Asianet Suvarna News Asianet Suvarna News

IPL ಆಡುತ್ತಿರುವ ಪಾಂಡ್ಯ, ರಾಹುಲ್’ಗೆ ಸಂಕಷ್ಟ..!

ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಕೆ.ಎಲ್ ರಾಹುಲ್ ’ಕಾಫಿ ವಿತ್ ಕರಣ್’ ವಿವಾದ ಇನ್ನೂ ಬಗೆಹರಿದಿಲ್ಲ, ಇಲ್ಲಿದೆ ಈ ಕುರಿತ ಲೇಟೆಸ್ಟ್ ವಿವರ...

Ombudsman Sends Notices To Hardik Pandya KL Rahul For Deposition In Koffee Controversy
Author
New Delhi, First Published Apr 2, 2019, 1:33 PM IST

ನವದೆಹಲಿ[ಏ.02]: ಮಹಿಳೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತ ತಂಡದ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್ ರಿಗೆ ವಿಚಾರಣೆಗೆ ಹಾಜರಾಗುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನಿಖಾಧಿಕಾರಿ ನಿವೃತ್ತ ನ್ಯಾಯಾಮೂರ್ತಿ ಡಿ.ಕೆ. ಜೈನ್ ನೋಟಿಸ್ ನೀಡಿದ್ದಾರೆ.

ಕಾಫಿ ವಿವಾದ: ಪಾಂಡ್ಯ ರಾಹುಲ್‌ ವಿರುದ್ಧ ದೂರು!

‘ಕಾಫಿ ವಿತ್ ಕರಣ್’ ಖಾಸಗಿ ಟೀವಿ ಶೋನಲ್ಲಿ ಈ ಇಬ್ಬರೂ ಆಟಗಾರರು ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಹಾರ್ದಿಕ್ ಪಾಂಡ್ಯ-ಕೆ.ಎಲ್ ರಾಹುಲ್ ಸೆಕ್ಸಿ ಕಾಮೆಂಟ್ ಮಾಡುವ ವ್ಯಾಪಕ ಟೀಕೆಗೆ ಗುರಿಯಾಗಿದ್ದು ಮಾತ್ರವಲ್ಲದೇ ಆಸಿಸ್ ಪ್ರವಾಸದಿಂದಲೂ ಹೊರಗುಳಿದಿದ್ದರು. ಇದಷ್ಟೇ ಅಲ್ಲದೇ ಈ ಇಬ್ಬರು ಕ್ರಿಕೆಟಿಗರು ಬೇಷರತ್ತು ಕ್ಷಮೆಯನ್ನು ಕೇಳಿದ್ದರು. 

’ಕಾಫಿ ವಿತ್ ಕರುಣ್’: ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ ಕರುಣ್ ಹೇಳಿದ್ದೇನು?

ಪ್ರಸ್ತುತ 12ನೇ ಆವೃತ್ತಿಯ ಐಪಿಎಲ್’ನಲ್ಲಿ ಕೆ.ಎಲ್ ರಾಹುಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿದ್ದಾರೆ.  

Follow Us:
Download App:
  • android
  • ios