Asianet Suvarna News Asianet Suvarna News

ರಾಹುಲ್, ಪಾಂಡೆ ಅಬ್ಬರ; ಕರ್ನಾಟಕಕ್ಕೆ ಭರ್ಜರಿ ಗೆಲುವು!

ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಗೆಲುವಿನ ಹಳಿಗೆ ಮರಳಿದೆ. ಚತ್ತೀಸ್‌ಗಡ ವಿರುದ್ದ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಿದ ಕರ್ನಾಟಕ ಗೆಲುವಿನ ನಗೆ ಬೀರಿದೆ.

Karnataka won by 79 runs against Chhattisgarh in vijay hazare tourney
Author
Bengaluru, First Published Oct 2, 2019, 9:02 PM IST

ಬೆಂಗಳೂರು(ಅ.02): ಮನೀಶ್ ಪಾಂಡೆ ಭರ್ಜರಿ ಶತಕ ಹಾಗೂ ಕೆಎಲ್ ರಾಹುಲ್ ಅರ್ಧಶತಕದ ನೆರವಿನಿಂದ ಚತ್ತಿಸ್‌ಗಡ ವಿರುದ್ದ ನಡೆದ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ 79  ರನ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆಡಿದ 4 ಪಂದ್ಯದಲ್ಲಿ 3 ಗೆಲುವು ಸಾಧಿಸೋ ಮೂಲಕ ಎಲೈಟ್ ಪೂಲ್ ಗುಂಪಿನಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.

ಇದನ್ನೂ ಓದಿ: ರೋಹಿತ್ ಒಂದು ಶತಕ; ಹಲವಾರು ದಾಖಲೆ ನಿರ್ಮಾಣ..!

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 285 ರನ್ ಸಿಡಿಸಿತು. ಕೆಎಲ್ ರಾಹುಲ್ 81 ರನ್ ಸಿಡಿಸಿದರೆ, ಮನೀಶ್ ಪಾಂಡೆ 142 ರನ್ ಚಚ್ಚಿದರು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ನಿಂದ ಕರ್ನಾಟಕ ಉತ್ತಮ ಮೊತ್ತ ಪೇರಿಸಿತು. 

ಇದನ್ನೂ ಓದಿ: BCCI ನೊಟೀಸ್ ಬೆನ್ನಲ್ಲೇ CACಗೆ ಕಪಿಲ್ ದೇವ್ ರಾಜಿನಾಮೆ!

286 ರನ್ ಗುರಿ ಪಡೆದ ಚತ್ತೀಸ್‌ಗಡ ತಂಡಕ್ಕೆ ಪ್ರಸಿದ್ಧ ಕೃಷ್ಣ ಹಾಗೂ ಶ್ರೇಯಸ್ ಗೋಪಾಲ್ ಶಾಕ್ ನೀಡಿದರು. ಇಬ್ಬರು ತಲಾ 3 ವಿಕೆಟ್ ಪಡೆದರೆ, ರೋನಿತ್ ಮೊರೆ 2 ವಿಕೆಟ್ ಕಬಳಿಸಿದರು. ಕರ್ನಾಟಕ ತಂಡದ ಅತ್ಯುತ್ತಮ ದಾಳಿಗೆ ಕುಸಿದ ಚತ್ತೀಸ್‌ಗಡ 44.4 ಓವರ್‌ಗಳಲ್ಲಿ 206 ರನ್‌ಗೆ ಆಲೌಟ್ ಆಯಿತು. ಇದರೊಂದಿಗೆ ಕರ್ನಾಟಕ 79 ರನ್ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಕರ್ನಾಟಕ 4 ಅಂಕ ಪಡೆಯಿತು.
 

Follow Us:
Download App:
  • android
  • ios