sports
By Suvarna Web Desk | 07:33 AM February 16, 2017
ಟೀಂ ಇಂಡಿಯಾ ವಿರುದ್ಧ ಸ್ಲೆಡ್ಜಿಂಗ್ ಪ್ಲಾನ್

Highlights

ಶತಾಯ ಗತಾಯ ಟೀಂ ಇಂಡಿಯವನ್ನು ಮಣಿಸಲೇಬೇಕು ಎಂದು ಪಣತೊಟ್ಟಿರುವ ಆಸ್ಟ್ರೆಲಿಯಾ ಹಲವು ರಣತಂತ್ರಗಳನ್ನು ರೂಪಿಸುತ್ತಿದೆ.

ಹೈದರಾಬಾದ್​​ (ಫೆ.16): ಫೆಬ್ರವರಿ 23ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಟೆಸ್ಟ್​​ ಸರಣಿಗೆ ಸ್ಮಿತ್​​ ಪಡೆ ಇನ್ನಿಲ್ಲದ ಕಸರತ್ತು ನಡೆಸಿದೆ.

ಶತಾಯ ಗತಾಯ ಟೀಂ ಇಂಡಿಯವನ್ನು ಮಣಿಸಲೇಬೇಕು ಎಂದು ಪಣತೊಟ್ಟಿರುವ ಆಸ್ಟ್ರೆಲಿಯಾ ಹಲವು ರಣತಂತ್ರಗಳನ್ನು ರೂಪಿಸುತ್ತಿದೆ.

ಆದರೆ ಈ ಬಾರಿ ತಮ್ಮ ಹಳೆಯ ಚಾಳಿಯನ್ನು ಮತ್ತೆ ಮುಂದುವರಿಸಲು ಸ್ಮಿತ್​​ ಮುಂದಾಗಿದ್ದಾರೆ. ಗೆಲುವಿಗಾಗಿ ಏನುಬೇಕಾದ್ರು ಮಾಡುತ್ತೇವೆ ಎಂದಿರುವ ಸ್ಮಿತ್​​ ಈ ಬಾರಿ ಟೀಂ ಇಂಡಿಯಾ ಆಟಗಾರರೊಂದಿಗೆ ಮೈದಾನದಲ್ಲಿ ಕೆಣಕಲು ಪ್ಲಾನ್​​ ಮಾಡಿದ್ದಾರೆ. ಸ್ಲೆಡ್ಜಿಂಗ್​​ ಮಾಡಿ ಟೀಂ ಇಂಡಿಯಾವನ್ನ ಕುಗ್ಗಿಸಲು ಸ್ಮಿತ್​ ತನ್ನ ಆಟಗಾರರಿಗೆ ಸೂಚಿಸಿದ್ದಾರೆ.

Show Full Article


Recommended


bottom right ad