Asianet Suvarna News Asianet Suvarna News

ಐಸಿಸಿ ಪ್ರಕಟಿಸಿದ ಬೆಸ್ಟ್ ಟೆಸ್ಟ್ ಮತ್ತು ಒನ್’ಡೇ ತಂಡವಿದು..!

ಐಸಿಸಿ 2018ರ ಶ್ರೇಷ್ಠ ಏಕದಿನ ಹಾಗೂ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದ್ದು, ವಿರಾಟ್ ಕೊಹ್ಲಿಗೆ ನಾಯಕ ಪಟ್ಟ ನೀಡಿದೆ. ಐಸಿಸಿ ಏಕದಿನ ತಂಡದಲ್ಲಿ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಸೇರಿ ಒಟ್ಟು ನಾಲ್ವರು ಭಾರತೀಯರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

The best 2018 Test and One day team announced by ICC
Author
Dubai - United Arab Emirates, First Published Jan 22, 2019, 5:39 PM IST

ದುಬೈ[ಜ.22]: 2018ನೇ ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರಕಟಿಸಲಾಗಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೇಷ್ಠ ಏಕದಿನ ಮತ್ತು ಟೆಸ್ಟ್ ಬ್ಯಾಟ್ಸ್’ಮನ್ ಜತೆಗೆ ವರ್ಷದ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ.

ICC ವಾರ್ಷಿಕ ಪ್ರಶಸ್ತಿ ಪ್ರಕಟ: ಪ್ರಶಸ್ತಿಯಲ್ಲೂ ಕಿಂಗ್ ಕೊಹ್ಲಿ ಕ್ಲೀನ್’ಸ್ವೀಪ್..!

ಇದೇ ವೇಳೆ ಐಸಿಸಿ 2018ರ ಶ್ರೇಷ್ಠ ಏಕದಿನ ಹಾಗೂ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದ್ದು, ವಿರಾಟ್ ಕೊಹ್ಲಿಗೆ ನಾಯಕ ಪಟ್ಟ ನೀಡಿದೆ. ಐಸಿಸಿ ಏಕದಿನ ತಂಡದಲ್ಲಿ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಸೇರಿ ಒಟ್ಟು ನಾಲ್ವರು ಭಾರತೀಯರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಜಾನಿ ಬೈರ್’ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್[WK] ಸ್ಥಾನ ಪಡೆದಿದ್ದಾರೆ. ಇನ್ನು ನ್ಯೂಜಿಲೆಂಡ್ ತಂಡದ ಅನುಭವಿ ಬ್ಯಾಟ್ಸ್’ಮನ್ ರಾಸ್ ಟೇಲರ್[NZ], ಬಾಂಗ್ಲಾದೇಶದ ವೇಗಿ ಮುಷ್ತಾಫಿಜುರ್ ಹಾಗೂ ಆಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಐಸಿಸಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ತಂಡದಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡದ ಯಾವೊಬ್ಬ ಕ್ರಿಕೆಟಿಗನೂ ಸ್ಥಾನ ಪಡೆದಿಲ್ಲ. 

2018 ICC ಏಕದಿನ ತಂಡ:

ಇನ್ನು ಐಸಿಸಿ ಟೆಸ್ಟ್ ತಂಡದಲ್ಲಿ ವಿರಾಟ್ ಜತೆಗೆ ಯುವ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದ ಭಾರತೀಯರೆನಿಸಿದ್ದಾರೆ. ಟೆಸ್ಟ್ ತಂಡದಲ್ಲಿ ನ್ಯೂಜಿಲೆಂಡ್’ನ ಟಾಮ್ ಲಾಥಮ್, ಕೇನ್ ವಿಲಿಯಮ್ಸನ್ ಹಾಗೂ ಹೆನ್ರಿ ನಿಕೋಲಸ್ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ಶ್ರೀಲಂಕಾದ ದಿಮುತ್ ಕರುಣಾರತ್ನೆ, ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್, ದಕ್ಷಿಣ ಆಫ್ರಿಕಾದ ಯುವ ವೇಗಿ ಕಗಿಸೋ ರಬಾಡ, ಆಸಿಸ್ ಆಫ್ ಸ್ಪಿನ್ನರ್ ನೇಥನ್ ಲಯನ್ ಹಾಗೂ ಪಾಕ್ ವೇಗಿ ಮೊಹಮ್ಮದ್ ಅಬ್ಬಾಸ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

2018 ICC ಟೆಸ್ಟ್ ತಂಡ:

Follow Us:
Download App:
  • android
  • ios