Asianet Suvarna News Asianet Suvarna News

ವಿಶ್ವಕಪ್ ವೇಳೆ ಹೆಂಡತಿ ಜತೆ ಕೊಹ್ಲಿ ಮತ್ತೇನು ಕೇಳಿದ್ದಾರೆ ಗೊತ್ತಾ..?

ಬಿಸಿಸಿಐ ಆಡಳಿತ ಸಮಿತಿ ಹುಬ್ಬೇರಿಸುವಂತೆ ಮಾಡಿದ ಮತ್ತೊಂದು ಬೇಡಿಕೆ, ಪ್ರಯಾಣಕ್ಕೆ ರೈಲು ಬೋಗಿ ಕಾಯ್ದಿರಿಸಬೇಕು ಎಂದಿದ್ದು. ಇಂಗ್ಲೆಂಡ್‌ನಲ್ಲಿ ರೈಲು ಪ್ರಯಾಣದಿಂದ ಹೆಚ್ಚು ಸಮಯ ಉಳಿಯಲಿದೆ ಹಾಗೂ ಪ್ರಯಾಣ ಹೆಚ್ಚು ಆರಾಮದಾಯಕ ಎಂದು ಆಟಗಾರರು ವಾದಿಸಿದ್ದಾರೆ.

Team India Captain Virat Kohli makes a bizarre request ahead of World Cup
Author
New Delhi, First Published Oct 31, 2018, 10:41 AM IST

ನವದೆಹಲಿ[ಅ.31]: 2019ರ ಐಸಿಸಿ ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್‌ಗೆ ತೆರಳಲಿರುವ ಭಾರತ ತಂಡ, ಟೂರ್ನಿ ವೇಳೆ ತನಗೆ ಅಗತ್ಯವಿರುವ ಕೆಲ ಬೇಡಿಕೆಗಳನ್ನು ಬಿಸಿಸಿಐ ಮುಂದಿಟ್ಟಿದೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದ ವಿಮರ್ಶೆ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕ ವಿರಾಟ್ ಕೊಹ್ಲಿ, ಸುಪ್ರೀಂಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿಗೆ
ಬೇಡಿಕೆಗಳನ್ನು ಸಲ್ಲಿಸಿದರು. ಕೊಹ್ಲಿಯ ಬೇಡಿಕೆ ಹಾಗೂ ಕೆಲ ಮನವಿಗಳನ್ನು ಕಂಡು, ಆಡಳಿತ ಸಮಿತಿಗೆ ಗಾಬರಿಯಾಯಿತು ಎಂದು ಮೂಲಗಳು ತಿಳಿಸಿವೆ.

ಬಾಳೆಹಣ್ಣು ಬೇಕು:

ಕೊಹ್ಲಿ ಮಾಡಿದ ಮನವಿಗಳಲ್ಲಿ ಆಡಳಿತ ಸಮಿತಿಗೆ ಅಚ್ಚರಿ ಮೂಡಿಸಿದ್ದು, ಡ್ರೆಸ್ಸಿಂಗ್ ಕೊಠಡಿಯಲ್ಲಿ ಬಾಳೆ ಹಣ್ಣು ಇಡಬೇಕು ಎನ್ನುವುದು. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡಕ್ಕೆ, ಬಾಳೆಹಣ್ಣು ಹಾಗೂ ಇನ್ನಿತರ ಹಣ್ಣುಗಳನ್ನು ಪೂರೈಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿಫಲಗೊಂಡಿತು ಎನ್ನಲಾಗಿದೆ. ಈ ವಿಷಯ ಕೇಳಿದ ಆಡಳಿತ ಸಮಿತಿ, ‘ಬಿಸಿಸಿಐ ಖರ್ಚಿನಲ್ಲೇ ತಂಡದ ವ್ಯವಸ್ಥಾಪಕರಿಗೆ ಹೇಳಿ ಹಣ್ಣುಗಳನ್ನು ತರಿಸಿಕೊಳ್ಳಬಹುದಿತ್ತಲ್ಲಾ ಎಂದು ಕೊಹ್ಲಿಯನ್ನು ಕೇಳಿದರು’ ಎಂದು ವರದಿಯಾಗಿದೆ. ಜತೆಗೆ ವಿಶ್ವಕಪ್ ವೇಳೆ ಆಟಗಾರರಿಗೆ ಅಗತ್ಯವಿರುಷ್ಟು ಹಣ್ಣುಗಳನ್ನು ಪೂರೈಸುವುದಾಗಿ ತಿಳಿಸಿದೆ.

ಬೋಗಿ ಕಾಯ್ದಿರಿಸಿ!:

ಬಿಸಿಸಿಐ ಆಡಳಿತ ಸಮಿತಿ ಹುಬ್ಬೇರಿಸುವಂತೆ ಮಾಡಿದ ಮತ್ತೊಂದು ಬೇಡಿಕೆ, ಪ್ರಯಾಣಕ್ಕೆ ರೈಲು ಬೋಗಿ ಕಾಯ್ದಿರಿಸಬೇಕು ಎಂದಿದ್ದು. ಇಂಗ್ಲೆಂಡ್‌ನಲ್ಲಿ ರೈಲು ಪ್ರಯಾಣದಿಂದ ಹೆಚ್ಚು ಸಮಯ ಉಳಿಯಲಿದೆ ಹಾಗೂ ಪ್ರಯಾಣ ಹೆಚ್ಚು ಆರಾಮದಾಯಕ ಎಂದು ಆಟಗಾರರು ವಾದಿಸಿದ್ದಾರೆ. ‘ಆಡಳಿತ ಸಮಿತಿ ಆರಂಭದಲ್ಲಿ ಸುರಕ್ಷತೆ ದೃಷ್ಟಿಯಿಂದ ಈ ಬೇಡಿಕೆಗೆ ಅನುಮತಿ ನೀಡಲು ಸಿದ್ಧವಿರಲಿಲ್ಲ. ಆದರೆ ಇಂಗ್ಲೆಂಡ್ ತಂಡವೇ ರೈಲಿನಲ್ಲಿ ಪ್ರಯಾಣಿಸುತ್ತದೆ ಎಂದು ಕೊಹ್ಲಿ ತಿಳಿಸಿದರು. ರೈಲಿನ ಒಂದು ಬೋಗಿಯನ್ನು ಸಂಪೂರ್ಣವಾಗಿ ಕಾಯ್ದಿರಿಸಬೇಕು ಎನ್ನುವುದು ತಂಡದ ಮನವಿಯಾಗಿದೆ. ಪ್ರಯಾಣದ ವೇಳೆ ಭಾರತೀಯ ಅಭಿಮಾನಿಗಳು ಆಟಗಾರರೊಂದಿಗೆ ಫೋಟೋಗಳಿಗೆ ಮುಗಿಬಿದ್ದರೆ ಎನ್ನುವ ಆತಂಕ ಸಹ ಆಡಳಿತ ಸಮಿತಿಗಿದೆ. ಏನೇ ಹೆಚ್ಚು ಕಡಿಮೆಯಾದರೂ, ಬಿಸಿಸಿಐ ಇಲ್ಲವೇ ಆಡಳಿತ ಸಮಿತಿ ಜವಾಬ್ದಾರಿ ಹೊರುವುದಿಲ್ಲ ಎನ್ನುವ ಷರತ್ತಿನ ಮೇಲೆ ಬೇಡಿಕೆ ಈಡೇರಿಸಲು ಒಪ್ಪಿಗೆ ಸೂಚಿಸಲಾಗಿದೆ’ ಎಂದು
ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ ಉತ್ತಮ ಜಿಮ್ ಇರುವ ಹೋಟೆಲ್‌ಗಳನ್ನು ಕಾಯ್ದಿರಿಸಲು ಸಹ ವಿರಾಟ್ ಕೊಹ್ಲಿ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.

ಪೂರ್ಣಾವಧಿಗೆ ಮಡದಿಯರು ಇರಬೇಕು:

ಹೆಚ್ಚು ಚರ್ಚೆಗೆ ಒಳಗಾದ 3ನೇ ಬೇಡಿಕೆ, ವಿಶ್ವಕಪ್ ವೇಳೆ ಪೂರ್ಣಾವಧಿಗೆ ಮಡದಿ ಹಾಗೂ ಪ್ರೇಯಸಿಯರು ಆಟಗಾರರೊಂದಿಗೆ ಇರಲು ಅವಕಾಶ ನೀಡಬೇಕು ಎನ್ನುವುದು. ಮಡದಿಯರನ್ನು ಜತೆ
ಯಲ್ಲಿದ್ದರೆ, ಪಂದ್ಯಗಳು ಮುಗಿದ ಬಳಿಕ ಮಾನಸಿಕ ವಿಶ್ರಾಂತಿಗೆ ನೆರವಾಗಲಿದೆ ಎಂದು ಕೊಹ್ಲಿ ವಾದಿಸಿದ್ದಾರೆ. ಈ ಬಗ್ಗೆ ಆಡಳಿತ ಸಮಿತಿ ತಂಡದ ಎಲ್ಲಾ ಸದಸ್ಯರನ್ನು ಸಂಪರ್ಕಿಸಿ ನಿರ್ಧಾರಕ್ಕೆ
ಬರುವುದಾಗಿ ತಿಳಿಸಿದೆ. ಇದೇ ವೇಳೆ ಮುಂಬರುವ ಆಸ್ಟ್ರೇಲಿಯಾ ಪ್ರವಾಸದಿಂದಲೇ, ಮಡದಿ ಹಾಗೂ ಪ್ರೇಯಸಿಯರು ತಂಡದೊಂದಿಗೆ ಕ್ರೀಡಾಂಗಣಕ್ಕೆ ಹಾಗೂ ಹೋಟೆಲ್‌ಗೆ ಬಸ್‌ನಲ್ಲಿ ಪ್ರಯಾಣಿಸುವುದನ್ನು ಬಿಸಿಸಿಐ ನಿಷೇಧಿಸಿದೆ. ಅವರಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಕೆಲ ಆಟಗಾರರು ಸ್ವತಃ ತಾವೇ ವಾಹನ ಚಲಾಯಿಸಿಕೊಂಡು ಮೈದಾನಕ್ಕೆ ಹಾಗೂ ಮೈದಾನದಿಂದ ಹೋಟೆಲ್'ಗೆ ಬರುವ ವ್ಯವಸ್ಥೆ ಸಹ ಮಾಡಿಕೊಳ್ಳುತ್ತಾರೆ. ಇದು ತಂಡದ ಒಗ್ಗಟಿಗೆ ಪೆಟ್ಟು ನೀಡಲಿದೆ ಎನ್ನುವ ಕಾರಣ, ಆಟಗಾರರು ಒಟ್ಟಾಗಿ ಪ್ರಯಾಣಿಸಬೇಕು ಎಂದು ಬಿಸಿಸಿಐ ಸೂಚಿಸಿದೆ.

Follow Us:
Download App:
  • android
  • ios