Asianet Suvarna News Asianet Suvarna News

ಐರ್ಲೆಂಡ್‌ಗೆ 146 ರನ್ ಟಾರ್ಗೆಟ್ ನೀಡಿದ ಭಾರತ ವನಿತೆಯರು!

ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಐರ್ಲೆಂಡ್ ನಡುವಿನ ಹೋರಾಟ ರೋಚಕ ಘಟ್ಟ ತಲುಪಿದೆ. ಸೆಮಿಫೈನಲ್ ಪ್ರವೇಶಕ್ಕಾಗಿ ಕಾಯುತ್ತಿರುವ ಟೀಂ ಇಂಡಿಯಾ, ಐರ್ಲೆಂಡ್ ತಂಡಕ್ಕೆ 146 ರನ್ ಟಾರ್ಗೆಟ್ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

Women t20 World cup India Set 146-Run Target vs Ireland
Author
Bengaluru, First Published Nov 15, 2018, 10:16 PM IST

ಗಯಾನ(ನ.15): ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಡಲು ಟೀಂ ಇಂಡಿಯಾ ಹೋರಾಟ ನಡೆಸುತ್ತಿದೆ. ಐರ್ಲೆಂಡ್ ವಿರುದ್ಧ 2ನೇ ಪಂದ್ಯದಲ್ಲಿ ಭಾರತದ ವನಿತೆಯರು ನಿಗಧಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಸಿಡಿಸಿದೆ. ಈ ಮೂಲಕ ಐರ್ಲೆಂಡ್‌ಗೆ 146 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ, ಉತ್ತಮ ಆರಂಭ ಪಡೆಯಿತು. ಸ್ಮೃತಿ ಮಂದನಾ ಹಾಗೂ ಮಿಥಾಲಿ ರಾಜ್ 67 ರನ್ ಜೊತೆಯಾಟ ನೀಡಿದರು. ಆದರೆ ಮಂದನಾ 33 ರನ್ ಸಿಡಿಸಿ ಔಟಾದರು. ಆದರೆ ಜೆಮೈ ರೋಡ್ರಿಗ್ರಸ್ 18 ರನ್ ಸಿಡಿಸಿ ಔಟಾದರು.

ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಭಾರತ ಮಹಿಳಾ ತಂಡ ದಿಢೀರ್ ಕುಸಿತ ಕಂಡಿತು. ನಾಯಕಿ ಹರ್ಮನ್‌ಪ್ರೀತ್ ಕೌರ್, ಕನ್ನಡತಿ ವೇದಾ ಕೃಷ್ಣಮೂರ್ತಿ ಅಬ್ಬರಿಸಲಿಲ್ಲ. ಆದರೆ ಏಕಾಂಗಿ ಹೋರಾಟ ನೀಡಿದ ಮಿಥಾಲಿ ಅರ್ಧಶತಕ ದಾಖಲಿಸಿದರು.

ದಯಾಲನ್ ಹೇಮಲತಾ 4 ರನ್ ಸಿಡಿಸಿ ಔಟಾದರೆ, ದೀಪ್ತಿ ಶರ್ಮಾ ಅಜೇಯ 11 ರನ್ ಸಿಡಿಸಿದರು. ಈ ಮೂಲಕ ಭಾರತ 6 ವಿಕೆಟ್ ನಷ್ಟಕ್ಕೆ 145 ರನ್ ಸಿಡಿಸಿತು.  ಇದೀಗ ಐರ್ಲೆಂಡ್ ಗೆಲುವಿಗೆ 146 ರನ್ ಟಾರ್ಗೆಟ್ ನೀಡಿದೆ.
 

Follow Us:
Download App:
  • android
  • ios