Asianet Suvarna News Asianet Suvarna News

ಜೋಕೋವಿಕ್ ನೂತನ ಯುಎಸ್ ಓಪನ್ ಚಾಂಪಿಯನ್; ಟಾಪ್ 3 ಪಟ್ಟಿಯಲ್ಲಿ ಸ್ಥಾನ

ಗ್ರ್ಯಾಂಡ್‌ಸ್ಲಾಮ್ ವಿಜೇತರ ಪಟ್ಟಿಯಲ್ಲಿ ಜೋಕೋವಿಚ್ ಸದ್ಯ 3ನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ಯುಎಸ್ ಚಾಂಪಿಯನ್ ಆಗುವ ಮೂಲಕ ಶ್ರೇಯಾಂಕದಲ್ಲಿ ಜಿಗಿತ ಕಂಡಿರುವ ಜೋಕೋವಿಚ್ 3ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಮೊಣಕೈ ನೋವಿಗೆ ತುತ್ತಾಗಿದ್ದರಿಂದ ಜೋಕೋ ಶ್ರೇಯಾಂಕದಲ್ಲಿ ಹಿಂದೆ ಬಿದ್ದಿದ್ದರು. 

Novak Djokovic climbs back into top three in tennis world rankings
Author
New York, First Published Sep 11, 2018, 12:05 PM IST

ನ್ಯೂಯಾರ್ಕ್[ಸೆ.11]: ವರ್ಷಾಂತ್ಯದ ಪ್ರತಿಷ್ಠಿತ ಗ್ರ್ಯಾಂಡ್‌ಸ್ಲಾಮ್ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸರ್ಬಿಯಾದ ನೊವಾಕ್ ಜೋಕೋವಿಕ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ 3ನೇ ಬಾರಿ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಸಾಧನೆ ಮಾಡಿದರು.

ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಜೋಕೋವಿಚ್ 6-3, 7-6, 6-3 ಸೆಟ್‌ಗಳಲ್ಲಿ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೋಟ್ರೋ ವಿರುದ್ಧ ಜಯ ಪಡೆದರು. ಇದರೊಂದಿಗೆ 14 ಗ್ರ್ಯಾಂಡ್‌ಸ್ಲಾಮ್ ಗೆದ್ದ ಟೆನಿಸ್ ದಿಗ್ಗಜ ಅಮೆರಿಕದ ಪೆಟೆ ಸ್ಯಾಂಪ್ರಸ್ ದಾಖಲೆಯನ್ನು ಜೋಕೋವಿಕ್ ಸರಿಗಟ್ಟಿದ್ದಾರೆ. ಅಲ್ಲದೇ ಅಗ್ರ ಶ್ರೇಯಾಂಕಿತ ಸ್ಪೇನ್‌ನ ನಡಾಲ್ (17 ಗ್ರ್ಯಾಂಡ್‌ಸ್ಲಾಮ್) ಮತ್ತು ರೋಜರ್ ಫೆಡರರ್ (20 ಗ್ರ್ಯಾಂಡ್‌ಸ್ಲಾಮ್) ಕ್ರಮವಾಗಿ 3 ಹಾಗೂ 6 ಗ್ರ್ಯಾಂಡ್‌ಸ್ಲಾಮ್ ಹಿನ್ನಡೆಯಲ್ಲಿ ಜೋಕೋವಿಚ್ ಇದ್ದಾರೆ.  ಗ್ರ್ಯಾಂಡ್‌ಸ್ಲಾಮ್ ವಿಜೇತರ ಪಟ್ಟಿಯಲ್ಲಿ ಜೋಕೋವಿಚ್ ಸದ್ಯ 3ನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ಯುಎಸ್ ಚಾಂಪಿಯನ್ ಆಗುವ ಮೂಲಕ ಶ್ರೇಯಾಂಕದಲ್ಲಿ ಜಿಗಿತ ಕಂಡಿರುವ ಜೋಕೋವಿಚ್ 3ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಮೊಣಕೈ ನೋವಿಗೆ ತುತ್ತಾಗಿದ್ದರಿಂದ ಜೋಕೋ ಶ್ರೇಯಾಂಕದಲ್ಲಿ ಹಿಂದೆ ಬಿದ್ದಿದ್ದರು. 

2011 ಮತ್ತು 2015ರಲ್ಲಿ ಯುಎಸ್ ಚಾಂಪಿಯನ್ ಆಗಿದ್ದ ಜೋಕೋ, ಈ ವರ್ಷ ವಿಂಬಲ್ಡನ್ ಬಳಿಕ ಸಿನ್ಸಿನಾಟಿ ಇದೀಗ ಮತ್ತೆ ಯುಎಸ್ ಪ್ರಶಸ್ತಿ ಗೆದ್ದು ರ‍್ಯಾಂಕಿಂಗ್’ನಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ.
ಪಂದ್ಯದ ಮೊದಲ ಸೆಟ್‌ನಲ್ಲಿ ಸುಲಭ ಮುನ್ನಡೆ ಪಡೆದ ಜೋಕೋವಿಚ್‌ಗೆ, ಎದುರಾಳಿ ಆಟಗಾರ 2ನೇ ಸೆಟ್‌ನಲ್ಲಿ ಉತ್ತಮ ಪೈಪೋಟಿ ನೀಡಿದರು. ಟೈ ಬ್ರೇಕರ್‌ಗೆ ತಿರುಗಿದ ಸೆಟ್‌ನಲ್ಲಿ ಜೋಕೋ ಕೇವಲ 1 ಪಾಯಿಂಟ್ ಅಂತರದಲ್ಲಿ ಮುನ್ನಡೆ ಸಾಧಿಸಿದರು. ಇನ್ನು 3ನೇ ಸೆಟ್‌ನಲ್ಲಿ ಅರ್ಜೆಂಟೀನಾದ ಆಟಗಾರ ಸಾಕಷ್ಟು ತಪ್ಪುಗಳನ್ನು ಮಾಡಿದರು. ಇದರ ಸಂಪೂರ್ಣ ಲಾಭ ಎತ್ತಿದ
ಜೋಕೋವಿಚ್ ಮುನ್ನಡೆ ಸಾಧಿಸಿ ಪಂದ್ಯ ಗೆದ್ದರು.

3ನೇ ಸ್ಥಾನಕ್ಕೆ ಜಿಗಿದ ಜೋಕೋ: ಯುಎಸ್ ಓಪನ್ ಕಿರೀಟ ಸೇರಿದಂತೆ ಪ್ರಸಕ್ತ ವರ್ಷದಲ್ಲಿ 2 ಗ್ರ್ಯಾಂಡ್‌ಸ್ಲಾಮ್ ಗೆದ್ದ ಸರ್ಬಿಯಾದ ನೊವಾಕ್ ಜೋಕೋವಿಚ್, ಸೋಮವಾರ ನೂತನವಾಗಿ ಬಿಡುಗಡೆಯಾದ ಎಟಿಪಿ ಟೆನಿಸ್ ರ‍್ಯಾಂಕಿಂಗ್’ನಲ್ಲಿ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸೆಮೀಸ್‌ನಲ್ಲಿ ಸೋತು ಹೊರಬಿದ್ದಿದ್ದ ಸ್ಪೇನ್‌ನ ರಾಫೆಲ್ ನಡಾಲ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದರೆ, ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ 2ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಅರ್ಜೆಂಟೀನಾದ ಜುವಾನ್ ಡೆಲ್ ಪೊಟ್ರೊ 4ನೇ ಸ್ಥಾನಕ್ಕೆ ಕುಸಿದಿದ್ದು, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ 5ನೇ ಸ್ಥಾನಕ್ಕೇರಿದ್ದಾರೆ. ಉಳಿದಂತೆ ಮರಿನ್ ಸಿಲಿಕ್, ಗ್ರಿಗೊರ್ ಡಿಮಿಟ್ರಿವೊ ನಂತರದ ಸ್ಥಾನ ಪಡೆದಿದ್ದಾರೆ.

ಅಗ್ರ 10ರಲ್ಲಿ ಸ್ಥಾನ ಪಡೆದ ಒಸಾಕ: ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆದ್ದ ಜಪಾನ್‌ನ ಯುವ ಆಟಗಾರ್ತಿ ನವೊಮಿ ಒಸಾಕ, ನೂತನ ಡಬ್ಲ್ಯೂಟಿಎ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಫೈನಲ್‌ನಲ್ಲಿ ಮಾಜಿ ಅಗ್ರ ಶ್ರೇಯಾಂಕಿತೆ ಸೆರೆನಾರನ್ನು ಮಣಿಸಿದ ಒಸಾಕ ಯುಎಸ್ ಚಾಂಪಿಯನ್ ಆಗಿದ್ದರು. ಒಸಾಕ 7ನೇ ಸ್ಥಾನ ಪಡೆದಿದ್ದಾರೆ. ಇನ್ನು ರೋಮೇನಿಯಾದ ಸಿಮೊನಾ ಹಾಲೆಪ್ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. 
 

Follow Us:
Download App:
  • android
  • ios