Asianet Suvarna News Asianet Suvarna News

ವಿಶ್ವಕಪ್‌ಗೂ ಮುನ್ನ ವಿಂಡೀಸ್‌ ಕೋಚ್‌'ಗೆ ಗೇಟ್’ಪಾಸ್..!

ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್ ತಂಡದ ಕೋಚ್’ಗೆ ಗೇಟ್’ಪಾಸ್ ನೀಡಲಾಗಿದೆ. ಏನಿದು ಸ್ಟೋರಿ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್ 

West Indies Cricket Richard Pybus replaced as head coach by Floyd Reifer
Author
Antigua Guatemala, First Published Apr 13, 2019, 1:39 PM IST

ಆ್ಯಂಟಿಗಾ[ಏ.13]: ಐಸಿಸಿ ಏಕದಿನ ವಿಶ್ವಕಪ್‌ಗೆ ಕೇವಲ 7 ವಾರಗಳು ಬಾಕಿ ಇದ್ದು, ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ಮಂಡಳಿ ತಂಡ ಪ್ರಧಾನ ಕೋಚ್‌ ರಿಚರ್ಡ್‌ ಪೈಬಸ್‌ರನ್ನು ವಜಾಗೊಳಿಸಿದೆ. 
ಫ್ಲಾಯ್ಡ್‌ ರೀಫರ್‌ ಹಂಗಾಮಿ ಕೋಚ್‌ ಆಗಿ ನೇಮಕಗೊಳ್ಳಲಿದ್ದಾರೆ. ಇದೇ ವೇಳೆ ಆಯ್ಕೆ ಸಮಿತಿ ಮುಖ್ಯಸ್ಥ ಕಟ್ರ್ನಿ ಬ್ರೌನ್‌ರನ್ನೂ ವಜಾಗೊಳಿಸಿದ್ದು ಅವರ ಸ್ಥಾನವನ್ನು ರಾಬರ್ಟ್‌ ಹೇಯ್ನ್ಸ್’ಗೆ ನೀಡಲಾಗಿದೆ. 

ಪಾಂಟಿಂಗ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಸರಿಗಟ್ಟಿದ ಗೇಲ್..!

ಹಿರಿಯ ಆಟಗಾರರು ತಂಡದಿಂದ ದೂರ ಉಳಿಯಲು ಪೈಬಸ್‌ರೊಂದಿಗಿನ ಮನಸ್ತಾಪವೇ ಕಾರಣ ಎನ್ನಲಾಗಿತ್ತು. ಇದೀಗ ಪೈಬಸ್‌ ಹೊರಬಿದ್ದಿರುವುದರಿಂದ ವಿಶ್ವಕಪ್‌ ತಂಡದಲ್ಲಿ ಬ್ರಾವೋ, ಪೊಲ್ಲಾರ್ಡ್‌, ರಸೆಲ್‌, ನರೈನ್‌ ಸೇರಿದಂತೆ ಇನ್ನೂ ಹಲವು ಹಿರಿಯ ಆಟಗಾರರು ಸ್ಥಾನ ಪಡೆಯುವ ನಿರೀಕ್ಷೆ ಇದೆ.

ವಿಶ್ವಕಪ್ 2019: ಏ.15ಕ್ಕೆ ಟೀಂ ಇಂಡಿಯಾ ಪ್ರಕಟ!

ಇಂಗ್ಲೆಂಡ್ ಮೂಲದ 54 ವರ್ಷದ ರಿಚರ್ಡ್‌ ಪೈಬಸ್‌ ಮಾರ್ಗದರ್ಶನದಲ್ಲಿ ವೆಸ್ಟ್ ಇಂಡೀಸ್ ತಂಡವು 2-1 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿತ್ತು. ಮೇ 31ರಂದು ವೆಸ್ಟ್ ಇಂಡೀಸ್ ತಂಡವು ಟ್ರೆಂಟ್ ಬ್ರಿಡ್ಜ್’ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios