Asianet Suvarna News Asianet Suvarna News

ಮ್ಯಾಚ್ ಫಿಕ್ಸಿಂಗ್: ಚಾಮರ ಸಿಲ್ವಾ 2 ವರ್ಷ ಬ್ಯಾನ್

ಚಾಮರ ಸಿಲ್ವಾ 1999ರಿಂದ 2011ರವರೆಗೆ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದು, 11 ಟೆಸ್ಟ್, 75 ಏಕದಿನ ಹಾಗೂ16 ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ದ್ವೀಪರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ.

Sri Lankan international Chamara Silva banned for two years for fixing

ಕೊಲಂಬೊ(ಸೆ.18): ಬಿ ದರ್ಜೆ ಪಂದ್ಯವೊಂದರಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡದ ಮಾಜಿ ಬ್ಯಾಟ್ಸ್'ಮನ್ ಚಾಮರ ಸಿಲ್ವಾ ಅವರನ್ನು 2 ವರ್ಷಗಳ ಕಾಲ ನಿಷೇಧಿಸಲಾಗಿದೆ.

ಎರಡು ವರ್ಷ ಕ್ರಿಕೆಟ್ ಚಟುವಟಿಕೆಯಿಂದ ದೂರ ಇರುವಂತೆ ಸಿಲ್ವಾಗೆ ಲಂಕಾ ಕ್ರಿಕೆಟ್ ಮಂಡಳಿ ಆದೇಶಿಸಿದೆ.

ಈ ವರ್ಷ ಜ.23ರಿಂದ 25 ರವರೆಗೆ ನಡೆದಿದ್ದ ಪಂಡೂರಾ ಕ್ರಿಕೆಟ್ ಕ್ಲಬ್ ಮತ್ತು ಕಲುಟರಾ ಫಿಸಿಕಲ್ ಕಲ್ಚರ್ ಕ್ಲಬ್ ನಡುವಣ ನಡೆದಿದ್ದ ಪಂದ್ಯದಲ್ಲಿ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಈ ಸಂಬಂಧ 7 ತಿಂಗಳುಗಳ ಕಾಲ ತನಿಖೆ ನಡೆಸಿದ ಬಳಿಕ ಚಾಮರ ಸಿಲ್ವಾ ಮ್ಯಾಚ್ ಫಿಕ್ಸಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಎರಡು ವರ್ಷಗಳ ಮಟ್ಟಿಗೆ ಸಿಲ್ವಾರನ್ನು ನಿಷೇಧಕ್ಕೆ ಗುರಿಪಡಿಸಲಾಗಿದೆ.

ಚಾಮರ ಸಿಲ್ವಾ 1999ರಿಂದ 2011ರವರೆಗೆ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದು, 11 ಟೆಸ್ಟ್, 75 ಏಕದಿನ ಹಾಗೂ16 ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ದ್ವೀಪರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೇ ಚಾಮರ 2011 ಏಕದಿನ ವಿಶ್ವಕಪ್ ತಂಡದ ಸದಸ್ಯರಾಗಿದ್ದರು.

Follow Us:
Download App:
  • android
  • ios