ನಿಷೇಧ..!

ಅಧಿಕಾರಿಗಳು ರಸ್ತೆ ಗುಂಡಿ ಭರ್ತಿಯ ಬಗ್ಗೆ ಮಾಹಿತಿ ನೀಡಿರುವ ರಸ್ತೆಗಳಲ್ಲಿ ರಾತ್ರಿ ವೇಳೆಯಲ್ಲಿ ಆಯುಕ್ತರೊಂದಿಗೆ ತಪಾಸಣೆ ನಡೆಸಲಾಗುವುದು. ಭಾನುವಾರ ರಾತ್ರಿಯಿಂದ ತಪಾಸಣೆ ಕಾರ್ಯ ಆರಂಭಿಸಲಾಗುವುದು ಎಂದು ಮೇಯರ್‌ ಗೌತಮ್‌ ಕುಮಾರ್‌ ಶನಿವಾರ ಹೇಳಿದ್ದಾರೆ.

ರಸ್ತೆ ಗುಂಡಿ ಮುಚ್ಚಿರುವ ಬಗ್ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿರುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬ್ರಿಡ್ಜ್ ನಲ್ಲಿ ಭಾರೀ ಗುಂಡಿ : ಸಂಚಾರ ಮಾರ್ಗ ಬದಲಾಗಿ ಕಿ.ಮೀವರೆಗೂ ಟ್ರಾಫಿಕ್ ಜಾಮ್

Follow Us:
Download App:
  • android
  • ios