Asianet Suvarna News Asianet Suvarna News

(Video)1 ಬಾಲ್ ಮಾಡಲು 5 ನಿಮಿಷ ತೆಗೆದುಕೊಂಡ ಪಾಕ್ ಬೌಲರ್!: ಅಂ. ರಾ ಕ್ರಿಕೆಟ್ನಲ್ಲಿ ನಿಧಾನ ಗತಿ ಬಾಲ್

ಸಾಮಾನ್ಯವಾಗಿ ಒಬ್ಬ ಫಾಸ್ಟ್​ ಬೌಲರ್​​​ ಒಂದು ಓವರ್​​ ಕಂಪ್ಲೀಟ್​​ ಮಾಡಲು ಅಮ್ಮಮ್ಮ ಅಂದ್ರೆ 3 ರಿಂದ 4 ನಿಮಿಷ ತೆಗೆದುಕೊಳ್ತಾನೆ. ಆದ್ರೆ ಇಲ್ಲೊಬ್ಬ ಪಾಕಿಸ್ತಾನದ ಬೌಲರ್​​​ ಒಂದು ಬಾಲ್​ ಮಾಡಲೇ 5 ನಿಮಿಷ ತೆಗೆದುಕೊಂಡಿದ್ದಾನೆ. ಅವನ ಕೋಚೇ ಇವನ ಬೌಲಿಂಗ್​ ನೋಡೋಕಾಗದೇ ಮ್ಯಾಚ್​ ನೋಡೋದನ್ನೇ ಬಿಟ್ಟು ಓಡಿ ಹೋಗಿದ್ದಾನೆ. ಅಷ್ಟಕ್ಕೂ ಆತ ಒಂದು ಬಾಲ್​ ಮಾಡಲು 5 ನಿಮಿಷ ತೆಗೆದುಕೊಂಡಿದ್ದೇಕೆ.?

Pakistan fast bowler Wahab Riaz aborts run up five times in a row

ಸಾಮಾನ್ಯವಾಗಿ ಒಬ್ಬ ಫಾಸ್ಟ್​ ಬೌಲರ್​​​ ಒಂದು ಓವರ್​​ ಕಂಪ್ಲೀಟ್​​ ಮಾಡಲು ಅಮ್ಮಮ್ಮ ಅಂದ್ರೆ 3 ರಿಂದ 4 ನಿಮಿಷ ತೆಗೆದುಕೊಳ್ತಾನೆ. ಆದ್ರೆ ಇಲ್ಲೊಬ್ಬ ಪಾಕಿಸ್ತಾನದ ಬೌಲರ್​​​ ಒಂದು ಬಾಲ್​ ಮಾಡಲೇ 5 ನಿಮಿಷ ತೆಗೆದುಕೊಂಡಿದ್ದಾನೆ. ಅವನ ಕೋಚೇ ಇವನ ಬೌಲಿಂಗ್​ ನೋಡೋಕಾಗದೇ ಮ್ಯಾಚ್​ ನೋಡೋದನ್ನೇ ಬಿಟ್ಟು ಓಡಿ ಹೋಗಿದ್ದಾನೆ. ಅಷ್ಟಕ್ಕೂ ಆತ ಒಂದು ಬಾಲ್​ ಮಾಡಲು 5 ನಿಮಿಷ ತೆಗೆದುಕೊಂಡಿದ್ದೇಕೆ.?

ಟೆಸ್ಟ್​​​ ಕ್ರಿಕೆಟ್​​ ಅಂದ್ರೆ ಕ್ರಿಕೆಟ್​​ ಪ್ರೇಮಿಗಳು ಕೊಂಚ ದೂರ ಸರಿತ್ತಾರೆ. ಟೆಸ್ಟ್​​ ಕ್ರಿಕೆಟ್​​​ನ ಫಾಲೋ ಮಾಡೋದು ತುಂಬಾನೇ ವಿರಳ. ಕಾರಣ ಟೆಸ್ಟ್​​ ಕ್ರಿಕೆಟ್​​ ಅನ್ನೋದು ತುಂಬಾನೆ ಸ್ಲೋ. ಸ್ಪೀಡಾಗಿ ಓಡ್ತಿರೋ ದುನಿಯಾದಲ್ಲಿ ಸದ್ಯ ಟೆಸ್ಟ್​​​ ಕ್ರಿಕೆಟ್​​​ ನಶಿಸಿ ಹೋಗ್ತಿದೆ. ಆದ್ರೆ ಇಲ್ಲೊಬ್ಬ ಭೂಪ ಟೆಸ್ಟ್​​​ ಕ್ರಿಕೆಟ್​​​​ನಲ್ಲಿ ಒಂದು ಬಾಲ್​ ಮಾಡಲು 5 ನಿಮಿಷ ತೆಗೆದುಕೊಂಡು ಅಭಿಮಾನಿಗಳನ್ನ ಮತ್ತಷ್ಟು ಬೋರ್​​​​​ ಮಾಡಿಸಿದ್ದಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ವಿಚಿತ್ರ ದಾಖಲೆಯೊಂದನ್ನ ಮಾಡಿದ್ದಾನೆ.

1 ಬಾಲ್​ ಮಾಡಲು 5 ನಿಮಿಷ ತೆಗೆದುಕೊಂಡ ಪಾಕ್ ಬೌಲರ್​​​: ಸರಿಯಾದ ರನ್​ ಅಪ್​​ ಸಿಗದೆ ಪರದಾಡಿದ ​​ ವಹಾಬ್​ ರಿಯಾಜ್​​

1 ಬಾಲ್​ ಮಾಡಲು 5 ನಿಮಿಷ ತೆಗೆದುಕೊಂಡ ಆ ಭೂಪ ಬೇಱರು ಅಲ್ಲ. ಪಾಕಿಸ್ತಾನದ ವೇಗಿ ವಹಾಬ್​ ರಿಯಾಜ್​​. ಸದ್ಯ ಲಂಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್​​ನ ಮೊದಲ ಇನ್ನಿಂಗ್ಸ್​​ನಲ್ಲಿ ವಹಾಬ್​ ರಿಯಾಜ್​ 111ನೇ ಓವರ್​​​ ಅನ್ನ ಬೌಲ್​​ ಮಾಡ್ತಿದ್ರು. ಮೊದಲ 4 ಎಸೆತಗಳನ್ನ ಪೂರ್ತಿಗೊಳಿಸಿದ ನಂತರ 5 ಬಾಲ್​ ಮಾಡಲು 5 ನಿಮಿಷ ತೆಗೆದುಕೊಂಡ್ರು. ಸರಿಯಾದ ಲೈನ್​ ಅಪ್​ ಸಿಗದೇ ಕ್ರೀಸ್​​​ವರೆಗೆ ಓಡಿ ಬಂದು ಬೌಲ್​ ಮಾಡದೆ ವಾಪಸ್​​​ ಹೋಗುತ್ತಿದ್ರು. ಇದು ನೆರೆದಿದ್ದ ಪ್ರೇಕ್ಷಕರನ್ನ ಅಚ್ಚರಿ ಪಡಿಸಿತು.

ಕೋಚ್​​ ಅರ್ಥರ್​'ನನ್ನೇ ದಂಗುಬಡಿಸಿದ ರಿಯಾಜ್​: ರಿಯಾಜ್​ ರನ್'​ಅಪ್'​ಗೆ ಮೈಕ್​​ ಅರ್ಥರ್​​​ ಕೆಂಡಮಂಡಲ

ಒಂದು ಕಡೆ ರಿಯಾಜ್​ ಸರಿಯಾದ ರನ್​ ಅಪ್​ ಸಿಗದೆ ಪರದಾಡುತ್ತಿದ್ರೆ, ಡ್ರಸ್ಸಿಂಗ್​ ಪೆವಲಿಯನ್​ನಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದ ಕೋಚ್​​​ ಮೈಕ್​ ಅರ್ಥರ್, ರಿಯಾಜ್​ರ  ಪರದಾಟ ನೋಡೋಕಾಗದೇ ಹತಾಷಗೊಂಡು ಡ್ರೆಸ್ಸಿಂಗ್​ ರೂಮ್​ ಒಳಗೂ-ಹೊರಗೂ ಓಡಾಡುತ್ತಿದ್ರು.  

ಕೋಚ್​​ ಕಥೆ ಇದಾದರೆ, ಇನ್ನೂ ಮೈದಾನದಲ್ಲೇ ರಿಯಾಜ್​ನ ಎಡವಟ್ಟನ್ನ ಹತ್ತಿರದಿಂದ ನೋಡುತ್ತಿದ್ದ ನಾಯಕ ಸರ್ಫರಾಜ್​​ ಓವರ್​​​ ಬಳಿಕ ಕುಡಿಬೇಕಿದ್ದ ನೀರನ್ನ ಓವರ್​​​ ಮಧ್ಯದಲ್ಲೇ ತರಿಸಿ ಕುಡಿದ್ರು.

ಕೊನೆಗೆ ಅಂದ್ರೆ ಬರೋಬ್ಬರಿ 5 ತಪ್ಪು ರನ್​ ಅಪ್​​ ಮಾಡಿದ ನಂತರ 6ನೇ ಬಾರಿಗೆ 4 ರಿಯಾಜ್​ ಬೌಲ್​ ಮಾಡಿದ್ರು. ಆಗ ಕೋಚ್​​ ಮತ್ತು ನಾಯಕ ನಿಟ್ಟುಸಿರುಬಿಟ್ರು. ಆದ್ರೆ ಒಂದು ಬಾಲ್​ ಮಾಡಲು ರಿಯಾಜ್​​ ಇನ್ನಿಲ್ಲದಂತೆ ಪರದಾಡಿದನ್ನ ಕಂಡ ಕೆಲವರು ಅಚ್ಚರಿ ಪಟ್ರೆ ಇನ್ನೂ ಕೆಲವರು ಹತಾಶಕೊಳ್ಳಗಾಗಿದ್ರು. ಏನೇ ಆದ್ರೂ ಸದ್ಯ ರಿಯಾಜ್'​ರ ಮೊನ್ನೆಯ ಎಡವಟ್ಟು ಭಾರಿ ಸದ್ದು ಮಾಡುತ್ತಿದ್ದು ಇಯಾಜ್​​'ರನ್ನ ಇನ್ನಿಲ್ಲದಂತೆ ಹೀಯ್ಯಾಳಿಸುತ್ತಿದ್ದಾರೆ.

 

 

Follow Us:
Download App:
  • android
  • ios