Asianet Suvarna News Asianet Suvarna News

ಏಷ್ಯನ್‌ ಗೇಮ್ಸ್‌ಗೆ ಚೆಸ್‌ ವಾಪಸ್‌; ವಿಶ್ವನಾಥನ್ ಆನಂದ್ ಸಂತಸ

ಕಳೆದೆರಡು ಏಷ್ಯನ್ ಗೇಮ್ಸ್’ನಲ್ಲಿ ಚೆಸ್ ಕ್ರೀಡೆಯನ್ನು ಟೂರ್ನಿಯಲ್ಲಿ ಕೈಬಿಡಲಾಗಿತ್ತು. ಇದೀಗ ಮುಂಬರುವ ಏಷ್ಯಾಡ್’ಗೆ ಚೆಸ್ ಸೇರ್ಪಡೆಗೊಂಡಿದೆ. 

Viswanathan Anand delighted at chess return in Asian Games
Author
New Delhi, First Published Mar 18, 2019, 2:16 PM IST

ಚೆನ್ನೈ[ಮಾ.18]: ಏಷ್ಯನ್‌ ಗೇಮ್ಸ್‌ಗೆ ಚೆಸ್‌ ವಾಪಸಾಗಿದೆ. 2022ರಲ್ಲಿ ಚೀನಾದ ಹ್ಯಾಂಗ್ಝುನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಚೆಸ್‌ ನಡೆಯಲಿದೆ ಎಂದು ಏಷ್ಯನ್‌ ಒಲಿಂಪಿಕ್‌ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ. 

2 ವರ್ಷ ಶಾಲೆಗೇ ಹೋಗದವ ಗ್ರ್ಯಾಂಡ್‌ಮಾಸ್ಟರ್‌!

2006ರ ದೋಹಾ ಹಾಗೂ 2010ರ ಗುವಾಂಗ್ಝು ಏಷ್ಯಾಡ್‌ನಲ್ಲಿ ಚೆಸ್‌ ಇತ್ತು. 2006ರಲ್ಲಿ ಭಾರತ 2 ಚಿನ್ನ ಜಯಿಸಿದರೆ, 2010ರಲ್ಲಿ 2 ಕಂಚಿನ ಪದಕ ಗಳಿಸಿತ್ತು. 2014 ಹಾಗೂ 2018ರ ಏಷ್ಯನ್‌ ಗೇಮ್ಸ್‌ಗಳಲ್ಲಿ ಚೆಸ್‌ ಸ್ಪರ್ಧೆ ನಡೆದಿರಲಿಲ್ಲ. 

ಮುಂದಿನ ಏಷ್ಯನ್‌ ಗೇಮ್ಸ್‌ನಲ್ಲಿ ಚೆಸ್‌ ಸೇರ್ಪಡೆಗೊಳಿಸಿದ್ದಕ್ಕೆ 5 ಬಾರಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಸೇರಿ ಭಾರತದ ಅಗ್ರ ಚೆಸ್‌ ಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ. ‘ಈ ಬೆಳವಣಿಗೆ ಸಂತಸ ಮೂಡಿಸಿದೆ. ಭಾರತ ತಂಡ ಪದಕ ಗೆಲ್ಲಲಿದೆ ಎನ್ನುವ ಭರವಸೆ ಇದೆ’ ಎಂದು ಆನಂದ್‌ ಹೇಳಿದ್ದಾರೆ.

Follow Us:
Download App:
  • android
  • ios