sports
By Suvarna Web Desk | 09:00 PM February 13, 2018
ಇನ್ಮುಂದೆ ಆರ್. ಅಶ್ವಿನ್ ಲೆಗ್'ಸ್ಪಿನ್ನರ್..?

Highlights

ಅಶ್ವಿನ್ ಲೆಗ್'ಸ್ಪಿನ್ ಬೌಲಿಂಗನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಪ್ರಯೋಗಿಸುತ್ತಿದ್ದಾರೆ. ಈ ಹಿಂದೆ ಇಂಗ್ಲೆಂಡ್ ಕೌಂಟಿಯಲ್ಲಿ ಆಡುವಾಗಲೂ ಅಶ್ವಿನ್ ಲೆಗ್ ಸ್ಪಿನ್ ಬೌಲಿಂಗ್ ಮಾಡಿ ಯಶಸ್ಸು ಸಾಧಿಸಿದ್ದರು.

ಚೆನ್ನೈ(ಫೆ.13): ಯುವ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಹಾಗೂ ಕುಲ್ದೀಪ್ ಯಾದವ್'ರ ಪ್ರಚಂಡ ಪ್ರದರ್ಶನದಿಂದಾಗಿ ಭಾರತ ಸೀಮಿತ ಓವರ್ ಕ್ರಿಕೆಟ್ ತಂಡದಿಂದ ಹೊರಬಿದ್ದಿರುವ ಹಿರಿಯ ಆಫ್ ಸ್ಪಿನ್ನರ್ ಆರ್.ಅಶ್ವಿನ್, ತಂಡಕ್ಕೆ ಮರಳಲು ಹೊಸ ಯೋಜನೆ ಕೈಗೆತ್ತಿಕೊಂಡಿದ್ದಾರೆ.

ಅಶ್ವಿನ್ ಲೆಗ್'ಸ್ಪಿನ್ ಬೌಲಿಂಗನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಪ್ರಯೋಗಿಸುತ್ತಿದ್ದಾರೆ. ಈ ಹಿಂದೆ ಇಂಗ್ಲೆಂಡ್ ಕೌಂಟಿಯಲ್ಲಿ ಆಡುವಾಗಲೂ ಅಶ್ವಿನ್ ಲೆಗ್ ಸ್ಪಿನ್ ಬೌಲಿಂಗ್ ಮಾಡಿ ಯಶಸ್ಸು ಸಾಧಿಸಿದ್ದರು.

ಮುಂಬರುವ ಐಪಿಎಲ್‌'ನಲ್ಲಿ ಪಂಜಾಬ್ ಪರ ಆಡಲಿರುವ ಅವರು, ಲೆಗ್ ಸ್ಪಿನ್, ಗೂಗ್ಲಿ ಎಸೆತಗಳೊಂದಿಗೆ ಆಯ್ಕೆಗಾರರ ಗಮನ ಸೆಳೆಯಲು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ. ಲೆಗ್ ಸ್ಪಿನ್ನರ್ ಆಗಿ ಅಶ್ವಿನ್ ಯಶಸ್ಸು ಕಾಣಲಿದ್ದಾರೆ ಎಂದು ವೆಟ್ಟೋರಿ, ಪನೇಸಾರ್ ಅಭಿಪ್ರಾಯಿಸಿದ್ದಾರೆ.

Show Full Article

Recommended

bottom right ad