Asianet Suvarna News Asianet Suvarna News

ಮಂಕಡ್ ರನೌಟ್ ಅಂದ್ರೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

12 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 'ಮಂಕಂಡ್ ರನೌಟ್' ಸಾಕ್ಷಿಯಾಗಿದೆ. ಆದರೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಈ ರೀತಿಯ ರನೌಟ್ ಇದೇ ಮೊದಲೇನಲ್ಲ. ಅಷ್ಟಕ್ಕೂ ಮಂಕಡಿಂಗ್ ರನೌಟ್ ಅಂದರೇನು.? ಈ ಕುರಿತಾದ ಸವಿಸ್ತಾರವಾದ ವರದಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

What is mankading run out Here is Complete list of mankading since 1947
Author
Bengaluru, First Published Mar 26, 2019, 6:33 PM IST

ಬೆಂಗಳೂರು[ಮಾ.26]: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಮಾಡಿದ ಮಂಕಡ್ ರನೌಟ್ ಇದೀಗ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್’ಮನ್ ಜೋಸ್ ಬಟ್ಲರ್ ರನೌಟ್ ಇದೀಗ ಸಾಕಷ್ಟು ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.

ಬಟ್ಲರ್ ರನೌಟ್: ಅಶ್ವಿನ್ ಮೇಲೆ ಕಿಡಿಕಾರಿದ ಪಾಕ್ ಕ್ರಿಕೆಟಿಗ..!

ಕೆಲವರು ಅಶ್ವಿನ್ ಕ್ರೀಡಾ ನಿಯಮಕ್ಕೆ ತಕ್ಕಂತೆ ನಡೆದುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರೆ, ಮತ್ತೆ ಕೆಲವರು ಅಶ್ವಿನ್ ಕ್ರೀಡಾಸ್ಫೂರ್ತಿಯಿಂದ ನಡೆದುಕೊಂಡಿಲ್ಲ ಎಂದು ಟೀಕೆಯ ಮಳೆ ಸುರಿಸಿದ್ದಾರೆ. ಪಂದ್ಯ ಮುಕ್ತಾಯವಾದ ಬಳಿಕ ಮಾತನಾಡಿದ್ದ ಅಶ್ವಿನ್ ಇದು ಸಹಜ ಕ್ರಿಯೆ ಎಂದು ತಾವು ಮಾಡಿದ ರನೌಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಆರ್ ಅಶ್ವಿನ್ ಮಂಕಡಿಂಗ್ ರನೌಟ್- ಟ್ವಿಟರ್‌ನಲ್ಲಿ ಶುರುವಾಯ್ತು ವಾರ್!

12 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 'ಮಂಕಂಡ್ ರನೌಟ್' ಸಾಕ್ಷಿಯಾಗಿದೆ. ಆದರೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಈ ರೀತಿಯ ರನೌಟ್ ಇದೇ ಮೊದಲೇನಲ್ಲ. ಅಷ್ಟಕ್ಕೂ ಮಂಕಡಿಂಗ್ ರನೌಟ್ ಅಂದರೇನು.? ಈ ಕುರಿತಾದ ಸವಿಸ್ತಾರವಾದ ವರದಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಏನಿದು ಮಂಕಡ್ ರನೌಟ್..?

ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕರ್’ನಲ್ಲಿರುವ ಬ್ಯಾಟ್ಸ್’ಮನ್ ಕ್ರೀಸ್ ತೊರೆದಾಗ ವಿಕೆಟ್ ಎಗರಿಸಿ ರನೌಟ್’ಗೆ ಗುರಿಪಡಿಸುವುದನ್ನು ಮೊದಲು ಪರಿಚಯಿಸಿದ್ದೇ ಭಾರತೀಯ ಎಡಗೈ ಕ್ರಿಕೆಟಿಗ ವಿನೂ ಮಂಕಂಡ್. ಹೀಗಾಗಿ ಈ ರೀತಿಯ ರನೌಟ್ ಅನ್ನು ಮಂಕಡಿಂಗ್ ರನೌಟ್ ಎಂದೇ ಚಿರಪರಿಚಿತವಾಗಿದೆ.

ಮೊದಲು ಯಾವಾಗ..?

1947ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವಿನೂ ಮಂಕಡ್ ಆಸ್ಟ್ರೇಲಿಯಾದ ಬಿಲ್ ಬ್ರೌನ್ ಅವರನ್ನು ರನೌಟ್ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದರು. 
ಸಾಕಷ್ಟು ಸಂದರ್ಭಗಳಲ್ಲಿ ಬೌಲರ್’ಗಳು ನಾನ್ ಸ್ಟ್ರೈಕರ್’ನಲ್ಲಿರುವ ಬ್ಯಾಟ್ಸ್’ಮನ್’ಗಳಿಗೆ ಮೊದಲು ಅಂಪೈರ್ ಮೂಲಕ ಎಚ್ಚರಿಕೆ ರವಾನಿಸುತ್ತಿದ್ದರು. ಆ ಬಳಿಕವೂ ಬೌಲಿಂಗ್ ಮಾಡುವ ಮುನ್ನ ಬ್ಯಾಟ್ಸ್’ಮನ್ ಕ್ರೀಸ್ ತೊರೆದರೆ ಮಂಕಡಿಂಗ್ ರನೌಟ್ ಮಾಡುತ್ತಿದ್ದರು. ಆದರೆ ಅಶ್ವಿನ್ ಆ ರೀತಿ ಮಾಡದೇ ರನೌಟ್ ಮಾಡಿರುವ ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ.

2012ರಲ್ಲಿ ಭಾರತ-ಶ್ರೀಲಂಕಾ ನಡುವೆ ನಡೆದ ಏಕದಿನ ಪಂದ್ಯದಲ್ಲೂ ಅಶ್ವಿನ್ ಮಂಕಡಿಂಗ್ ರನೌಟ್ ಮಾಡಿದ್ದರು. ಲಂಕಾದ ಬ್ಯಾಟ್ಸ್’ಮನ್ ಲಹೀರು ತಿರುಮನ್ನೆ ಅವರನ್ನು ಮಂಕಡಿಂಗ್ ಮಾಡಿ ಅಂಪೈರ್’ಗೆ ಮನವಿ ಸಲ್ಲಿಸಿದ್ದರು. ಆದರೆ ಹಂಗಾಮಿ ನಾಯಕರಾಗಿದ್ದ ವಿರೇಂದ್ರ ಸೆಹ್ವಾಗ್ ಅಂಪೈರ್ ಮನವಿಯನ್ನು ಹಿಂಪಡೆದಿದ್ದರು. 

1947ರಲ್ಲಿ ವಿನೂ ಮಂಕಡ್ ಮಾಡಿದ ಔಟ್ ಅನ್ನು ಆಸಿಸ್ ಮಾಧ್ಯಮಗಳು ಟೀಕಿಸಿದ್ದವು. ಆಗ ಆಸ್ಟ್ರೇಲಿಯಾ ನಾಯಕ ಡಾನ್ ಬ್ರಾಡ್ಮನ್ ಭಾರತೀಯ ಕ್ರಿಕೆಟಿಗನ್ನು ಸಮರ್ಥಿಸಿಕೊಂಡಿದ್ದರು.
ಈ ಮಾಧ್ಯಮಗಳು ಯಾಕೆ ಹೀಗೆ ಟೀಕೆ ವ್ಯಕ್ತಪಡಿಸುತ್ತಾವೆ ಎಂದು ತಿಳಿಯುತ್ತಿಲ್ಲ. ಬೌಲರ್ ಬೌಲಿಂಗ್ ಮಾಡುವ ಮುನ್ನ ಬ್ಯಾಟ್ಸ್’ಮನ್ ಕ್ರೀಸ್’ನಲ್ಲೇ ಇರಬೇಕು ಎಂದು ಸ್ಪಷ್ಟವಾಗಿ ಕ್ರಿಕೆಟ್ ನಿಯಮ ಹೇಳುತ್ತದೆ. ಇದು ಪಾಲಿಸದೇ ಹೋದರೆ ಬ್ಯಾಟ್ಸ್’ಮನ್’ಗೆ ನ್ಯಾಯೋಚಿತವಲ್ಲದ ಅನುಕೂಲ ದೊರೆಯುತ್ತದೆ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಡಾನ್ ಬ್ರಾಡ್ಮನ್ ಬರೆದುಕೊಂಡಿದ್ದರು.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮಂಕಡ್ ವಿಕೆಟ್ ಇತಿಹಾಸ:

ಟೆಸ್ಟ್ ಕ್ರಿಕೆಟ್

* 1. ಬಿಲ್ ಬ್ರೌನ್[Aus] by ವಿನೂ ಮಮಕಡ್[Ind]- ಸಿಡ್ನಿ[1974]  

* 2. ಇಯಾನ್ ರೆಡ್’ಪಾತ್[Aus] by ಚಾರ್ಲಿ ಗ್ರಿಫಿತ್[WI]- ಅಡಿಲೇಡ್[1969]

* 3. ಡೆರೆಕ್ ರಂಡಲ್[Eng] by ಎವೆನ್ ಚಾಟ್’ಫೀಲ್ಡ್[NZ]- ಕ್ರಿಸ್ಟ್’ಚರ್ಚ್[1978]

* 4. ಸಿಖಂದರ್ ಭಕ್ತ್[Pak] by ಅಲನ್ ಹರ್ಸ್ಟ್[Aus]- ಪರ್ತ್[1979]

ಏಕದಿನ ಕ್ರಿಕೆಟ್:

* 5 ಬ್ರಿಯಾನ್ ಲೂಕ್’ಹರ್ಸ್ಟ್[Eng] by ಗ್ರೇಗ್ ಚಾಪೆಲ್[Aus]- ಮೆಲ್ಬೋರ್ನ್[1975]

* 6 ಗ್ರ್ಯಾಂಟ್ ಫ್ಲವರ್[Zim] by ದೀಪಕ್ ಪಟೇಲ್[NZ]- ಹರಾರೆ[1992]

* 7 ಪೀಟರ್ ಕ್ರಿಸ್ಟನ್[SA] by ಕಪಿಲ್ ದೇವ್[Ind]- ಪೋರ್ಟ್ ಎಲಿಜಬೆತ್[1992]

* 8 ಜೋಸ್ ಬಟ್ಲರ್[Eng] by ಸುಚಿತ್ರ ಸೆನನಾಯಕೆ[SL]- ಬರ್ಮಿಂಗ್’ಹ್ಯಾಮ್[2014]

ಇತರೆ ಕ್ರಿಕೆಟ್’ನಲ್ಲಿ:

ಅಂಡರ್ 19 ಕ್ರಿಕೆಟ್ ವಿಶ್ವಕಪ್ 2016
* ರಿಚರ್ಡ್ ಗುರವಾ[Zim] by ಕೀಮೋ ಪೌಲ್[WI]- ಚಿತ್ತಗಾಂಗ್[2016]

BCCI ಮಹಿಳಾ ಅಂಡರ್ 19 ಟೂರ್ನಮೆಂಟ್
* ಅಂಬಿಕ ದೇಬ್’ನಾಥ್[ತ್ರಿಪುರ] by ಇಕ್ರಾ ರಸೂಲ್[ಜಮ್ಮು ಮತ್ತು ಕಾಶ್ಮೀರ]- ಪಣಜಿ[2019]

ವಿನೂ ಮಂಕಡ್ ಟ್ರೋಫಿ
* ದಿನೇಶ್ ದಾಸ್[ಅಸ್ಸಾಂ] by ಪಂಕಜ್ ಯಾದವ್[ಜಾರ್ಖಂಡ್]- ಸೂರತ್[2018]

ರಣಜಿ ಟ್ರೋಫಿ
* ಸಂದೀಪನ್ ದಾಸ್[ಅಸ್ಸಾಂ] by ಮುರುಳಿ ಕಾರ್ತಿಕ್[ರೈಲ್ವೇಸ್]- ಡೆಲ್ಲಿ[2013]

ಇಂಗ್ಲೆಂಡ್ ಕೌಂಟಿ ಚಾಂಪಿಯನ್’ಶಿಪ್
* ಆಲೆಕ್ಸ್ ಬಾರೋ[ಸೋಮರ್’ಸೆಟ್] by ಮುರುಳಿ ಕಾರ್ತಿಕ್[ಸರ್ರೆ]- ಟೌನ್’ಟನ್[2012]
 

Follow Us:
Download App:
  • android
  • ios