Asianet Suvarna News Asianet Suvarna News

ವಿಜಯ್ ಹಜಾರೆ ಟೂರ್ನಿ: ರಾಜ್ಯಕ್ಕೆ ಶುಭಾ​ರಂಭದ ಗುರಿ

2019-20ನೇ ಸಾಲಿನ ವಿಜಯ್ ಹಜಾರೆ ಟೂರ್ನಿ ಇಂದಿನಿಂದ ಆರಂಭವಾಗಿದೆ. ಕರ್ನಾಟಕ ತಂಡವು ಬೆಂಗಳೂರಿನ ಆಲೂರು ಮೈದಾನದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲು ಸಜ್ಜಾಗಿದ್ದು, ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ

Vijay Hazare Trophy 2019 Karnataka eye on Winning Start
Author
Bengaluru, First Published Sep 24, 2019, 10:31 AM IST

ಬೆಂಗ​ಳೂ​ರು[ಸೆ.24]: 2019-20ರ ದೇಸಿ ಕ್ರಿಕೆಟ್‌ ಋುತು​ಗೆ ಚಾಲನೆ ಸಿಕ್ಕಿದ್ದು, ಮಂಗ​ಳ​ವಾರದಿಂದ ವಿಜಯ್‌ ಹಜಾರೆ ರಾಷ್ಟ್ರೀಯ ಏಕ​ದಿನ ಟೂರ್ನಿ ಆರಂಭ​ಗೊ​ಳ್ಳ​ಲಿದೆ. ಒಟ್ಟು 38 ತಂಡ​ಗಳು ಸೆಣ​ಸ​ಲಿ​ರುವ ಟೂರ್ನಿಯಲ್ಲಿ 169 ಪಂದ್ಯ​ಗಳು ನಡೆ​ಯ​ಲಿವೆ. ಟೂರ್ನಿ ಒಂದು ತಿಂಗಳ ಕಾಲ ನಡೆ​ಯ​ಲಿದ್ದು, ಅ.25ರಂದು ಫೈನಲ್‌ ನಡೆ​ಯ​ಲಿದೆ.

38 ತಂಡ​ಗಳನ್ನು 4 ಗುಂಪು​ಗ​ಳ​ನ್ನಾಗಿ ವಿಂಗ​ಡಿ​ಸ​ಲಾ​ಗಿದೆ. ಎಲೈಟ್‌ ‘ಎ’, ‘ಬಿ’, ‘ಸಿ’ ಹಾಗೂ ಪ್ಲೇಟ್‌ ಗುಂಪು​ಗ​ಳಲ್ಲಿ ತಂಡಗಳಿಗೆ ಸ್ಥಾನ ನೀಡ​ಲಾ​ಗಿದೆ. ‘ಎ’ ಹಾಗೂ ‘ಬಿ’ ಗುಂಪಿ​ನಲ್ಲಿ ತಲಾ 9 ತಂಡ​ಗ​ಳಿದ್ದು, ‘ಸಿ’ ಹಾಗೂ ಪ್ಲೇಟ್‌ ಗುಂಪಿ​ನಲ್ಲಿ ತಲಾ 10 ತಂಡ​ಗ​ಳಿವೆ. ಪ್ರತಿ ತಂಡ ಗುಂಪಿ​ನ​ಲ್ಲಿ​ರುವ ಇನ್ನು​ಳಿದ ತಂಡ​ಗಳ ವಿರುದ್ಧ ಪಂದ್ಯ​ಗ​ಳನ್ನು ಆಡ​ಲಿದೆ.

ಸ್ಫೋಟಕ ಹೊಡೆತ; ಕೂದಲೆಳೆಯುವ ಅಂತರದಲ್ಲಿ ಬೌಲರ್ ಪಾರು!

‘ಎ’ ಹಾಗೂ ‘ಬಿ’ ಗುಂಪು ಸೇರಿ ಅಗ್ರ 5 ಸ್ಥಾನ​ಗ​ಳನ್ನು ಪಡೆ​ಯುವ ತಂಡಗಳು, ‘ಸಿ’ ಗುಂಪಿ​ನಿಂದ ಅಗ್ರ 2 ಹಾಗೂ ಪ್ಲೇಟ್‌ ಗುಂಪಿನಲ್ಲಿ ಅಗ್ರ​ಸ್ಥಾನ ಪಡೆ​ಯುವ ತಂಡ​ಗಳು ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸ​ಲಿವೆ. ಇದೇ ಮೊದಲ ಬಾರಿಗೆ ಚಂಡೀ​ಗಢ ತಂಡ ಟೂರ್ನಿ​ಯಲ್ಲಿ ಸ್ಪರ್ಧಿ​ಸು​ತ್ತಿದೆ.

ಬೆಂಗ​ಳೂರಲ್ಲಿ ‘ಎ’ ಗುಂಪಿ​ನ ಪಂದ್ಯ​ಗಳು ನಡೆ​ದರೆ, ವಡೋ​ದರಾದಲ್ಲಿ ‘ಬಿ’ ಗುಂಪಿನ ಪಂದ್ಯ​ಗಳು ನಡೆ​ಯ​ಲಿವೆ. ‘ಸಿ’ ಗುಂಪಿನ ಪಂದ್ಯ​ಗ​ಳಿಗೆ ಜೈಪುರ ಆತಿಥ್ಯ ನೀಡಿ​ದರೆ, ಪ್ಲೇಟ್‌ ಗುಂಪಿನ ಪಂದ್ಯ​ಗಳು ಡೆಹ್ರಾ​ಡುನ್‌ನಲ್ಲಿ ನಡೆ​ಯ​ಲಿವೆ. ನಾಕೌಟ್‌ ಪಂದ್ಯ​ಗ​ಳು ಬೆಂಗ​ಳೂ​ರಲ್ಲಿ ನಡೆ​ಯ​ಲಿವೆ.

ವಿಜಯ್‌ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ಪರ ಧವನ್‌, ಸೈನಿ ಕಣ​ಕ್ಕೆ

‘ಎ’ ಗುಂಪಿ​ನಲ್ಲಿ ಕರ್ನಾ​ಟಕ

ಕರ್ನಾ​ಟಕ ತಂಡ ಎಲೈಟ್‌ ‘ಎ’ ಗುಂಪಿ​ನಲ್ಲಿ ಸ್ಥಾನ ಪಡೆ​ದಿದ್ದು, ಮಂಗ​ಳ​ವಾರ ತನ್ನ ಮೊದಲ ಪಂದ್ಯ​ದಲ್ಲಿ ಹೈದ​ರಾ​ಬಾದ್‌ ತಂಡ​ವನ್ನು ಎದು​ರಿ​ಸ​ಲಿದೆ. ಪಂದ್ಯ ನಗ​ರದ ಹೊರವಲ​ಯ​ದ​ಲ್ಲಿ​ರುವ ಆಲೂರು ಕ್ರಿಕೆಟ್‌ ಮೈದಾ​ನ​ದಲ್ಲಿ ನಡೆ​ಯ​ಲಿದೆ. 15 ವರ್ಷಗಳ ಬಳಿಕ ಮೊದಲ ಬಾರಿಗೆ ಕರ್ನಾ​ಟಕ ತಂಡ ಆರ್‌.ವಿ​ನಯ್‌ ಕುಮಾರ್‌ ಇಲ್ಲದೆ ಆಡ​ಲಿದೆ. ವಿನಯ್‌ ಈ ಬಾರಿ ಪುದು​ಚೇರಿ ತಂಡಕ್ಕೆ ವಲಸೆ ಹೋಗಿದ್ದು, ತಂಡ​ವನ್ನು ಮುನ್ನಡೆಸುವ ಹೊಣೆ ಮನೀಶ್‌ ಪಾಂಡೆ ಹೆಗ​ಲಿಗೆ ಬಿದ್ದಿದೆ.

ವಿನಯ್‌ರಂತಹ ಅನು​ಭವಿ ಆಟ​ಗಾರನ ಅನು​ಪ​ಸ್ಥಿತಿ ತಂಡಕ್ಕೆ ಕಾಡ​ಲಿದೆಯಾದರೂ, ರೋನಿತ್‌ ಮೋರೆ, ಪ್ರಸಿದ್ದ್ ಕೃಷ್ಣ, ವಿ.ಕೌ​ಶಿಕ್‌ ಹಾಗೂ ಅಭಿ​ಮನ್ಯು ಮಿಥುನ್‌ ತಂಡ​ದ​ಲ್ಲಿ​ರುವ ಕಾರಣ, ಬೌಲಿಂಗ್‌ನಲ್ಲಿ ಹೆಚ್ಚಿನ ಸಮಸ್ಯೆ ಉಂಟಾ​ಗು​ವು​ದಿಲ್ಲ.

ವಿಜಯ್ ಹಜಾರೆ ಟ್ರೋಫಿ: ರಾಹುಲ್ ಸತ್ವ ಪರೀಕ್ಷೆಗೆ ವೇದಿಕೆ ರೆಡಿ

ಪಾಂಡೆ ಹಾಗೂ ಕೆ.ಎಲ್‌.ರಾ​ಹುಲ್‌ ಎಲ್ಲಾ ಪಂದ್ಯ​ಗ​ಳಿಗೆ ಲಭ್ಯ​ರಿದ್ದು, ತಂಡದ ಬ್ಯಾಟಿಂಗ್‌ ಬಲ ಹೆಚ್ಚಿ​ಸ​ಲಿ​ದ್ದಾರೆ. ದೇವ​ದತ್ ಪಡಿ​ಕ್ಕಲ್‌, ಕೆ.ವಿ.ಸಿ​ದ್ಧಾರ್ಥ್ ಉತ್ತಮ ಲಯ​ದ​ಲ್ಲಿದ್ದು, ಅಭಿ​ಷೇಕ್‌ ರೆಡ್ಡಿ ಹಾಗೂ ಪವನ್‌ ದೇಶ​ಪಾಂಡೆ ಉಪ​ಸ್ಥಿ​ತಿ​ಯಿಂದ ತಂಡದ ಬ್ಯಾಟಿಂಗ್‌ ಬಲಿ​ಷ್ಠ​ವಾಗಿ ತೋರು​ತ್ತಿದೆ. ಶ್ರೇಯಸ್‌ ಗೋಪಾಲ್‌, ಜೆ.ಸು​ಚಿತ್‌, ಪ್ರವೀಣ್‌ ದುಬೆ ಸ್ಪಿನ್‌ ಬೌಲರ್‌ಗಳಾಗಿ ತಂಡ​ದಲ್ಲಿದ್ದಾರೆ.

‘ಎ’ ಗುಂಪಿ​ನಲ್ಲಿ ಹಾಲಿ ಚಾಂಪಿ​ಯನ್‌ ಮುಂಬೈ, ಕಳೆದ ಬಾರಿ ಸೆಮೀಸ್‌ ಪ್ರವೇ​ಶಿ​ಸಿದ್ದ ಜಾರ್ಖಂಡ್‌, ಸೌರಾಷ್ಟ್ರ, ಆಂಧ್ರ, ಕೇರಳ, ಗೋವಾ, ಛತ್ತೀಸ್‌ಗಢ ಹಾಗೂ ಹೈದ​ರಾ​ಬಾದ್‌ ತಂಡ​ಗಳಿವೆ. ‘ಎ’ ಹಾಗೂ ‘ಬಿ’ ಗುಂಪಿ​ನ​ಲ್ಲಿ​ರುವ ಒಟ್ಟು 18 ತಂಡ​ಗಳ ಪೈಕಿ ಕೇವಲ 5 ತಂಡ​ಗಳಿಗೆ ಮಾತ್ರ ಕ್ವಾರ್ಟರ್‌ ಫೈನ​ಲ್‌ ಪ್ರವೇ​ಶಿ​ಸಲು ಅವ​ಕಾ​ಶ​ವಿದ್ದು, ಯಾವುದೇ ತಪ್ಪು​ಗ​ಳಿಗೆ ಅವ​ಕಾ​ಶ​ವಿ​ರು​ವು​ದಿಲ್ಲ.

ಮಳೆ ಭೀತಿ: ‘ಎ’ ಗುಂಪಿನ ಪಂದ್ಯ​ಗಳು ಬೆಂಗ​ಳೂ​ರಲ್ಲಿ ನಡೆ​ಯ​ಲಿದ್ದು, ಮಳೆ ಭೀತಿ ಎದು​ರಾ​ಗಿದೆ. ಸೋಮವಾರ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿ​ರ​ಲಿದ್ದು, ಪಂದ್ಯ​ಗ​ಳು ತಡ​ವಾಗಿ ಆರಂಭ​ಗೊ​ಳ್ಳುವ ಸಾಧ್ಯತೆ ಇದೆ. ಮಂಗ​ಳ​ವಾರವೂ ಮಳೆ ಮುನ್ಸೂ​ಚನೆ ಇರುವ ಕಾರಣ, ಪಂದ್ಯ ಪೂರ್ಣ​ಗೊ​ಳ್ಳು​ವುದು ಅನು​ಮಾ​ನ​ವೆ​ನಿ​ಸಿದೆ.

ಕರ್ನಾ​ಟ​ಕದ ವೇಳಾ​ಪ​ಟ್ಟಿ

ದಿನಾಂಕ ಎ​ದು​ರಾ​ಳಿ

ಸೆ.24 ಹೈದ​ರಾ​ಬಾದ್‌

ಸೆ.26 ಜಾರ್ಖಂಡ್‌

ಸೆ.28 ಛತ್ತೀಸ್‌ಗಢ

ಸೆ.29 ಮುಂಬೈ

ಅ.3 ಸೌರಾಷ್ಟ್ರ

ಅ.7 ಗೋವಾ

ಅ.9 ಆಂಧ್ರ

ಅ.13 ಕೇರ​ಳ

ವಿನಯ್‌ ತಂಡ​ಕ್ಕಾಗಿ ಸಾಕಷ್ಟು ಕೊಡುಗೆ ನೀಡಿ​ದ್ದಾರೆ. ಅವ​ರಿಂದ ನಾವು ಬಹ​ಳಷ್ಟು ಕಲಿ​ತಿ​ದ್ದೇವೆ. ಆದರೆ ಅವರ ಅನು​ಪ​ಸ್ಥಿತಿ ಕಾಡು​ವು​ದಿಲ್ಲ. ನಮ್ಮ ತಂಡ ಬಲಿ​ಷ್ಠ​ವಾ​ಗಿದೆ. ಅದ್ಭುತ ಪ್ರತಿಭೆಗಳಿ​ದ್ದಾರೆ. ಕಳೆದ ವರ್ಷ ಸಾಂಘಿಕ ಪ್ರದ​ರ್ಶ​ನ​ದಿಂದ ಮುಷ್ತಾಕ್‌ ಅಲಿ 20 ಟೂರ್ನಿ ಗೆದ್ದಿ​ದ್ದೆವು. ಈ ಬಾರಿಯೂ ಒಟ್ಟಿಗೆ ಆಡಬೇ​ಕಿದೆ’.

- ಮನೀಶ್‌ ಪಾಂಡೆ, ಕರ್ನಾ​ಟಕ ತಂಡದ ನಾಯ​ಕ

‘ಕಳೆದ ವರ್ಷ ಕೆಪಿ​ಎಲ್‌ ಮುಗಿದ ಮೂರೇ ದಿನಕ್ಕೆ ವಿಜಯ್‌ ಹಜಾರೆ ಟೂರ್ನಿ ಆರಂಭ​ವಾ​ಗಿತ್ತು. ಹಾಗಾಗಿ ಸರಿ​ಯಾಗಿ ಅಭ್ಯಾಸ ನಡೆ​ಸಲು ಸಾಧ್ಯ​ವಾ​ಗಿ​ರ​ಲಿಲ್ಲ. ಆದರೆ ಈ ವರ್ಷ ಸೆ.10ರಿಂದಲೇ ಅಭ್ಯಾಸ ಆರಂಭಿ​ಸಿ​ದ್ದೇವೆ. ಸವಾ​ಲಿಗೆ ನಾವು ಸಿದ್ಧ​ರಿ​ದ್ದೇವೆ’.

- ಯರ್ರೇ ಗೌಡ್‌, ಕರ್ನಾ​ಟಕ ತಂಡದ ಕೋಚ್‌

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ[ಮಳೆಯ ಅಡಚಣೆ, ತಡವಾಗಿ ಆರಂಭವಾಗುವ ಸಾಧ್ಯತೆ]


 

Follow Us:
Download App:
  • android
  • ios