Asianet Suvarna News Asianet Suvarna News

ಶತಮಾನೋತ್ಸವ ಸಂಭ್ರದಲ್ಲಿ ದ್ರಾವಿಡ್-ಕಿರ್ಮಾನಿ ಆಡಿದ BUC ಕ್ರಿಕೆಟ್ ಕ್ಲಬ್!

100 ವರ್ಷ ಪೂರೈಸಿದ ಕರ್ನಾಟಕ ಮೊದಲ ಕ್ರಿಕೆಟ್ ಕ್ಲಬ್ BUCC ಸಂಭ್ರಮ ಇಮ್ಮಡಿಗೊಂಡಿದೆ. ಕ್ರಿಕೆಟಿಗರು ಹಾಗೂ ಕ್ರಿಕೆಟ್‌ಗಾಗಿ ಶ್ರಮಿಸುತ್ತಿರುವ BUCC ಶತಮಾನೋತ್ಸವ ಸಂಭ್ರಮ ಆಚರಿಸಿದೆ. ಸಮಾರಂಭದಲ್ಲಿ ರಾಹುಲ್ ದ್ರಾವಿಡ್, ಸಯ್ಯದ್ ಕಿರ್ಮಾನಿ, ರೋಜರ್ ಬಿನ್ನಿ ಸೇರಿದಂತೆ ಹಲವು ದಿಗ್ಗಜರು ಕ್ರಿಕೆಟಿಗರು ಕ್ಲಬ್‌ನ ಸಂಭ್ರಮದಲ್ಲಿ ಪಾಲ್ಗೊಂಡರು.

Rahul dravid,Kirmani Joins centenary celebrations of Bangalore united cricket club
Author
Bengaluru, First Published Dec 22, 2018, 6:14 PM IST

ಬೆಂಗಳೂರು(ಡಿ.22): ಕಳೆದ 100 ವರ್ಷಗಳಿಂದ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟಿಗರನ್ನ ನೀಡುತ್ತಿರುವ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್(BUCC) ಶತಮಾನೋತ್ಸವ ಸಂಭ್ರದಲ್ಲಿದೆ.  ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್, ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಯ್ಯದ್ ಕಿರ್ಮಾನಿ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಸೇರಿದಂತೆ ದಿಗ್ಗಜ ಕ್ರಿಕೆಟಿಗರನ್ನ ನೀಡಿದ ಈ BUCC ನೂರು ವರ್ಷ ಆಚರಿಸುತ್ತಿರುವ ಕರ್ನಾಟಕದ ಮೊದಲ ಕ್ರಿಕೆಟ್ ಕಬ್ಲ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: 25 ಲಕ್ಷ ಉಳಿಸಲು ಹೋಗಿ ಕೈ ಸುಟ್ಟುಕೊಂಡ RCB!

ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ  BUCC ಅಧ್ಯಕ್ಷ ರಾಹುಲ್ ದ್ರಾವಿಡ್, ಕಾರ್ಯದರ್ಶಿ, ಐಸಿಸಿ ಎಲೈಟ್ ಪ್ಯಾನಲ್ ಅಂಪೈರ್ ಶಾವಿರ್ ತಾರಾಪುರ್,  BUCC ಕ್ಲಬ್ ಸದಸ್ಯ ರೋಜರ್ ಬಿನ್ನಿ, ಸಯ್ಯದ್ ಕಿರ್ಮಾನಿ, ಶತಮಾನೋತ್ಸವ ಸಂಭ್ರಮದ ರಂಗು ಹೆಚ್ಚಿಸಿದರು.

ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, ಕ್ಲಬ್ ಜೊತೆಗಿನ ನೆನಪುಗಳನ್ನ ಬಿಚ್ಚಿಟ್ಟರು. ಪ್ರತಿ ವರ್ಷ ಅತ್ಯುತ್ತಮ ಕ್ರೀಡಾಪಟುಗಳನ್ನ ನೀಡಿರುವ  BUCC   ಭವಿಷ್ಯದಲ್ಲೂ ಇದೇ ರೀತಿ ಪ್ರತಿಭೆಗಳನ್ನ ನೀಡಲಿ ಎಂದರು. ನಾನು ಕ್ರಿಕೆಟ್ ಕಲಿತ  ಕ್ಲಬ್ ನೂರು ವರ್ಷ ಪೂರೈಸುತ್ತಿರುವುದು ಸಂತಸವನ್ನ ಇಮ್ಮಡಿಗೊಳಿಸಿದೆ ಎಂದು ದ್ರಾವಿಡ್ ಹೇಳಿದರು.

ಇದನ್ನೂ ಓದಿ: ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಕಿಂಗ್ ಕೊಹ್ಲಿ ನಂ.1

ಶತಮಾನೋತ್ಸವದ ಪ್ರಯುಕ್ತ BUCC ಹಾಗೂ ಕರ್ನಾಟಕ ರಾಜ್ಯ ಗಾಲ್ಫ್ ಸಂಸ್ಥೆ ಸಹಯೋಗದಲ್ಲಿ 2019ರ ಮಾರ್ಚ್ 22 ರಂದು ಗಾಲ್ಫ್ ಡೇ ಹಮ್ಮಿಕೊಳ್ಳಲಾಗಿದೆ. ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಖ್ಯಾತನಾಮ ಕ್ರಿಕೆಟಿಗರು ಈ ಗಾಲ್ಫ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಿಂದ ಬರುವ ಹಣವನ್ನ BUCC ಕ್ರಿಕೆಟ್ ಅಭಿವೃದ್ದಿಗೆ ಬಳಸಿಕೊಳ್ಳಲಾಗುವುದು ಎಂದು ಕ್ಲಬ್  ಕಾರ್ಯದರ್ಶಿ ಶಾವಿರ್ ತಾರಾಪುರ್ ಹೇಳಿದರು.

ಇದನ್ನೂ ಓದಿ: ಅನಿಲ್ ಕುಂಬ್ಳೆ ರಾಜೀನಾಮೆ ಸೀಕ್ರೆಟ್ಸ್ ಬಿಚ್ಚಿಟ್ಟ ಲಕ್ಷ್ಮಣ್..!
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ದಿವಗಂತ ಕೆ ತಿಮ್ಮಪ್ಪಯ ಹಾಗೂ ಕೋಚ್ ದಿವಗಂತ ಕೆಕೆ ತಾರಪುರ್ ಮಾರ್ಗದರ್ಶನದಲ್ಲಿ ಆರಂಭಗೊಂಡ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ಇದೀಗ ಹೆಮ್ಮರವಾಗಿ ಬೆಳೆದಿದೆ. ಕೆಎಲ್ ರಾಹುಲ್, ಸ್ಟುವರ್ಟ್ ಬಿನ್ನಿ ಸೇರಿದಂತೆ ಯುವ ಕ್ರಿಕೆಟಿಗರೂ ಕೂಡ ಇದೇ ಕ್ಲಬ್‌ನಲ್ಲಿ ಪಳಗಿದ ಪ್ರತಿಭೆಗಳು ಅನ್ನೋದು ವಿಶೇಷ.

ಇದನ್ನೂ ಓದಿ: ಬಹುಕಾಲದ ಗೆಳತಿಯನ್ನು ವರಿಸಿದ ಸಂಜು ಸ್ಯಾಮ್ಸನ್

Follow Us:
Download App:
  • android
  • ios