Asianet Suvarna News Asianet Suvarna News

ವೈರಿ ರಾಷ್ಟ್ರದ ಪರ ಮಾತನಾಡುವ ಸಿಧುಗೆ ಪಾಕಿಸ್ತಾನದಿಂದ ಬಂಪರ್ ಆಫರ್ !

ಪಾಕಿಸ್ತಾನದಲ್ಲಿ ಚುನಾವಣೆ ಸ್ಪರ್ಧಿಸುವಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧುಗೆ ಸ್ವತಃ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆಹ್ವಾನ್ ನೀಡಿದ್ದಾರೆ. ಅಷ್ಟಕ್ಕೂ ಇಮ್ರಾನ್ ಈ ಅಹ್ವಾನ ನೀಡಿದ್ದೇಕೆ? ಇಲ್ಲಿದೆ ವಿವರ.

Pakistan Prime minister invite Navajot Singh Sidhu for contest pak election
Author
Bengaluru, First Published Nov 28, 2018, 4:55 PM IST

ಕರ್ತಾರ್‌ಪುರ್(ನ.28):  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸಚಿವ ನವಜೋತ್ ಸಿಂಗ್ ಸಿಧು ಬಾಂಧವ್ಯ ದಿನದಿಂದ ದಿನಕ್ಕೆ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ. ಪಾಕ್ ಪ್ರಧಾನಿ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾದ ಬಳಿಕ ಸಿಧು ಹಾಗೂ ಇಮ್ರಾನ್ ಸ್ನೇಹ ಮತ್ತಷ್ಟು ವಿಸ್ತರಿಸಿದೆ. ಇದೀಗ ಪಾಕಿಸ್ತಾನದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ನವಜೋತ್ ಸಿಂಗ್ ಸಿಧುಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆಹ್ವಾನ ನೀಡಿದ್ದಾರೆ.

 

 

ಪ್ರಮಾಣ ವಚನ ಕಾರ್ಯಕಮಕ್ಕೆ ಆಗಮಿಸಿದ ಬಳಿಕ ಸಿಧು ತೀವ್ರ ಟೀಕೆಗೆ ಗುರಿಯಾಗಿದ್ದನ್ನ ನಾನು ಗಮನಿಸಿದ್ದೇನೆ. ಸಿಧು ಪ್ರೀತಿಯ ಸಂದೇಶ ಹೊತ್ತು ಭಾರತದಿಂದ ಪಾಕಿಸ್ತಾನಕ್ಕೆ ಬಂದಿದ್ದರು. ಭಾರತದಿಂದ ಆಗಮಿಸಿದ ಸಿಧುಗೆ ಇಲ್ಲಿನ ಜನ ಪ್ರೀತಿಯ ಸ್ವಾಗತ ಕೋರಿದ್ದಾರೆ. ಇಲ್ಲಿ ಸಿಧು ಚುನಾವಣೆಗೆ ನಿಂತರೆ ಖಂಡಿತ ಗೆಲ್ಲುತ್ತಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಇಮ್ರಾನ್ ಖಾನ್ ಆಹ್ವಾನದ ಮೇರೆ ಬಾರಿ ವಿರೋಧ ವ್ಯಕ್ತವಾಗಿದ್ದರೂ, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಿದ ನವವೋಜ್ ಸಿಂಗ್ ಸಿಧು, ಇದೀಗ ಚುನಾವಣೆ ಸ್ಪರ್ಧಿಸೋ ಆಹ್ವಾನ ಸ್ವೀಕರಿಸ್ತಾರ ಅನ್ನೋ ಕುತೂಹಲ ಮನೆ ಮಾಡಿದೆ. ಇಮ್ರಾನ್ ಆಹ್ವಾನವನ್ನ ಸಿಧು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಪಾಕಿಸ್ತಾನದ  ಗುರು ನಾನಕ್ ಮಂದಿರ ದಿಂದ ಭಾರತ ಗುರದಾಸ್‌ಪುರ್ ಜಿಲ್ಲೆಯನ್ನ ಬೆಸೆಯುವ ರೋಡ್ ಕಾರಿಡಾರ್‌ಗೆ ಕರ್ತಾರ್‌ಪುರ್‌ನಲ್ಲಿ ಶಿಲನ್ಯಾಸ ಮಾಡಿದ ಇಮ್ರಾನ್ ಖಾನ್, ಭಾರತದ ಜೊತೆ ಪ್ರೀತಿ ಹಾಗೂ ಸ್ನೇಹಕ್ಕೆ ಸದಾ ಸಿದ್ದ ಎಂದರು. ನೂತನ ಕಾರಿಡಾರ್‌ನಿಂದ ಭಾರತದ ಗುರು ನಾನಕ್ ಭಕ್ತಾದಿಗಳು ಸುಲಭವಾಗಿ ಪಾಕಿಸ್ತಾನ ಕರ್ತಾರ್ ದರ್ಬಾರ್ ಸಾಹಿಬ್ ಗುರುದ್ವಾರ ತಲುಪಲು ಸಾಧ್ಯವಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಇದೇ ವೇಳೆ ಸಿಧುಗೆ ಚುನಾವಣೆ ಸ್ಪರ್ಧಿಸುವಂತೆ ಆಹ್ವಾನಿಸಿ ಮತ್ತೆ ಸಿಧು ಹಾಗೂ ಇಮ್ರಾನ್ ಸುದ್ದಿಯಾಗಿದ್ದಾರೆ.

Follow Us:
Download App:
  • android
  • ios