Asianet Suvarna News Asianet Suvarna News

ವಿಜಯ್ ಹಜಾರೆ ಟ್ರೋಫಿ: ದೆಹಲಿ ಮಣಿಸಿ ಪ್ರಶಸ್ತಿ ಗೆದ್ದ ಮುಂಬೈ!

ದೆಹಲಿ ಹಾಗೂ ಮುಂಬೈ ನಡುವಿನ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯ ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿತು. ರೋಚಕ ಹೋರಾಟದಲ್ಲಿ ಮುಂಬೈ ಗೆಲುವಿನ ನಗೆ ಬೀರಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

Vijay Hazare Trophy Mumbai beat Delhi by 4 wickets
Author
Bengaluru, First Published Oct 20, 2018, 9:08 PM IST

ಬೆಂಗಳೂರು(ಅ.20): ವಿಜಯ್ ಹಜಾರೆ ಟೂರ್ನಿ ರೋಚಕ ಪಂದ್ಯದೊಂದಿಗೆ ಅಂತ್ಯಗೊಂಡಿದೆ. ದೆಹಲಿ ವಿರುದ್ಧದ ಫೈನಲ್ ಪಂದ್ಯದಲ್ಲಿ ಮುಂಬೈ 4 ವಿಕೆಟ್ ಗೆಲುವು ದಾಖಲಿಸಿತು. ಈ ಮೂಲಕ 2018ರ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ  ಗೌತಮ್ ಗಂಭೀರ್ ನಾಯಕತ್ವದ ದೆಹಲಿ ತಂಡ 45.4 ಓವರ್‌ಗಳಲ್ಲಿ 177 ರನ್  ಸಿಡಿಸಿತು. ಧವಳ್ ಕುಲಕರ್ಣಿ ಹಾಗೂ ಶಿವಂ ದುಬೆ ಮಾರಕ ದಾಳಿಯಿಂದ ದೆಹಲಿ ತತ್ತರಿಸಿತು. ಗಂಭೀರ್ ಕೇವಲ 1 ರನ್ ಸಿಡಿಸಿ ಔಟಾದರೆ, ಉನ್ಮುಕ್ತ್ ಚಾಂದ್ 13 ರನ್‌ಗೆ ಸುಸ್ತಾದರು.

ಹಿಮ್ಮತ್ ಸಿಂಗ್ ಸಿಡಿಸಿದ 41 ರನ್ ಹಾಗೂ ಧ್ರುವ್ ಶೊರೆಯ್ ಸಿಡಿಸಿದ 31 ರನ್ ಕಾಣಿಕೆಯಿಂದ 177ರನ್ ಸಿಡಿಸಿ ಆಲೌಟ್ ಆಯಿತು.  ಈ ಗುರಿ ಬೆನ್ಟಟ್ಟಿದ ಮುಂಬೈ ಕೂಡ ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಪೃಥ್ವಿ ಶಾ 8, ಅಜಿಂಕ್ಯ ರಹಾನೆ 10, ಶ್ರೇಯಸ್ ಅಯ್ಯರ್ 7, ಸೂರ್ಯಕುಮಾರ್ ಯಾದವ್ 4 ರನ್ ಸಿಡಿಸಿ ಔಟಾದರು.

ಸಿದ್ದೇಶ್ ಲಾಡ್ 48 ರನ್, ಆದಿತ್ಯ ತಾರೆ 78  ರನ್ ಸಿಡಿಸೋ ಮೂಲಕ ಮುಂಬೈ 35 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಮೂಲಕ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿತು.

Follow Us:
Download App:
  • android
  • ios