Asianet Suvarna News Asianet Suvarna News

ಐಪಿಎಲ್ 2019: ಯಾವ ತಂಡದಲ್ಲಿದ್ದಾರೆ ಉತ್ತಮ ವಿಕೆಟ್ ಕೀಪರ್?

2019ರ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳು ಕಸರತ್ತು ಆರಂಭಿಸಿದ್ದಾರೆ. 8 ತಂಡಗಳಲ್ಲಿರುವ ವಿಕೆಟ್ ಕೀಪರ್ ಯಾರು? ಯಾವ ತಂಡದ ಅತ್ಯುತ್ತಮ ವಿಕೆಟ್ ಕೀಪರ್ ಹೊಂದಿದೆ. ಇಲ್ಲಿದೆ 8 ತಂಡಗಳ ವಿಕೆಟ್ ಕೀಪರ್  ರ‍್ಯಾಂಕಿಂಗ್ ವಿವರ.
 

IPL cricket 2019 Which franchise has Best wicket keepers
Author
Bengaluru, First Published Jan 4, 2019, 6:22 PM IST

ಬೆಂಗಳೂರು(ಜ.04): ಐಪಿಎಲ್ ಟೂರ್ನಿ ವೇಳಾಪಟ್ಟಿ ಸಿದ್ದವಾಗುತ್ತಿದೆ. 2019ರ ಲೋಕಸಭಾ ಚುನಾವಣೆಯಿಂದ ಐಪಿಎಲ್ ಆಯೋಜನೆ ಕುರಿತು ಕೆಲ ಗೊಂದಲಗಳಿವೆ. ಆದರೆ 8 ಫ್ರಾಂಚೈಸಿಗಳು ತಯಾರಿ ಆರಂಭಿಸಿದೆ. ಈಗಾಗಲೇ ಹರಾಜಿನಲ್ಲಿ ಆಟಗಾರರನ್ನ ಖರೀದಿಸಿರುವ ಫ್ರಾಂಚೈಸಿಗಳು ಬಲಿಷ್ಠ ತಂಡವನ್ನ ಕಟ್ಟಿದೆ.

ಐಪಿಎಲ್ ತಂಡಗಳಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪ್ರಮುಖ ಪಾತ್ರ ನಿರ್ವಹಿಸುತ್ತಾನೆ. ಹೀಗಾಗಿ  8 ತಂಡಗಳಲ್ಲಿರುವ ವಿಕೆಟ್ ಕೀಪರ್ ಯಾರು? ಇವರ ರ‍್ಯಾಂಕಿಂಗ್ ಹೇಗಿದೆ. ಈ ಎಲ್ಲಾ  ವಿವರ ಇಲ್ಲಿ ನೀಡಲಾಗಿದೆ. 

ಇದನ್ನೂ ಓದಿ: 'I Love You So Much'- ವಿಶೇಷ ವ್ಯಕ್ತಿಗೆ ಶತಕ ಅರ್ಪಿಸಿದ ಪಂತ್..!

1 ಎಂ.ಎಸ್.ಧೋನಿ

IPL cricket 2019 Which franchise has Best wicket keepers
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ, ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ಕೂಡ ವಹಿಸಿದ್ದಾರೆ. 8 ತಂಡಗಳಲ್ಲಿರುವ ವಿಕೆಟ್ ಕೀಪರ್‌ಗಳ ಪೈಕಿ ಎಂ.ಎಸ್.ಧೋನಿಗೆ ಮೊದಲ ಸ್ಥಾನ. ಇದನ್ನ ಬಿಡಿಸಿ ಹೇಳಬೇಕಾಗಿಲ್ಲ. ಧೋನಿ ಇರೋದರಿಂದ ಸಿಎಸ್‌ಕೆ ತಂಡಕ್ಕೆ ಮತ್ತೊಬ್ಬ ವಿಕೆಟ್ ಕೀಪರ್ ಅಗತ್ಯವೂ ಇಲ್ಲ.

2 ಜೋಸ್ ಬಟ್ಲರ್

IPL cricket 2019 Which franchise has Best wicket keepers
ರಾಜಸ್ಥಾನ ರಾಯಲ್ಸ್ ತಂಡದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಐಪಿಎಲ್ ಫ್ರಾಂಚೈಸಿಗಳ ಪೈಕಿ 2ನೇ ಸ್ಥಾನ ಪಡೆದಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಬಟ್ಲರ್ ಜೊತೆ ಇನ್ನಿಬ್ಬರು ವಿಕೆಟ್ ಕೀಪರ್‌ಗಳಾದ ಸಂಜು ಸಾಮ್ಸನ್ ಹಾಗೂ ಪ್ರಶಾಂತ್ ಚೋಪ್ರಾ ಆಯ್ಕೆಗಳಿವೆ. ಆದರೆ ಇಂಗ್ಲೆಂಡ್ ಕ್ಲಾಸ್ ಪ್ಲೇಯರ್ ಜೋಸ್ ಬಟ್ಲರ್ ಉತ್ತಮ ಆಯ್ಕೆ.

ಇದನ್ನೂ ಓದಿ: ಏಕದಿನ ಸರಣಿಗೆ ಬಲಿಷ್ಠ ಆಸಿಸ್ ತಂಡ ಪ್ರಕಟ

3 ದಿನೇಶ್ ಕಾರ್ತಿಕ್

IPL cricket 2019 Which franchise has Best wicket keepers
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್, ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ತಂಡದಲ್ಲಿರುವ ಇನ್ನೊಂದು ಆಯ್ಕೆ ರಾಬಿನ್ ಉತ್ತಪ್ಪ. ಆದೆರೆ ವಿಕೆಟ್ ಕೀಪಿಂಗ್ ವಿಚಾರದಲ್ಲಿ ಉತ್ತಪ್ಪಾಗಿಂತ ದಿನೇಶ್ ಕಾರ್ತಿಕ್ ಜವಾಬ್ದಾರಿ ನಿರ್ವಹಿಸುವುದು ಸೂಕ್ತ.  

4 ರಿಷಬ್ ಪಂತ್

IPL cricket 2019 Which franchise has Best wicket keepers
ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸುತ್ತಿರುವ ರಿಷಬ್ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಮಾತ್ರವಲ್ಲ, ಪ್ರಮುಖ ಬ್ಯಾಟ್ಸ್‌ಮನ್ ಕೂಡ ಹೌದು. ಡೆಲ್ಲಿ ತಂಡದಲ್ಲಿರುವ ಮತ್ತೊಂದು ಆಯ್ಕೆ ಅಂಕುಶ್ ಬೈನ್ಸ್. 

ಇದನ್ನೂ ಓದಿ: ಭಾರತದ ಸರ್ವ ಶ್ರೇಷ್ಠ ಟೆಸ್ಟ್ ತಂಡ ಪ್ರಕಟಿಸಿದ ಅನಿಲ್ ಕುಂಬ್ಳೆ!

5 ಇಶಾನ್ ಕಿಶನ್

IPL cricket 2019 Which franchise has Best wicket keepers
ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೂವರು ವಿಕೆಟ್ ಕೀಪಿಂಗ್ ಆಯ್ಕೆಗಳಿವೆ. ಸೌತ್ಆಫ್ರಿಕಾ ಕ್ರಿಕೆಟಿಗ ಕ್ವಿಟಂನ್ ಡಿಕಾಕ್ ಮೊದಲ ಆಯ್ಕೆಯಾದರೆ, ಸ್ಫೋಟಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ರೇಸ್‌ನಲ್ಲಿದ್ದಾರೆ. ಇದರ ಜೊತೆಗೆ ಆದಿತ್ಯ ತಾರೆ ಕೂಡ ಮುಂಬೈ ತಂಡದಲ್ಲಿದ್ದಾರೆ. ಪ್ಲೇಯಿಂಗ್‌ 11ನಲ್ಲಿ ಇಶಾನ್ ಕಿಶನ್‌ಗೆ ಹೆಚ್ಚಿನ ಅವಕಾಶಗಳು ಸಿಗುವ ಸಾಧ್ಯತೆ ಇದೆ.

6 ವೃದ್ಧಿಮಾನ್ ಸಾಹ

IPL cricket 2019 Which franchise has Best wicket keepers
ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮೂವರು ವಿಕೆಟ್ ಕೀಪರ್‌ಗಳಿದ್ದಾರೆ. ಆದರೆ ಮೊದಲ ಆಯ್ಕೆ ವೃದ್ಧಿಮಾನ್ ಸಾಹ. ಇನ್ನುಳಿದ ಇಂಗ್ಲೆಂಡ್ ವಿಕೆಟ್ ಕೀಪರ್ ಜಾನಿ ಬೈರಿಸ್ಟೋ ಹಾಗೂ ದೇಸಿ ಪ್ರತಿಭೆ ಶ್ರೀವತ್ಸ ಗೋಸ್ವಾಮಿ. ಸನ್ ರೈಸರ್ಸ್ ಐಪಿಎಲ್ ಕೀಪಿಂಗ್ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: ತಂಡ ಬದಲಿಸದೇ ಐಪಿಎಲ್ ಆಡಿದ ಐವರುಆಟಗಾರರು ಇವರು!

7 ಪಾರ್ಥೀವ್ ಪಟೇಲ್

IPL cricket 2019 Which franchise has Best wicket keepers
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇಬ್ಬರು ವಿಕೆಟ್ ಕೀಪರ್ ಆಯ್ಕೆಗಳಿವೆ. ಪಾರ್ಥೀವ್ ಪಟೇಲ್ ಹಾಗೂ ಹರಾಜಿನಲ್ಲಿ ಖರೀದಿಸಿದ ಸೌತ್ಆಫ್ರಿಕಾ ಕ್ರಿಕೆಟಿಗ ಹೆನ್ರಿಚ್ ಕ್ಲಾಸೆನ್. 33 ವರ್ಷದ ಪಾರ್ಥೀವ್ ಐಪಿಎಲ್ ಟೂರ್ನಿಯಲ್ಲಿ ಹೆಚ್ಚಿನ ಅನುಭವ ಹೊಂದಿದ್ದಾರೆ. ಇಷ್ಟೇ ಅಲ್ಲ ನಾಲ್ವರು ವಿದೇಶಿ ಆಟಾಗಾರರ ನಿಯಮದಿಂದ ಪಾರ್ಥೀವ್‌ಗೆ ಹೆಚ್ಚಿನ ಆವಕಾಶ ಸಿಗಲಿದೆ. ಆದರೆ ಹೆನ್ರಿಚ್ ಅತ್ಯುತ್ತಮ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ.

8 ಕೆಎಲ್ ರಾಹುಲ್

IPL cricket 2019 Which franchise has Best wicket keepers
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 2018ರ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಿತ್ತು. ಇದೀಗ ಹರಾಜಿನಲ್ಲಿ 4.20 ಕೋಟಿ ರೂಪಾಯಿ ನೀಡಿ ವೆಸ್ಟ್ಇಂಡೀಸ್‌ನ ನಿಕೋಲಸ್ ಪೂರನ್‌ ಖರೀದಿಸಿದ್ದಾರೆ. ಇದರ ಜೊತೆಗೆ ಪ್ರಭಸಿಮ್ರನ್ ಸಿಂಗ್ ಕೂಡ ತಂಡದಲ್ಲಿದ್ದಾರೆ.

Follow Us:
Download App:
  • android
  • ios