Asianet Suvarna News Asianet Suvarna News

ಐಪಿಎಲ್ ಹೊಸ ನಿರ್ಧಾರದಿಂದ ಆರ್'ಸಿಬಿ-ಸಿಎಸ್'ಕೆಗೆ ಲಾಭ..? ರೀಟೈನ್ ನಿಯಮ, ರೈಟ್ ಟು ಮ್ಯಾಚ್ ಅಂದ್ರೇನು ಗೊತ್ತಾ..?

‘ಎಲ್ಲಾ 8 ತಂಡಗಳು ಆಟಗಾರರ ರೀಟೈನ್ (ಹರಾಜಿಗೂ ಮುನ್ನ) ಹಾಗೂ ‘ರೈಟ್ ಟು ಮ್ಯಾಚ್ ಕಾರ್ಡ್’ (ಹರಾಜಿನ ವೇಳೆ) ಬಳಕೆ ಮಾಡಿ ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಬಹುದು’ ಎಂದು ಆಡಳಿತ ಸಮಿತಿ ಸಭೆ ಬಳಿಕ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದರು.

IPL franchises allowed to retain up to five players

ಐಪಿಎಲ್ ಆಡಳಿತ ಸಮಿತಿ ಬುಧವಾರ ಆಟಗಾರರ ಉಳಿಸಿಕೊಳ್ಳುವಿಕೆ (ರೀಟೈನ್) ನಿಯಮವನ್ನು ಪ್ರಕಟಿಸಿದ್ದು, ಪ್ರತಿ ತಂಡ ಮುಂದಿನ ವರ್ಷ ಹರಾಜಿನಲ್ಲಿ ಗರಿಷ್ಠ 5 ಆಟಗಾರರನ್ನು ಮರಳಿ ಪಡೆಯುವ ಅವಕಾಶ ಪಡೆದುಕೊಂಡಿವೆ.

ಇದರೊಂದಿಗೆ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲೇ ಹಾಗೂ ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್‌'ಗೆ ವಾಪಸಾಗಲು ಹಾದಿ ಸುಗಮಗೊಂಡಿದೆ.

‘ಎಲ್ಲಾ 8 ತಂಡಗಳು ಆಟಗಾರರ ರೀಟೈನ್ (ಹರಾಜಿಗೂ ಮುನ್ನ) ಹಾಗೂ ‘ರೈಟ್ ಟು ಮ್ಯಾಚ್ ಕಾರ್ಡ್’ (ಹರಾಜಿನ ವೇಳೆ) ಬಳಕೆ ಮಾಡಿ ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಬಹುದು’ ಎಂದು ಆಡಳಿತ ಸಮಿತಿ ಸಭೆ ಬಳಿಕ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದರು.

ರೀಟೈನ್ ನಿಯಮ ಹೇಗೆ?

ಹರಾಜಿಗೂ ಮುನ್ನ ಎಲ್ಲಾ 8 ತಂಡಗಳು ಗರಿಷ್ಠ 3 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಆಗ ಹರಾಜಿನಲ್ಲಿ 2 ‘ರೈಟ್ ಟು ಮ್ಯಾಚ್ ಕಾರ್ಡ್’(ಆರ್'ಟಿಎಂ) ಬಳಕೆಗೆ ಅವಕಾಶವಿದೆ. ಒಂದೊಮ್ಮೆ ತಂಡ ಇಬ್ಬರನ್ನು ಉಳಿಸಿಕೊಂಡರೆ ಹರಾಜಿನಲ್ಲಿ 3 ‘ಆರ್'ಟಿಎಂ ಕಾರ್ಡ್’ ಬಳಸಬಹುದಾಗಿದೆ. ಒಬ್ಬ ಆಟಗಾರ ಅಥವಾ ಯಾವುದೇ ಆಟಗಾರನನ್ನು ರೀಟೈನ್ ಮಾಡಿಕೊಳ್ಳದಿದ್ದರೂ ಹರಾಜಿನಲ್ಲಿ ಗರಿಷ್ಠ 3 ಬಾರಿ ‘ಆರ್‌ಟಿಎಂ ಕಾರ್ಡ್’ ಮಾತ್ರ ಬಳಕೆಗೆ ಅವಕಾಶವಿದೆ. ರೀಟೈನ್ ಇಲ್ಲವೇ ‘ಆರ್‌ಟಿಎಂ ಕಾರ್ಡ್’ ಮಾಡಿಕೊಳ್ಳುವ ಆಟಗಾರರ ಪೈಕಿ ಗರಿಷ್ಠ 3 ಭಾರತ ಪರ ಆಡಿರುವ ಆಟಗಾರರು, ಗರಿಷ್ಠ 2 ವಿದೇಶಿ ಆಟಗಾರರು, ಗರಿಷ್ಠ 2 ಭಾರತ ಪರ ಆಡದ ಆಟಗಾರರ ಆಯ್ಕೆಗೆ ಅವಕಾಶ ನೀಡಲಾಗಿದೆ.

ರೈಟ್ ಟು ಮ್ಯಾಚ್ ಕಾರ್ಡ್ ಎಂದರೇನು?

ಪ್ರತಿ ತಂಡವೂ ತಾನು ಇಚ್ಛಿಸುವ ಆಟಗಾರರನ್ನು ಹರಾಜಿಗೂ ಮುನ್ನ ಉಳಿಸಿಕೊಳ್ಳದಿದ್ದರೂ, ಹರಾಜಿನ ವೇಳೆ ಅವರನ್ನು ತಂಡಕ್ಕೆ ಮರಳಿ ಪಡೆಯುವ ಅವಕಾಶವೇ ‘ರೈಟ್ ಟು ಮ್ಯಾಚ್ ಕಾರ್ಡ್’ ನಿಯಮ. ಉದಾಹರಣೆಗೆ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಕ್ರಿಸ್ ಗೇಲ್‌'ರನ್ನು ಹರಾಜಿಗೂ ಮುನ್ನ ಉಳಿಸಿಕೊಳ್ಳಲು ನಿರ್ಧರಿಸದೆ ಇದ್ದರೂ, ಹರಾಜಿನಲ್ಲಿ ಬೇರೆ ಯಾವುದೋ ತಂಡ ಅವರನ್ನು ₹5 ಕೋಟಿ ನೀಡಿ ಖರೀದಿ ಮಾಡಿದರೆ, ಆಗ ಆರ್‌'ಸಿಬಿ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ, ಅದೇ ₹5 ಕೋಟಿಗೆ ಗೇಲ್‌'ರನ್ನು ಮತ್ತೊಮ್ಮೆ ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ.

ಸಂಭಾವನೆ ಮಾದರಿ ಹೇಗೆ?

ಒಂದೊಮ್ಮೆ ತಂಡ ಮೂವರು ಆಟಗಾರರನ್ನು ಹರಾಜಿಗೂ ಮುನ್ನ ಉಳಿಸಿಕೊಂಡರೆ, ರೀಟೈನ್ ಮಾಡಿಕೊಳ್ಳುವ ಮೊದಲ ಆಟಗಾರನಿಗೆ ₹15 ಕೋಟಿ, 2ನೇ ಆಟಗಾರನಿಗೆ ₹11, 3ನೇ ಆಟಗಾರನಿಗೆ ₹7 ಕೋಟಿ ನೀಡಬೇಕಿದೆ. ತಂಡ ಕೇವಲ ಇಬ್ಬರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ, ಮೊದಲ ಆಟಗಾರನಿಗೆ ₹12.5 ಕೋಟಿ, 2ನೇ ಆಟಗಾರನಿಗೆ ₹8.5 ಕೋಟಿ ನೀಡಬೇಕಿದೆ. ಕೇವಲ ಒಬ್ಬ ಆಟಗಾರನನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ ₹12.5 ಕೋಟಿ ನೀಡಬೇಕಿದೆ. 2017ರ ಆವೃತ್ತಿಯಲ್ಲಿ ಪ್ರತಿ ತಂಡಕ್ಕೆ ಆಟಗಾರರ ಖರೀದಿಗೆ ಒಟ್ಟು ₹66 ಕೋಟಿ ಮಿತಿ ನಿಗದಿ ಪಡಿಸಲಾಗಿತ್ತು. ಈ ಬಾರಿ ಅದನ್ನು ₹80 ಕೋಟಿಗೆ ಏರಿಕೆ ಮಾಡಲಾಗಿದೆ. 2018ರಲ್ಲಿ ಈ ಮೊತ್ತ ₹82, 2019ರಲ್ಲಿ ₹85 ಕೋಟಿಗೆ ಏರಿಕೆಯಾಗಲಿದೆ.

Follow Us:
Download App:
  • android
  • ios