sports
By Suvarna Web Desk | 09:42 AM June 19, 2017
ಶಿಖರ್ ಧವನ್ ಪಾಲಾದ ಗೋಲ್ಡನ್ ಬ್ಯಾಟ್

Highlights

ಪಂದ್ಯಾವಳಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಶಿಖರ್‌ ಧವನ್‌ ಸತತ 2ನೇ ಬಾರಿಗೆ ‘ಗೋಲ್ಡನ್‌ ಬ್ಯಾಟ್‌' ಪ್ರಶಸ್ತಿ ಗೆದ್ದರು. ಈ ಬಾರಿ 5 ಪಂದ್ಯಗಳಲ್ಲಿ 1 ಶತಕ, 2 ಅರ್ಧಶತಕಗಳೊಂದಿಗೆ ಒಟ್ಟು 338 ರನ್‌ ಕಲೆಹಾಕಿದ ಧವನ್‌, 2ನೇ ಸ್ಥಾನ ಪಡೆದ ರೋಹಿತ್‌ ಶರ್ಮಾ ಅವರಿಗಿಂತ 34 ರನ್‌ ಹೆಚ್ಚಿಗೆ ದಾಖಲಿಸಿದರು.

ಚಾಂಪಿಯನ್ಸ್‌ ಟ್ರೋಫಿ ಆವೃತ್ತಿಯೊಂದರಲ್ಲಿ ಗರಿಷ್ಠ ರನ್‌ ಕಲೆಹಾಕಿದ ದಾಖಲೆ ಕ್ರಿಸ್‌ ಗೇಲ್‌ (474 ರನ್‌) ಅವರ ಹೆಸರಿನಲ್ಲೇ ಉಳಿದುಕೊಂಡಿತು. 2013ರಲ್ಲಿ ಧವನ್‌ 363 ರನ್‌ ಗಳಿಸಿದ್ದರು. ಅಲಿಗೆ ಗೋಲ್ಡನ್‌ ಬಾಲ್‌ ಪಂದ್ಯಾವಳಿಯಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಹೆಗ್ಗಳಿಕೆಗೆ ಪಾತ್ರರಾದ ಪಾಕಿಸ್ತಾನ ವೇಗಿ ಹಸನ್‌ ಅಲಿ ‘ಗೋಲ್ಡನ್‌ ಬಾಲ್‌' ಪ್ರಶಸ್ತಿ ಪಡೆದರು.

5 ಪಂದ್ಯಗಳಲ್ಲಿ ಅಲಿ 44.3 ಓವರ್‌ ಬೌಲಿಂಗ್‌ ಮಾಡಿ 13 ವಿಕೆಟ್‌ ಕಬಳಿಸಿದರು. 19 ರನ್‌ ನೀಡಿ 3 ವಿಕೆಟ್‌ ಕಬಳಿಸಿದ್ದು ಅವರ ಶ್ರೇಷ್ಠ ಪ್ರದರ್ಶನವಾಗಿತ್ತು.

Show Full Article

Recommended

bottom right ad