Asianet Suvarna News Asianet Suvarna News

ಕ್ರಿಕೆಟ್‌ಗೆ ದಿಢೀರ್‌ ವಿದಾಯ ಹೇಳಿದ ಎರಡೆರಡು ವಿಶ್ವಕಪ್‌ ಹೀರೋ

ಭಾರತ ಕಂಡ ಶ್ರೇಷ್ಠ ಆರಂಭಿಕ, ಟಿ-20, ಏಕದಿನ ಮತ್ತು ಟೆಸ್ಟ್ ಎಲ್ಲದರಲ್ಲೂ ಏಕ ಪ್ರಕಾರದ ಸಾಧನೆ ಮಾಡಿರುವ ಗೌತಮ್ ಗಂಭೀರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ.

Team India Star Player Gautam Gambhir announces retirement
Author
Bengaluru, First Published Dec 4, 2018, 10:16 PM IST

ಹೈದರಾಬಾದ್[ಡಿ.04]  2011ರ ವಿಶ್ವಕಪ್​ ಹಾಗೂ 2007ರ ಟಿ-20 ವಿಶ್ವಕಪ್​  ಫೈನಲ್ ಪಂದ್ಯದ ನಿಜವಾದ ಆಟಗಾರ  ಎರಡು ಬಾರಿಯ ಐಪಿಎಲ್​ ವಿನ್ನರ್​ ಗೌತಮ್​ ಗಂಭೀರ್​ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳುವ ತೀರ್ಮಾನಕ್ಕೆ ಬಂದಿದ್ದಾರೆ.

ಆಂಧ್ರ ಪ್ರದೇಶ ಹಾಗೂ ದೆಹಲಿ ನಡುವೆ ಡಿಸೆಂಬರ್​ 6ರಿಂದ ದೆಹಲಿಯ ಫಿರೋಜ್​ ಶಾ ಕೋಟ್ಲಾದಲ್ಲಿ ನಡೆಯಲಿರುವ ರಣಜಿ ಟ್ರೋಫಿ ಪಂದ್ಯವೇ ಅಂತಿಮ ಪಂದ್ಯ ಎಂಬ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತಮ್ಮ ಫೇಸ್​ಬುಕ್ ಖಾತೆಯಲ್ಲಿ ಹನ್ನೊಂದು ನಿಮಿಷದ ವಿಡಿಯೋವನ್ನು ಪೋಸ್ಟ್ ಮಾಡಿ ಗಂಭೀರ್ ತಮ್ಮ 14 ವರ್ಷದ ಕ್ರಿಕೆಟ್ ಬ್ಯಾಟ್ ಕೆಳಗಿಟ್ಟಿದ್ದಾರೆ. ಎಡಗೈ ದಾಂಡಿಗ ಆರಂಭಿಕರಾಗಿ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಅನೇಕ ಇನಿಂಗ್ಸ್ ಕಟ್ಟಿದ್ದರು.

ಅಡಿಲೇಡ್ ಟೆಸ್ಟ್ ಗೆಲ್ಲಲು ಆಸಿಸ್ ಮಾಸ್ಟರ್ ಪ್ಲಾನ್..!

ಗಂಭೀರ್​ 58 ಟೆಸ್ಟ್, 147 ಏಕದಿನ ಹಾಗೂ 37 ಟಿ-20 ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆ 10,324 ರನ್​ ಬಾರಿಸಿ ಹಲವಾರು ಪಂದ್ಯಗಳಲ್ಲಿ ತಂಡಕ್ಕೆ ಜಯ ತಂದಿತ್ತಿದ್ದಾರೆ. ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ 2012 ಹಾಗೂ 2014ರಲ್ಲಿ ಐಪಿಎಲ್‌ ಪ್ರಶಸ್ತಿಗೆ ಮುತ್ತಿಕ್ಕಿತ್ತು.

Team India Star Player Gautam Gambhir announces retirement

ಕಳೆದ ಎರಡು ವರ್ಷದಿಂದ ಹಿರಿಯ ಆಟಗಾರ ಕಡೆಗಣನೆಗೆ ಒಳಗಾಗಿದ್ದರು. ತಂಡಕ್ಕೆ ಮರಳಲು ಸಾಧ್ಯವಾಗದೆ ಇದ್ದದ್ದು ಗೌತಿ ವಿದಾಯಕ್ಕೆ ಕಾರಣವಾಯಿತು ಎನ್ನಬಹುದು. 
2007ರ ಟಿ-20 ವಿಶ್ವಕಪ್​​ನ ಫೈನಲ್​ ಪಂದ್ಯದಲ್ಲಿ ಪಾಕ್‌ವಿರುದ್ಧ 75 ರನ್ ಬಾರಿಸಿ ಮಹೇಂದ್ರ ಸಿಂಗ್ ಧೋನಿ ಟ್ರೋಫಿ ಎತ್ತಿ ಹಿಡಿಯಲು ಕಾರಣವಾಗಿದ್ದರು. ಶ್ರೀಲಂಕಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 97 ರನ್​ ಸಿಡಿಸಿ ಧೋನಿ ಅವರೊಂದಿಗೆ ಭಾಗಿಯಾಗಿದ್ದರು.

 

Follow Us:
Download App:
  • android
  • ios