sports
By Suvarna Web Desk | 11:01 PM August 12, 2017
ಮಾಂಟ್ರಿಯಲ್ ಮಾಸ್ಟರ್ಸ್: ಸೆಮೀಸ್'ಗೆ ಲಗ್ಗೆಯಿಟ್ಟ ಫೆಡರರ್

Highlights

ಭಾನುವಾರ ನಡೆಯಲಿರುವ ಸೆಮಿಫೈನಲ್‌'ನಲ್ಲಿ ವಿಶ್ವದ 3ನೇ ಶ್ರೇಯಾಂಕಿತ ಫೆಡರರ್, ನೆದರ್‌'ಲೆಂಡ್‌'ನ ರಾಬಿನ್ ಹಾಸೆ ವಿರುದ್ಧ ಕಾದಾಟ ನಡೆಸಲಿದ್ದಾರೆ.

ಮಾಂಟ್ರಿಯಲ್(ಆ.12): ಟೆನಿಸ್ ದಿಗ್ಗಜ, ಹಾಲಿ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್ ಎಟಿಪಿ ಮಾಂಟ್ರಿಯಲ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಇಂದು ನಡೆದ ಎಂಟರಘಟ್ಟದ ಪಂದ್ಯದಲ್ಲಿ ಸ್ಪೇನ್‌'ನ ರಾಬರ್ಟೊ ಬಟಿಸ್ಟಾ ಅಗಟ್‌'ರನ್ನು 6-4, 6-4 ನೇರ ಸೆಟ್‌'ಗಳಿಂದ ಮಣಿಸುವ ಮೂಲಕ ಸ್ವಿಸ್ ತಾರೆ ನಾಲ್ಕರಘಟ್ಟ ಪ್ರವೇಶಿಸಿದರು.

ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಫೆಡರರ್, ಸ್ಪೇನ್ ಆಟಗಾರರನೆದುರು ಸಂಪೂರ್ಣ ಪ್ರಾಬಲ್ಯ ಮೆರೆದರು. ಇನ್ನು ಭಾನುವಾರ ನಡೆಯಲಿರುವ ಸೆಮಿಫೈನಲ್‌'ನಲ್ಲಿ ವಿಶ್ವದ 3ನೇ ಶ್ರೇಯಾಂಕಿತ ಫೆಡರರ್, ನೆದರ್‌'ಲೆಂಡ್‌'ನ ರಾಬಿನ್ ಹಾಸೆ ವಿರುದ್ಧ ಕಾದಾಟ ನಡೆಸಲಿದ್ದಾರೆ.

Show Full Article


Recommended


bottom right ad