Asianet Suvarna News Asianet Suvarna News

ಕಾಂಗರೂಗಳೇ ಹುಷಾರ್!: 2ನೇ ಪಂದ್ಯದಲ್ಲಿ 1 ರನ್'ಗಾಗಿ ಮಾಡಿದ ಈ ತಪ್ಪನ್ನು ಎಂದೂ ಮಾಡದಿರಿ

ಇಂದಿನ ಪಂದ್ಯ ಆಸೀಸ್​​ಗಳಿಗೆ ಡು ಆರ್​​​​​ ಡೈ ಪಂದ್ಯ. ಆದರೆ ಇಂದಿನ ಈ ಹಿನಾಯ ಸ್ಥಿತಿಗೆ ಸ್ವತಃ ಆಸ್ಟ್ರೇಲಿಯಾನೇ ಕಾರಣ ಅಂದ್ರೆ ತಪ್ಪಿಲ್ಲ. ಕಾರಣ ಮಾಡಬೇಡಿ ಮಾಡಬೇಡಿ ಅಂದ್ರೂ ಕೇಳದೇ ವಿರಾಟ್​​ ಕೊಹ್ಲಿಯನ್ನ ಸ್ಲೆಡ್ಜಿಂಗ್​​ ಮಾಡಿ ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಅಷ್ಟೇ ಅಲ್ಲ ಮಾಜಿ ಆಸೀಸ್​​ ಆಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್​​'ನಲ್ಲಿ ನಡಿತ್ತಿರುವುದಾದರೂ ಏನು..? ಇಲ್ಲಿದೆ ವಿವರ

Reason why australiya lost the 2nd odi match against india

ಇಂದು ಆಸೀಸ್​​'ಗಳಿಗೆ ಡು ಆರ್​​ ಡೈ ಪಂದ್ಯ. ಆದ್ರೆ ಸ್ಮಿತ್​ ಪಡೆ ಇಂತಹ ಹೀನಾಯ ತಲುಪಲು ಕಅರಣ ಮಾತ್ರ ತಂಡದ ಇಬ್ಬರು ಆಟಗಾರರು. ಹೌದು, ಕೊಲ್ಕತ್ತಾದಲ್ಲಿ ನಡೆದ 2ನೇ ಪಂದ್ಯದಲ್ಲಿ ಆಸೀಸ್​​ಗಳು ಇಸಿಯಾಗಿ ಗೆಲ್ಲಬಹುದಿತ್ತು. ಆದ್ರೆ ಆಸೀಸ್​​ನ ಮ್ಯಾಥ್ಯೂ ವೇಡ್​​ ಮತ್ತು ಮಾರ್ಕಸ್​​ ಸ್ಟೋನಿಸ್​​​ ಮೊದಲ ಗೆಲುವಿಗೆ ತಣ್ಣೀರು ಎರಚಿದ್ರು. ಅಷ್ಟೇ ಅಲ್ಲ ಇಂದು ತಮ್ಮ ತಂಡ ಒತ್ತಡದಿಂದಲೇ ಕಣಕಿಳಿಯುವಂತೆ ಮಾಡಿದ್ರು.

ಕೊಹ್ಲಿ ಡೇಂಜರ್​ ಅನ್ನೋದು ಗೊತ್ತಿದ್ರೂ ಕೆಣಕಿದ್ದೇಕೆ..?

ಟೀಂ ಇಂಡಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯನ್ನಾಡಲು ಆಸ್ಟ್ರೇಲಿಯಾ ತಂಡ ಫ್ಲೈಟ್​​​ ಹತ್ತುವಾಗ್ಲೇ ಮೈಕ್​​ ಹಸ್ಸಿ ಸೇರಿದಂತೆ ಹಲವು ಆಸೀಸ್​​ ಮಾಜಿ ಆಟಗಾರರು ಮಹತ್ತರ ಟಿಪ್ಸ್​​​ವೊಂದನ್ನ ನೀಡಿ ಭಾರತಕ್ಕೆ ಕಳುಹಿಸಿದ್ರು. ಯಾವುದೇ ಕಾರಣಕ್ಕೂ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿಯನ್ನ ಕೆಣಕಬೇಡಿ. ಆತನನ್ನ ಕೆಣಕಿದ್ರೆ ಆತ ಮನುಷ್ಯನ್ನಾಗಿರಲ್ಲ. ನೀವು ಆತನಿಗೆ ಸ್ಲೆಡ್ಜಿಂಗ್​ ಮಾಡಿದ್ರೆ ನಿಮಗೆ ಸೋಲು ಗ್ಯಾರೆಂಟಿ. ಹೀನಾಯವಾಗಿ ಸೋತು ಮುಖಭಂಗ ಅನುಭವಿಸುತ್ತೀರಿ ಅಂತೆಲ್ಲಾ ಉಪದೇಶ ಮಾಡಿದ್ರು.

ಕೇವಲ 1 ರನ್​'ಗಾಗಿ ಕೊಹ್ಲಿಗೆ ಮಾಡಿದ್ರು ಸ್ಲೆಡ್ಜ್​​​​​​

ಮಾಜಿ ಆಟಗಾರರ ಉಪದೇಶವನ್ನ ಆಸೀಸ್​​ ಆಟಗಾರರು ಸೀರಿಯಸ್​​ ಆಗಿ ತೆಗೆದುಕೊಂಡಿದ್ದಿದ್ದರೆ ಅವರಿಗೆ ಇಂದು ಈ ಗತಿ ಬರುತ್ತಿರಲಿಲ್ಲ. ಆಡಿದ ಎರಡೂ ಪಂದ್ಯದಲ್ಲಿ ಸೋತು ಸುಣ್ಣವಾಗ್ತೀರಲಿಲ್ಲ. ಆದ್ರೆ ಮೊನ್ನೆಯ 2ನೇ ಪಂದ್ಯದಲ್ಲಿ ಅಚಾನಕ್ಕಾಗಿ ಒಂದು ರನ್​ ಕದ್ದ ವಿರಾಟ್​​​​ ಕೊಹ್ಲಿಯನ್ನ ಇಯಾಳಿಸಿ, ಸ್ಲೆಡ್ಜಿಂಗ್​ ಮಾಡಿಬಿಟ್ರು. ಇದು ಅಂದಿನ ಸೋಲಿಗೆ ದೊಡ್ಡ ಕಾರಣವಾಗಿಬಿಡ್ತು. 

ವೇಡ್​​ ಮತ್ತು ಸ್ಟೋನಿಸ್​​'ರ ಈ ಸ್ಲೆಡ್ಜಿಂಗ್​​'ಗೆ ಕೆಂಡಮಂಡಲನಾದ ಕೊಹ್ಲಿ ಬ್ಯಾಟಿಂಗ್​​ನಲ್ಲಿ ಅಬ್ಬರಿಸಿದ್ರು. ಅವರಿಬ್ಬರ ಕೋಪವನ್ನ ಉಳಿದ ಬೌಲರ್​​ಗಳ ಮೇಲೆ ತೀರಿಸಿಕೊಂಡ್ರು. ಭರ್ಜರಿ 92 ರನ್​ ಚಚ್ಚಿ ಬಿಸಾಕಿದ್ರು. ಅಷ್ಟೇ ಅಲ್ಲ ಫೀಲ್ಡಿಂಗ್ ವೇಳೆ ಆಸೀಸ್​​ ಬ್ಯಾಟ್ಸ್​​​ಮನ್​ಗಳನ್ನ ಇನ್ನಿಲ್ಲದಂತೆ ಗೋಳುಹೊಯ್ದುಕೊಂಡ್ರು.

ಸ್ಟೋನಿಸ್​​​-ವೇಡ್​​ ವಿರುದ್ಧ ಮಾಜಿ ಆಟಗಾರರು ಗರಂ

ಭಾರತಕ್ಕೆ ಬರೋದಕ್ಕೂ ಮೊದಲೇ ಮಾಜಿ ಆಟಗಾರರು ತಾಕೀತು ಮಾಡಿದ್ರೂ ಅವರ ಮಾತು ಕೇಳದೆ ಕೇವಲ 1 ರನ್​ಗಾಗಿ ಸ್ಲೆಡ್ಜಿಂಗ್​ ಮಾಡಿ ಪಂದ್ಯವನ್ನೇ ಕೈಚೆಲ್ಲಿದ ಸ್ಮಿತ್​ ಪಡೆಗೆ ಸದ್ಯ ಮಾಜಿ ಆಟಗಾರರಿಂದ ಟೀಕೆಗಳ ಸುರಿಮಳೆಯೇ ಹರಿಯುತ್ತಿದೆ. ಅದರಲ್ಲೂ ಮಾಜಿ ವೇಗಿ ಸ್ಟುವರ್ಟ್​ ಕ್ಲಾರ್ಕ್​ ಸ್ಲೆಡ್ಜ್​ ಮಾಡಿದ ವೇಡ್​​ ಮ್ತತ್ತು ಸ್ಟೋನಿಸ್​​ರನ್ನ ಬಹಿರಂಗವಾಗಿ ನಿಂದಿಸಿದ್ದಾರೆ.

ಕೇವಲ ಒಂದು ರನ್​​, ಆಸೀಸ್​​ಗಳಿಗೆ ಹೆಚ್ಚಾಗಿಹೋಯ್ತಾ..? ಕೇವಲ ಒಂದು ರನ್​ಗಾಗಿ ಕೊಹ್ಲಿಯನ್ನ ಸ್ಲೆಡ್ಜ್​ ಮಾಡಬೇಕಿತ್ತಾ..? ನಾವು ನಮ್ಮ ಕ್ರಿಕೆಟ್​​ ಬಗ್ಗೆ ಮಾತ್ರ ತಲೆಕೆಡಸಿಕೊಳ್ಳಬೇಕು. ಕೊಹ್ಲಿ ಎಷ್ಟೇ ಮೈದಾನದಲ್ಲಿ ಎಷ್ಟೇ ಕಿರಿಕ್​ ಮಾಡಿದ್ರೂ ಅದರ ಹತ್ತರಷ್ಟು ಆಟವನ್ನಾಡ್ತಾರೆ. ಆದ್ರೆ ಸ್ಟೋನಿಸ್​​ ಮತ್ತು ವೇಡ್..? ನಿಜಕ್ಕೂ ಶೋಚನಿಯ ಎಂದು ಸ್ಟುವರ್ಟ್​ ಹೇಳಿದ್ದಾರೆ.

ಸದ್ಯ ಸ್ಟೋನಿಸ್​​ ಮತ್ತು ವೇಡ್'​​​ರ ಕೃತ್ಯಕ್ಕೆ ಆಸ್ಟ್ರೇಲಿಯಾದ್ಯಂತ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ. ಕೊಹ್ಲಿಯನ್ನ ಕೆಣಕಿದ್ರೆ ಏನಾಗುತ್ತೆ ಅಂತ ಗೊತ್ತಿದ್ರೂ ಸ್ಎಡ್ಜಿಂಗ್​​​ ಮಾಡಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನಾದ್ರೂ ಆಸೀಸ್​​ ಆಟಗಾರರು ಬುದ್ಧಿ ಕಲಿಯಲಿ ಅನ್ನೋದಷ್ಟೇ ಕೊಹ್ಲಿ ಫ್ಯಾನ್ಸ್​​​ರ ಆಶಯ.

Follow Us:
Download App:
  • android
  • ios