Asianet Suvarna News Asianet Suvarna News

CSK ಗೆಲುವಿನ ಓಟಕ್ಕೆ ಬ್ರೇಕ್- ಮುಂಬೈಗೆ 37 ರನ್ ಗೆಲುವು!

ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೋರಾಟ ಆರಂಭಿಕ ಹಂತದಲ್ಲಿ ನಿಧಾನಗತಿಯಲ್ಲಿದ್ದರೂ ಸ್ಲಾಗ್ ಓವರ್‌ನಲ್ಲಿ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು. ಮುಂಬೈ ಪರ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್, CSK ಪರ ಕೇದಾರ್ ಜಾಧವ್ ಆಟಕ್ಕೆ ಅಭಿಮಾನಿಗಳ ಮನಸೋತರು. ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 37 ರನ್ ಗೆಲುವು ಸಾಧಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

IPL Mumbai Indians beat Chennai by 37 runs in Wankhede
Author
Bengaluru, First Published Apr 3, 2019, 11:57 PM IST

ಮುಂಬೈ(ಏ.03): ಹ್ಯಾಟ್ರಿಕ್ ಜಯಭೇರಿ ಬಾರಿಸಿ ಗೆಲುವಿನ ನಾಗಾಲೋಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಓಟಕ್ಕೆ ಬ್ರೇಕ್ ಬಿದ್ದಿದೆ. ತವರಿನಲ್ಲಿ CSK ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 37 ರನ್ ಗೆಲುವು ಸಾಧಿಸಿದೆ. ಈ ಮೂಲಕ ಮುಂಬೈ ಸೋಲಿನಿಂದ ಹೊರಬಂದಿದೆ. ಆದರೆ 4ನೇ ಗೆಲುವಿನ ವಿಶ್ವಾಸದಲ್ಲಿದ್ದ CSKಗೆ ಆಘಾತವಾಗಿದೆ.

ಗೆಲುವಿಗೆ 171 ರನ್ ಟಾರ್ಗೆಟ್ ಪಡೆದ CSK ಮೊದಲ ಓವರ್‌ನಲ್ಲೇ ಆಘಾತ ಅನುಭವಿಸಿತು. ಅಂಬಾಟಿ ರಾಯುಡು ಶೂನ್ಯಕ್ಕೆ ಔಟಾದರು. ಇನ್ನು ಶೇನ್ ವ್ಯಾಟ್ಸನ್ ಕೇವಲ 4 ರನ್ ಸಿಡಿಸಿ ಔಟಾದರು. 6 ರನ್‌ಗಳಿಗೆ 2 ವಿಕೆಚ್ ಕಳೆದುಕೊಂಡ CSKಗೆ ಸುರೇಶ್ ರೈನಾ ಆಸರೆಯಾದರು. ಆದರೆ ರೈನಾ 26 ರನ್ ಸಿಡಿಸಿ, ಕೀರನ್ ಪೋಲಾರ್ಡ್ ಹಿಡಿದ ಅದ್ಬುತ ಕ್ಯಾಚ್‌ನಿಂದ ಪೆವಿಲಿಯನ್ ಸೇರಿಕೊಂಡರು. 

ಕೇದಾರ್ ಜಾಧವ್ ಹಾಗೂ ನಾಯಕ ಎಂ.ಎಸ್.ಧೋನಿ ಜೊತೆಯಾಟ ನೀಡೋ ಮೂಲಕ ಚೇತರಿಕೆ ನೀಡಿದರು. ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಧೋನಿ 20 ಎಸೆತದಲ್ಲಿ 12 ರನ್ ಸಿಡಿಸಿ ಔಟಾದರು. ಧೋನಿ ಬೆನ್ನಲ್ಲೇ ರವೀಂದ್ರ ಜಡೇಜಾ 1 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಕೇದಾರ್ ಜಾಧವ್ ಅರ್ಧಶತಕ ಸಿಡಿಸಿ CSKಗೆ ನೆರವಾದರು.

ಕೇದಾರ್ ಜಾಧವ್ 58 ರನ್ ಸಿಡಿಸಿ ಔಟಾದರು. ಅಷ್ಟರಲ್ಲಿ CSK ಸೈನ್ಯದಲ್ಲಿ ಆತಂಕ ಮನೆ ಮಾಡಿತು. ಇತ್ತ ಡ್ವೇನ್ ಬ್ರಾವೋ ಕೂಡ ಆಸರೆಯಾಗಲಿಲ್ಲ. ಬ್ರಾವೋ 8 ರನ್‌ಗೆ ಔಟಾದರು. ದೀಪಕ್ ಚಹಾರ್ಲ ಹಾಗೂ ಶಾರ್ದೂಲ್ ಠಾಕೂರ್‌ಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಚೆನ್ನೈ ವಿಕೆಟ್ ನಷ್ಟಕ್ಕೆ ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 37 ರನ್ ಗೆಲುವು ಸಾಧಿಸಿದ ಮುಂಬೈ ತವರಿನಲ್ಲಿ ಬಲಿಷ್ಠ ತಂಡ ಅನ್ನೋದನ್ನ ಮತ್ತೊಮ್ಮೆ ಸಾಬೀತು ಪಡಿಸಿತು.
 

Follow Us:
Download App:
  • android
  • ios