Asianet Suvarna News Asianet Suvarna News

10 ವರ್ಷಗಳ ಬಳಿಕ ಟೂರ್ನಿ ಆಯೋಜಿಸಿದ ಪಾಕ್‌ಗೆ ಶಾಕ್: PAKvSL ಪಂದ್ಯ ರದ್ದು!

ಕಾಡಿ ಬೇಡಿ ಶ್ರೀಲಂಕಾ ತಂಡವನ್ನು ಒಪ್ಪಿಸಿ ತನ್ನ ನೆಲದಲ್ಲಿ ಕ್ರಿಕೆಟ್ ಸರಣಿ ಆಯೋಜಿಸಿದ ಪಾಕಿಸ್ತಾನಕ್ಕೆ ಮತ್ತೆ ಆಘಾತ ಎದುರಾಗಿದೆ. ಭಯೋತ್ಪಾದಕರ ದಾಳಿಯಿಂದ ನಿಂತು ಹೋಗಿದ್ದ ಕ್ರಿಕೆಟ್ ಸರಣಿಗೆ ಪುನಶ್ಚೇತನ ನೀಡಬೇಕಿದ್ದ ಈ ಸರಣಿಯ ಮೊದಲ ಪಂದ್ಯ ರದ್ದಾಗಿದೆ. 

Pakistan vs srilanka 1st odi cricket match abandon due to rain
Author
Bengaluru, First Published Sep 27, 2019, 7:34 PM IST

ಕರಾಚಿ(ಸೆ.27): ಒಂದಲ್ಲ, ಎರಡಲ್ಲ, ಬರೋಬ್ಬರಿ 10 ವರ್ಷದ ಬಳಿಕ ಪಾಕಿಸ್ತಾನ ತನ್ನ ನೆಲದಲ್ಲಿ ಏಕದಿನ ಕ್ರಿಕೆಟ್ ಸರಣಿ ಆಯೋಜಿಸಿದೆ. ಕ್ರಿಕೆಟ್ ಆಡೋ ರಾಷ್ಟ್ರಗಳನೆಲ್ಲಾ ಕೇಳಿ, ಯಾವ ತಂಡವೂ ಸಮ್ಮತಿಸದಾಗ ಕೊನೆಗೆ ಶ್ರೀಲಂಕಾ ತಂಡವನ್ನು ಒಪ್ಪಿಸಿ ಟೂರ್ನಿಗೆ ಸಜ್ಜಾಗಿತ್ತು. ಲಂಕಾ ತಂಡಕ್ಕೆ ಪ್ರಧಾನಿ ಲೆವೆಲ್  ಭದ್ರತೆ ನೀಡಿ ಪಾಕಿಸ್ತಾನಕ್ಕೆ ಕರೆಸಿಕೊಂಡಿತ್ತು. ಇನ್ನೇನು ಪಂದ್ಯ ಆರಂಭವಾಗಬೇಕು ಅನ್ನುವಷ್ಟರಲ್ಲೇ ಮತ್ತೊಂದು ಶಾಕ್ ಬರಸಿಡಿಸಿಲಿನಂತೆ ಪಾಕಿಸ್ತಾನಕ್ಕೆ ಅಪ್ಪಳಿಸಿದೆ.

ಇದನ್ನೂ ಓದಿ: ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್ ಸಚಿವನಿಗೆ ಲಂಕಾ ಚಾಟಿ!

2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿಗೆ ಬ್ರೇಕ್ ಬಿದ್ದಿತು. ಇದೀಗ 10 ವರ್ಷಗಳ ನಂತರ ಪಾಕಿಸ್ತಾನ ಏಕದಿನ ಸರಣಿಗೆ ಸಜ್ಜಾಗಿತ್ತು  ಇಂದು(ಸೆ.27) ಆಯೋಜಿಸಿದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಗಿದೆ. 

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಡೌಟ್; ನರಕ ಪ್ರವಾಸಕ್ಕೆ 10 ಲಂಕಾ ಕ್ರಿಕೆಟಿಗರ ನಕಾರ!

ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ 3 ಏಕದಿನ ಪಂದ್ಯಗಳಿಗೆ ಕರಾಚಿ ಮೈದಾನ ಆತಿಥ್ಯ ವಹಿಸಿದೆ. ಮಳೆಯಿಂದ ಮೈದಾನ ಸಂಪೂರ್ಣ ಒದ್ದೆಯಾಗಿರುವ ಕಾರಣ ಇನ್ನುಳಿದ 2 ಪಂದ್ಯದ ದಿನಾಂಕ ಬದಲಾಯಿಸಲಾಗಿದೆ. ಸೆ.29ರಂದು ನಡೆಯಬೇಕಿದ್ದ 2ನೇ ಏಕದಿನ ಪಂದ್ಯ ಇದೀಗ ಸೆ.30ಕ್ಕೆ ಹಾಗೂ 3ನೇ ಹಾಗೂ ಅಂತಿಮ ಪಂದ್ಯವನ್ನು ಅಕ್ಟೋಬರ್ 2ಕ್ಕೆ  ಮುಂದೂಡಲಾಗಿದೆ.

ಇದನ್ನೂ ಓದಿ: ಫೋಟೋ ಶೇರ್ ಮಾಡಿದ ಹಫೀಜ್; ಕೊಹ್ಲಿ ನಕಲು ಮಾಡಬೇಡಿ ಎಂದ ಫ್ಯಾನ್ಸ್

ಮುಂದಿನ ಪಂದ್ಯಗಳಿಗೆ ಮೈದಾನ ಸಜ್ಜುಗೊಳಿಸಲು ಸಮಯಾವಕಾಶ ಬೇಕಿದೆ. ಹೀಗಾಗಿ 2 ಮತ್ತು 3ನೇ ಏಕದಿನ ಪಂದ್ಯದ ದಿನಾಂಕ ಮುಂದೂಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿದೆ. 

 

2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಲಂಕಾದ ಮಹೇಲಾ ಜಯವರ್ಧನೆ, ಅಜಂತಾ ಮೆಂಡೀಸ್ ಸೇರಿದಂತೆ  ಹಲವು ಕ್ರಿಕೆಟಿಗರು ಗಾಯಗೊಂಡಿದ್ದರು. ಟೂರ್ನಿ ಮೊಟಕುಗೊಳಿಸಿ ತವರಿಗೆ ವಾಪಾಸ್ಸಾದ ಲಂಕಾ ತಂಡಕ್ಕೆ ಪಾಕ್ ಮರುವರ್ಷ ಆಹ್ವಾನ ನೀಡಿತ್ತು. ಆದರೆ ಲಂಕಾ ಮಾತ್ರವಲ್ಲ ಇತರ ಯಾವ ತಂಡಡವೂ ಪಾಕಿಸ್ತಾನದಲ್ಲಿ ಟೂರ್ನಿ ಆಡಲು ನಿರಾಕರಿಸಿತು. ಹೀಗಾಗಿ ಪಾಕಿಸ್ತಾನ ತವರು ನೆಲವಾಗಿ ದುಬೈ ಆಯ್ಕೆ ಮಾಡಿಕೊಂಡಿತು.

ಇದನ್ನೂ ಓದಿ: ಸೆ.27ರ ಟಾಪ್ 10 ನ್ಯೂಸ್; ಶುಕ್ರವಾರ ಬಿಜೆಪಿ ಮಂದಹಾಸ, HDKಗೆ ಸಂಕಷ್ಟ!

2015ರಲ್ಲಿ ಜಿಂಬಾಬ್ವೆ ಹಾಗೂ 2017ರಲ್ಲಿ ಶ್ರೀಲಂಕಾ ಟಿ20 ಸರಣಿಗಾಗಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಇದೀಗ 2019ರಲ್ಲಿ ಏಕದಿನ ಸರಣಿ ಆಯೋಜನೆ ವೇಳೆ ಪಾಕಿಸ್ತಾನ ತೀವ್ರ ಹಿನ್ನಡೆ ಅನುಭವಿಸಿತ್ತು. ಪಾಕಿಸ್ತಾನ ಪ್ರವಾಸಕ್ಕೆ ಶ್ರೀಲಂಕಾದ ಲಸಿತ್ ಮಾಲಿಂಗ ಸೇರಿದಂತೆ 10 ಕ್ರಿಕೆಟಿಗರು ನಿರಾಕರಿಸಿದ್ದರು. ಹೀಗಾಗಿ ಲಂಕಾ ಕ್ರಿಕೆಟ್ ಸಂಸ್ಥೆ ಪಾಕಿಸ್ತಾನ ಪ್ರವಾಸಕ್ಕೆ ಸಿದ್ಧರಿರುವ ಆಟಗಾರರನ್ನು ಆಯ್ಕೆ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿತು. ಆದರೆ ಎಲ್ಲಾ ಅಡೆ ತಡೆ ನಿವಾರಿಸಿ ಪಂದ್ಯ ಆರಂಭವಾಗಬೇಕು ಅನ್ನುವಷ್ಟರಲ್ಲೇ ಮಳೆರಾಯನ ಕೋಪಕ್ಕೆ ಪಂದ್ಯವೇ ರದ್ದಾಗಿ ಹೋಗಿದೆ. 
 

Follow Us:
Download App:
  • android
  • ios