Asianet Suvarna News Asianet Suvarna News

ಭಾರತ-ಆಸ್ಟ್ರೇಲಿಯಾ 3ನೇ ಟಿ20: ಇಂದು ಬದಲಾಗುತ್ತೆ 4ನೇ ಕ್ರಮಾಂಕ, ಯಾರಾಡ್ತಾರೆ ಗೊತ್ತಾ..?

ಕನ್ನಡಿಗ ಕೆಎಲ್ ರಾಹುಲ್'​ಗೆ ಯಾಕೋ ಟೈಮ್ ಸರಿಯಿಲ್ಲ ಅನಿಸುತ್ತೆ. ಯಾಕೋ ಅವರು ಕಲರ್ ಜೆರ್ಸಿ ಹಾಕಿಕೊಂಡು ಆಡೋ ಅವಕಾಶ ಒದಗಿ ಬರ್ತಲೇ ಇಲ್ಲ. ಆಸ್ಟ್ರೇಲಿಯಾ ವಿರುದ್ಧ ಒಮದೂ ಪಂದ್ಯವನ್ನೂ ಆಡದೆ ಮನೆಗೆ ವಾಪಾಸ್ ಆಗುವ ಸಾಧ್ಯತೆ ಇದೆ.

Team India changeing the batting order in t20 3rd match against australia

ಸಿಕ್ಕ ಅವಕಾಶಗಳನ್ನ ಕೈ ಚಲ್ಲಿದ್ರೆ ಏನಾಗುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಕೆಎಲ್ ರಾಹುಲ್. ಟೆಸ್ಟ್​ ಟೀಮ್​'ನಲ್ಲಿ ಕನ್ನಡಿಗನಿಗೆ ಪರ್ಮನೆಂಟ್ ಪ್ಲೇಸ್. ಆದರೆ ಒಂಡೇ-20ಯಲ್ಲಿ ಅವರಿಗೆ ಖಾಯಂ ಸ್ಥಾನವಿಲ್ಲ. ಆದರೂ ಶ್ರೀಲಂಕಾದ 4ನೇ ಕ್ರಮಾಂಕದಲ್ಲಿ ಆಡಲು ಚಾನ್ಸ್ ಸಿಕ್ಕಿತ್ತು. ದುರ್ಬಲ ತಂಡ ವಿರುದ್ಧವೇ ರನ್ ಗಳಿಸಲು ಪರದಾಡಿದ್ರು. ಪರಿಣಾಮ ಆಡುವ 11ರ ಬಳಗದಿಂದ ಹೊರಬಿದ್ದರು.

ಆಸ್ಟ್ರೇಲಿಯಾ ಒಂಡೇ ಮತ್ತು ಟಿ20 ಸಿರೀಸ್​ಗೆ ಸೆಲೆಕ್ಟ್ ಆದ್ರೂ ಇದುವರೆಗೂ ಒಂದೇ ಒಂದು ಪಂದ್ಯವಾಡಿಲ್ಲ. ಸತತ 7 ಮ್ಯಾಚ್​​ನಲ್ಲಿ ಬೆಂಚ್ ಕಾಯ್ದಿದ್ದಾರೆ. ಇಗ 8ನೇ ಪಂದ್ಯದಲ್ಲೂ ಬೆಂಚ್ ಕಾಯೋದು ಕನ್ಫರ್ಮ್​. ಹೀಗಾದ್ರೆ ಎರಡು ಸರಣಿಯಲ್ಲಿ ಕೇವಲ ವಾಟರ್ ಬಾಯ್ ಆಗಿ ಕೆಲ್ಸ ಮಾಡಿ ಮನೆಗೆ ಬರಬೇಕಾಗುತ್ತೆ ರಾಹುಲ್.

4ನೇ ಕ್ರಮಾಂಕದಲ್ಲಿ ಆಡೋಱರು..?

4ನೇ ಕ್ರಮಾಂಕ ಎಂಬ ಭೂತ ಟಿ20ಯಲ್ಲೂ ಬಿಟ್ಟಿಲ್ಲ. ಏಕದಿನ ಸರಣಿಯಲ್ಲೂ ಪ್ರಯೋಗದ ಮೇಲೆ ಪ್ರಯೋಗ ಮಾಡಿದ್ರೂ ಯಾರೂ ಸೆಟ್ ಆಗಲಿಲ್ಲ. ಇವತ್ತು ಸಹ 4ನೇ ಕ್ರಮಾಂಕದ ಬ್ಯಾಟ್ಸ್​ಮನ್ ಚೇಂಜ್ ಆಗಲಿದ್ದಾರೆ. ಮನೀಶ್ ಪಾಂಡೆ, ಕೇದಾರ್ ಜಾಧವ್ ಮತ್ತು ಮಹೇಂದ್ರ ಸಿಂಗ್ ಧೋನಿ ಬಿಟ್ಟು ಬೇರೊಬ್ಬರ ಆಟಗಾರ ಆ ಪ್ಲೇಸ್​ನಲ್ಲಿ ಆಡ್ತಾನೆ. ಅದನ್ನ ಟೀಮ್ ಮ್ಯಾನೇಜ್​ಮೆಂಟ್​ ಕನ್ಫರ್ಮ್​ ಮಾಡಿದೆ. ಆದ್ರೆ  ರಾಹುಲ್ ಮಾತ್ರ ಆಡಲ್ಲ.

4ನೇ ಕ್ರಮಾಂಕದಲ್ಲಿ ಪಾಂಡ್ಯ ಬ್ಯಾಟಿಂಗ್

4ನೇ ಕ್ರಮಾಂಕದಲ್ಲಿ ಇಂದು ಹಾರ್ದಿಕ್ ಪಾಂಡ್ಯ ಆಡಲಿದ್ದಾರೆ. ಏಕದಿನ ಪಂದ್ಯದಂತೆ ಟಿ20 ಪಂದ್ಯದಲ್ಲೂ ಪ್ರಯೋಗ ಮಾಡಲು ಟೀಮ್ ಮ್ಯಾನೇಜ್'​ಮೆಂಟ್ ಚಿಂತನೆ ನಡೆಸಿದೆ. ಕಾಂಗರೂ ಸ್ಪಿನ್ನರ್ಸ್​ ದಂಡಿಸಬೇಕಾದ್ರೆ ಅದು ಪಾಂಡ್ಯನಿಂದ ಮಾತ್ರ ಸಾಧ್ಯ. ಹೀಗಾಗಿ ಹಾರ್ದಿಕ್'​ನನ್ನ 4ನೇ ಕ್ರಮಾಂಕದಲ್ಲು ಕಳುಹಿಸಿ ರನ್ ಕೊಳ್ಳೆ ಹೊಡೆಯುವ ಪ್ಲಾನ್'​ನಲ್ಲಿದೆ ಟೀಂ ಇಂಡಿಯಾ.
Team India changeing the batting order in t20 3rd match against australia

4ನೇ ಕ್ರಮಾಂಕದಲ್ಲಿ ಅಬ್ಬರಿಸಿರುವ ಪಾಂಡ್ಯ

4ನೇ ಕ್ರಮಾಂಕ ಪಾಂಡ್ಯಗೇನು ಹೊಸದಲ್ಲ. ಆಸ್ಟ್ರೇಲಿಯಾ ವಿರುದ್ಧವೇ ಒಂಡೇ ಮ್ಯಾಚ್​ನಲ್ಲಿ 4ನೇ ಕ್ರಮಾಂಕದಲ್ಲಿ ಆಡಿದ್ರು. ಇಂದೋರ್​ನಲ್ಲಿ ಅಬ್ಬರಿಸಿ ಹಾಫ್ ಸೆಂಚುರಿ ಹೊಡೆದಿದ್ದರು. ಕಾಂಗರೂ ಸ್ಪಿನ್ನರ್​ಗಳನ್ನ ಇನ್ನಿಲ್ಲದಂತೆ ಕಾಡಿದ್ರು. ಬ್ಯಾಕ್ ಟು ಬ್ಯಾಕ್ ಸಿಕ್ಸ್​ಗಳನ್ನ ಸಿಡಿಸಿದ್ದರು. ಇದರಿಂದ ಇಂಪ್ರೇಶ್​ ಆಗಿರುವ ಟೀಮ್ ಮ್ಯಾನೇಜ್​ಮೆಂಟ್ ಈಗ ಟಿ20ಯಲ್ಲೂ ಅವರನ್ನ ಪ್ರಯೋಗಿಕವಾಗಿ 4ನೇ ಕ್ರಮಾಂಕದಲ್ಲಿ ಆಡಿಸಲು ಪ್ಲಾನ್ ಮಾಡ್ತಿದೆ.

ಒಂದೆರಡು ಮ್ಯಾಚ್​ನಲ್ಲಿ ಪಿಚ್​ ಹಿಟ್ಟರ್ ಆಗಿ ಕಳುಹಿಸಿ 4ನೇ ಕ್ರಮಾಂಕವೆನ್ನೋ ಭೂತದಿಂದ ಬಚಾವ್ ಆಗಬಹುದು. ಆದ್ರೆ 4ನೇ ಕ್ರಮಾಂಕದಲ್ಲಿ ಆಡೋ ಪರ್ಮನೆಂಟ್ ಬ್ಯಾಟ್ಸ್​ಮನ್​ನನ್ನ ಗುರುತಿಸಬೇಕಿದೆ. ಆತನಿಗೆ ಅದೇ ಕ್ರಮಾಂಕದಲ್ಲಿ ಆಡಲು ಸಾಕಷ್ಟು ಅವಕಾಶ ಕೊಡ್ಬೇಕಿದೆ. ಆಗ ಮಾತ್ರ ಟೀಂ ಇಂಡಿಯಾ ಮಿಡ್ಲ್ ಆರ್ಡರ್ ಬಲವಾಗೋದು.

Follow Us:
Download App:
  • android
  • ios