Asianet Suvarna News Asianet Suvarna News

ಒಂದೇ ಪಂದ್ಯದಲ್ಲಿ ತೆಂಡುಲ್ಕರ್ 2 ದಾಖಲೆ ಅಳಿಸಿಹಾಕಿದ ಕಿಂಗ್ ಕೊಹ್ಲಿ..!

ಪ್ರತಿಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಬರೆಯುತ್ತಲೇ ಸಾಗುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಡಿಲೇಡ್ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ವಿನೂತನ ದಾಖಲೆ ಬರೆದರು.

Team India captain Virat Kohli breaks 2 major records of Sachin Tendulkar
Author
Bengaluru, First Published Jan 15, 2019, 8:12 PM IST

ಬೆಂಗಳೂರು[ಜ.15]: ಪ್ರತಿಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಬರೆಯುತ್ತಲೇ ಸಾಗುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಡಿಲೇಡ್ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ವಿನೂತನ ದಾಖಲೆ ಬರೆದರು.
ಅದರಲ್ಲೂ ಕ್ರಿಕೆಟ್ ದೇವರು ಎಂದೇ ಹೆಸರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆಗಳನ್ನು ಮುರಿಯುತ್ತಾ ಸಾಗುತ್ತಿರುವ ಕಿಂಗ್ ಕೊಹ್ಲಿ ದಾಖಲೆಯ 39ನೇ ಶತಕ ಸಿಡಿಸಿ ಸಂಭ್ರಮಿಸಿದರು. ಇದರ ಜೊತೆಗೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಎರಡು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು. 

ಕೊಹ್ಲಿ-ಧೋನಿ ಬ್ಯಾಟಿಂಗ್ ಕಂಡು ಫಿದಾ ಆದ ಕ್ರಿಕೆಟಿಗರು..!

ಕಡಿಮೆ ಇನ್ನಿಂಗ್ಸ್’ಗಳಲ್ಲಿ 39 ಶತಕ:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೇವಲ 210 ಏಕದಿನ ಇನ್ನಿಂಗ್ಸ್’ಗಳಲ್ಲಿ 39 ಶತಕ ಸಿಡಿಸುವ ಮೂಲಕ ಸಚಿನ್ ದಾಖಲೆ ಅಳಿಸಿಹಾಕಿದರು. ಈ ಮೊದಲು ಸಚಿನ್ ತೆಂಡುಲ್ಕರ್ ಬರೋಬ್ಬರಿ 350 ಇನ್ನಿಂಗ್ಸ್’ಗಳನ್ನು ಎದುರಿಸಿ 39 ಏಕದಿನ ಶತಕ ಪೂರೈಸಿದ್ದರು. 

ಕೊಹ್ಲಿ ಶತಕ, ಧೋನಿ ಅರ್ಧಶತಕ-ಭಾರತಕ್ಕೆ ಗೆಲುವಿನ ಪುಳಕ!

ಏಕದಿನ ಕ್ರಿಕೆಟ್’ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ನಾಯಕ:
ಏಕದಿನ ಕ್ರಿಕೆಟ್’ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ನಾಯಕ ಎನ್ನುವ ದಾಖಲೆ ಕೂಡಾ ಇದೀಗ ವಿರಾಟ್ ಕೊಹ್ಲಿ ಪಾಲಾಗಿದೆ. ಈ ಮೂಲಕ ಮಾಜಿ ನಾಯಕರಾದ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. 1992ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜರುದ್ದೀನ್ ಹಾಗೂ 2000ದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ನೆಲದಲ್ಲಿ ಸಚಿನ್ ತೆಂಡುಲ್ಕರ್ 93 ರನ್ ಸಿಡಿಸಿದ್ದರು. ಇದೀಗ ಕೊಹ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅಡಿಲೇಡ್’ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಶಾನ್ ಮಾರ್ಷ್ ಸಿಡಿಸಿದ ಆಕರ್ಷಕ ಶತಕದ ನೆರವಿನಿಂದ 298 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ, ಧೋನಿಯ ಸಮಯೋಚಿತ ಅರ್ಧಶತಕದ ನೆರವಿನಿಂದ ಇನ್ನೂ 4 ಎಸೆತಗಳು ಬಾಕಿಯಿರುವಂತೆ ಭಾರತ ಗೆಲುವಿನ ನಗೆ ಬೀರಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದವು. ಇದೀಗ ಮೂರನೇ ಹಾಗೂ ನಿರ್ಣಾಯಕ ಪಂದ್ಯವು ಜನವರಿ 18ರಂದು ಮೆಲ್ಬರ್ನ್ ಮೈದಾನದಲ್ಲಿ ನಡೆಯಲಿದೆ. 
 

Follow Us:
Download App:
  • android
  • ios