Asianet Suvarna News Asianet Suvarna News

ದಾಖಲೆಯ 3ನೇ ದ್ವಿಶತಕ ಬಾರಿಸಿ ವಿಶೇಷ ದಿನದಲ್ಲಿ ಪತ್ನಿ ರಿತಿಕಾ ಸಾಜ್ದೆ'ಗೆ ಗಿಫ್ಟ್ ಕೊಟ್ಟ ರೋಹಿತ್

173 ಏಕದಿನ ಪಂದ್ಯಗಳನ್ನು ಆಡಿರುವ ರೋಹಿತ್ 16 ಶತಕ, 3 ದ್ವಿಶತಕ ಹಾಗೂ 34 ಅರ್ಧ ಶತಕಗಳೊಂದಿಗೆ 7363 ರನ್ ಬಾರಿಸಿದ್ದಾರೆ. ಇಂದಿನ ದ್ವಿಶತಕದೊಂದಿಗೆ ಹಲವು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

Rohit Sharmas Anniversary Gift To Teary Eyed Wife Ritika

ಮೊಹಾಲಿ(ಡಿ.13): ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಮೂರನೆಯ ದ್ವಿಶತಕ ಬಾರಿಸಿ ಹಲವು ದಾಖಲೆಗಳನ್ನು ಬರೆದ ರೋಹಿತ್ ಶರ್ಮಾ ಪತ್ನಿಗೂ ಕೂಡ ಗಿಫ್ಟ್ ಕೊಟ್ಟಿದ್ದಾರೆ.

ಪತ್ನಿ ರಿತಿಕಾ ಸಾಜ್ದೆ ಕೂಡ ಪೆವಿಲಿಯನ್'ನಲ್ಲಿ ಕುಳಿತು ಪತಿಯ ಸ್ಫೋಟಕ ಆಟಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ದ್ವಿಶತಕ ಬಾರಿಸಿದಾಗ ಸ್ವತಃ ಕಣ್ಣೀರಿಟ್ಟು ಬಾವುಕರಾದರು. ದ್ವಿಶತಕದ ಸಂಭ್ರಮಾಚರಣೆಗೆ ಮತ್ತೊಂದು ವಿಶೇಷತೆಯಿದೆ. ಇಂದು ರೋಹಿತ್ ಹಾಗೂ ರಿತಿಕಾ ಸಾಜ್ದೆ ಅವರ 2ನೇ ವಿವಾಹ ವಾರ್ಷಿಕೋತ್ಸವ. ಡಿಸೆಂಬರ್ 13, 2015 ರಂದು ರಿತಿಕಾ ಸಾಜ್ದೆ ಅವರನ್ನು ರೋಹಿತ್ ವಿವಾಹವಾಗಿದ್ದರು. ಇಂದು ದ್ವಿತೀಯ ವಾರ್ಷಿಕೋತ್ಸವದಂದು ದ್ವಿಶತಕ ದಾಖಲಿಸಿ ಪತ್ನಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ.

ಹಲವು ದಾಖಲೆಗಳು

173 ಏಕದಿನ ಪಂದ್ಯಗಳನ್ನು ಆಡಿರುವ ರೋಹಿತ್ 16 ಶತಕ, 3 ದ್ವಿಶತಕ ಹಾಗೂ 34 ಅರ್ಧ ಶತಕಗಳೊಂದಿಗೆ 7363 ರನ್ ಬಾರಿಸಿದ್ದಾರೆ. ಇಂದಿನ ದ್ವಿಶತಕದೊಂದಿಗೆ ಹಲವು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ವರ್ಷದಲ್ಲಿ ಅತೀ ಹೆಚ್ಚು ಸಿಕ್ಸ್'ರ್

ಭಾರತ ಪರ ವರ್ಷವೊಂದರಲ್ಲಿ ಗರಿಷ್ಟ ಸಿಕ್ಸರ್ ಸಿಡಿಸಿದ ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ(41 ಸಿಕ್ಸರ್-2017). ಈ ಮೊದಲು ಸಚಿನ್ ತೆಂಡೂಲ್ಕರ್(40 ಸಿಕ್ಸರ್-1998) ಅತಿಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದರು.

ವೈಯುಕ್ತಿಕವಾಗಿ ಅತೀ ಹೆಚ್ಚು ಸಿಕ್ಸ್'ರ್: 4ನೇ ಸ್ಥಾನ                             

ಭಾರತ ಪರ ಏಕದಿನ ಕ್ರಿಕೆಟ್'ನಲ್ಲಿ ಅತಿ ಸಿಕ್ಸರ್ ಸಿಡಿಸಿದ ಬ್ಯಾಟ್ಸ್'ಮನ್'ಗಳ ಪಟ್ಟಿಯಲ್ಲಿ ರೋಹಿತ್ 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಪಟ್ಟಿಯಲ್ಲಿ ಧೋನಿ(208 ಸಿಕ್ಸರ್) ಮೊದಲ ಸ್ಥಾನದಲ್ಲಿದ್ದರೆ, ಸಚಿನ್(195) ಸೌರವ್ ಗಂಗೂಲಿ(189) ರೋಹಿತ್ ಶರ್ಮಾ(162) ಉಳಿದ ಸ್ಥಾನಗಳಲ್ಲಿದ್ದಾರೆ.

Follow Us:
Download App:
  • android
  • ios