sports
By Suvarna Web desk | 06:47 AM February 17, 2017
300 ರನ್ ಹೊಡೆದ ನಂತರ ಕರುಣ್ ನಾಯರ್ ಈಗ ಮತ್ತೆ ಭಾರಿ ಸುದ್ದಿಯಲ್ಲಿದ್ದಾರೆ?

Highlights

ಕರುಣ್ ದಾಖಲಿಸಿದ ಮೊದಲ ತ್ರಿಶತಕ ರನ್'ಗಳಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಬೃಹತ್ 759 ರನ್ ದಾಖಲಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈಗ ಮತ್ತೆ ಅವರು ಸುದ್ದಿಯಲ್ಲಿರುವುದು ಕಾರು ಖರೀದಿಯ ಕಾರಣಕ್ಕೆ.

ಬೆಂಗಳೂರು(ಫೆ.17):ಟೆಸ್ಟ್ ಆಡಿದ ಮೂರನೇ ಪಂದ್ಯದಲ್ಲಿ ತ್ರಿಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದವರು ಕನ್ನಡಿಗ ಕರುಣ್ ನಾಯರ್. ಶತಕ ಹೊಡೆಯುವುದಕ್ಕಿಂತ ಮುನ್ನವೇ ತ್ರಿಶತಕ ದಾಖಲಿಸಿದ ವಿಶ್ವದ ಮೂರನೇ ಆಟಗಾರ ಕರುಣ್.

ಕರುಣ್ ದಾಖಲಿಸಿದ ಮೊದಲ ತ್ರಿಶತಕ ರನ್'ಗಳಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಬೃಹತ್ 759 ರನ್ ದಾಖಲಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈಗ ಮತ್ತೆ ಅವರು ಸುದ್ದಿಯಲ್ಲಿರುವುದು ಕಾರು ಖರೀದಿಯ ಕಾರಣಕ್ಕೆ. ಇದೇನಿದು ಕಾರನ್ನು ಸಾಮಾನ್ಯರು ಒಳಗೊಂಡು ಎಲ್ಲರು ಕೊಂಡುಕೊಳ್ಳುತ್ತಾರೆ. ಅದರಲ್ಲೇನಿದೆ ವಿಶೇಷ ಅಂತೀರಾ.

ಕಾರಿನಲ್ಲಿಯೇ ವಿಶೇಷವಿದೆ. ಕರುಣ್ ಫೋರ್ಡ್ ಮುಸ್ತಾಂಗ್ ಕಾರು ಖರೀದಿಸಿದ್ದು, ಅದರ ಬೆಲೆ 90 ಲಕ್ಷ ರೂ. ತುಂಬ ವಿಶೇಷವಾಗಿರುವುದು ಇನ್ನು ಇದೆ. ಅದು ಕಾರಿನ ನಂಬರ್.ಕರುಣ್ ಖರೀದಿಸಿರುವ ಕಾರಿನ ನಂಬರ್'ಗೂ ಅವರು ತ್ರಿಶತಕ ಮೊತ್ತ ಎರಡೂ ಒಂದೇ ಆಗಿದೆ. ಅವರು ದಾಖಲಿಸಿದ ಮೊತ್ತ 303 ಕರಣ್ ಕಾರಿನ ನಂಬರ್ 'KA 03 NA 303'.  KA ಎಂದರೆ ಕರಣ್  03 ಅಂದರೆ ಆಡಿರುವುದು ಕೇವಲ ಮೂರು ಟೆಸ್ಟ್'ಗಳು, NA ಯ ಅರ್ಥ ನಾಯರ್ 303 ಹೊಡೆದಿರುವ ರನ್.

ಭಾರತದಲ್ಲಿ ವೀರೇಂದ್ರ ಸೆಹ್ವಾಗ್ ನಂತರ  ಕರುಣ್ ನಾಯರ್ ಮಾತ್ರ ತ್ರಿಶತಕ ದಾಖಲಿಸಿರುವುದು. ತಾವು ಖರೀದಿಸಿರುವ ಕಾರನ್ನು ತಮ್ಮ ಇನ್'ಸ್ಟಗ್ರಾಮ್'ನಲ್ಲಿ ಹಾಕಿಕೊಂಡಿದ್ದಾರೆ.

Show Full Article


Recommended


bottom right ad