Asianet Suvarna News Asianet Suvarna News

ಆಸಿಸ್ ನೆಲದಲ್ಲಿ ದಿಗ್ವಿಜಯ: ಕೊಹ್ಲಿ ಬಾಯ್ಸ್ ಗುಣಗಾನ ಮಾಡಿದ ಟ್ವಿಟರಿಗರು

ಸರಣಿಯುದ್ದಕ್ಕೂ ಆಕರ್ಷಕ ಪ್ರದರ್ಶನ ತೋರಿದ ಚೇತೇಶ್ವರ್ ಪೂಜಾರ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು. ಚೇತೇಶ್ವರ್ ಪೂಜಾರ, ರಿಷಭ್ ಪಂತ್, ಮಯಾಂಕ್ ಅಗರ್’ವಾಲ್ ಹಾಗೂ ಜಸ್ಪ್ರೀತ್ ಬುಮ್ರಾ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Twitter reacts to India historic firstever Test series win in Australia
Author
Sydney NSW, First Published Jan 7, 2019, 11:42 AM IST

ಸಿಡ್ನಿ[ಜ.07]: ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಭರ್ಜರಿ ಜಯಭೇರಿ ಬಾರಿಸುವ ಮೂಲಕ 2-1 ಅಂತರದಲ್ಲಿ ಸರಣಿ ಜಯಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಭಾರತ ಹಾಗೂ ಏಷ್ಯಾದ ಮೊದಲ ನಾಯಕ ಎನ್ನುವ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ದಿಗ್ವಿಜಯ- ಚೊಚ್ಚಲ ಸರಣಿ ಜಯ

1947-48ರಿಂದ 2014-15 ಭಾರತ ತಂಡವು ಆಸಿಸ್ ಪ್ರವಾಸದಲ್ಲಿ ಒಮ್ಮೆಯೂ ಟೆಸ್ಟ್ ಸರಣಿ ಗೆಲುವು ಸಾಧಿಸಿರಲಿಲ್ಲ. 1980/81, 1985/86 ಮತ್ತು 2003/04ರಲ್ಲಿ ಭಾರತ ಡ್ರಾ ಸಾಧಿಸಿತ್ತು. ಕಳೆದ ಪ್ರವಾಸದಲ್ಲಂತೂ ಭಾರತ 2-0 ಮುಖಭಂಗ ಅನುಭವಿಸಿತ್ತು. ಸರಣಿಯುದ್ದಕ್ಕೂ ಆಕರ್ಷಕ ಪ್ರದರ್ಶನ ತೋರಿದ ಚೇತೇಶ್ವರ್ ಪೂಜಾರ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು. ಚೇತೇಶ್ವರ್ ಪೂಜಾರ, ರಿಷಭ್ ಪಂತ್, ಮಯಾಂಕ್ ಅಗರ್’ವಾಲ್ ಹಾಗೂ ಜಸ್ಪ್ರೀತ್ ಬುಮ್ರಾ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಟೀಂ ಇಂಡಿಯಾ ಪ್ರದರ್ಶನ ನೋಡಿದ ಟ್ವಿಟರಿಗರು ಏನಂದ್ರು ನೀವೇ ನೋಡಿ... 

Follow Us:
Download App:
  • android
  • ios