sports
By Suvarna Web Desk | 03:25 PM August 12, 2017
ವಿಶ್ವದಾಖಲೆ ಸರಿಗಟ್ಟಿದ ಕನ್ನಡಿಗ ಕೆ.ಎಲ್ ರಾಹುಲ್

Highlights

ರಾಹುಲ್ ಸತತ 7 ಅರ್ಧಶತಕ ದಾಖಲಿಸುವ ಮೂಲಕ ಕರ್ನಾಟಕದವರೇ ಆದ ಗುಂಡಪ್ಪ ವಿಶ್ವನಾಥ್ ಹಾಗೂ ರಾಹುಲ್ ದ್ರಾವಿಡ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ.

ಪಲ್ಲೆಕೆಲೆ(ಆ.12): ಭಾರತ ತಂಡದ ಆರಂಭಿಕ ಬ್ಯಾಟ್ಸ್'ಮನ್ ಕನ್ನಡಿಗ ಕೆ.ಎಲ್. ರಾಹುಲ್ ಸತತ ಏಳು ಅರ್ಧಶತಕಗಳನ್ನು ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ ಆರನೇ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ.

ಶ್ರೀಲಂಕಾ ವಿರುದ್ಧ ಪಲ್ಲೆಕೆಲೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಈ ವಿನೂತನ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್'ನಲ್ಲಿ ಸತತ 7 ಅರ್ಧಶತಕ ಸಿಡಿಸಿದ ವೆಸ್ಟ್ ಇಂಡಿಸ್'ನ ಎವಾರ್ಟನ್ ವೀಕ್ಸ್, ಶಿವನಾರಾಯಣ್ ಚಂದ್ರಪಾಲ್, ಶ್ರೀಲಂಕಾದ ಕುಮಾರ್ ಸಂಗಾಕ್ಕರ, ಆಸ್ಟ್ರೇಲಿಯಾದ ಕ್ರಿಸ್ ರೋಜರ್ಸ್, ಮತ್ತು ಜಿಂಬಾಬ್ವೆಯ ಆ್ಯಂಡಿ ಪ್ಲವರ್ ಅವರೊಂದಿಗೆ ರಾಹುಲ್ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ರಾಹುಲ್ ಸತತ 7 ಅರ್ಧಶತಕ ದಾಖಲಿಸುವ ಮೂಲಕ ಕರ್ನಾಟಕದವರೇ ಆದ ಗುಂಡಪ್ಪ ವಿಶ್ವನಾಥ್ ಹಾಗೂ ರಾಹುಲ್ ದ್ರಾವಿಡ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಈ ಇಬ್ಬರು ಬ್ಯಾಟ್ಸ್'ಮನ್'ಗಳು ಸತತ 6 ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದರು. ಗುಂಡಪ್ಪ ವಿಶ್ವನಾಥ್ 1978ರಲ್ಲಿ 6 ಅರ್ಧಶತಕ ದಾಖಲಿಸಿದ್ದರೆ, ರಾಹುಲ್ ದ್ರಾವಿಡ್ 1998ರಲ್ಲಿ ಈ ಸಾಧನೆಯನ್ನು ಸರಿಗಟ್ಟಿದ್ದರು.

ಕೆ.ಎಲ್. ರಾಹುಲ್ ಕಳೆದ 7 ಇನಿಂಗ್ಸ್'ನಲ್ಲಿ ಬಾರಿಸಿದ ಸ್ಕೋರ್ ಹೀಗಿದೆ; 90, 51, 67, 60, 50*, 57 ಹಾಗೂ ಇಂದಿನ ಪಂದ್ಯದ ಸ್ಕೋರ್ 85

Show Full Article


Recommended


bottom right ad