Asianet Suvarna News Asianet Suvarna News

ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್-ಗರಂ ಆದ ಟೀಂ ಇಂಡಿಯಾ ಕ್ರಿಕೆಟಿಗ!

ಐಪಿಎಲ್ ಹರಾಜಿನಲ್ಲಿ ಹಲವರ ನಿರೀಕ್ಷೆಗಳು ತಲೆಕೆಳಗಾಗಿವೆ. ಸೇಲಾಗೋದೆ ಡೌಟ್ ಎಂದವರೆಲ್ಲಾ ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದರೆ, ಇನ್ನು ಕೆಲವರು ಅನ್‌ಸೋಲ್ಡ್ ಆಗಿ ಉಳಿದಿದ್ದಾರೆ. ಹೀಗೆ ಮಾರಾಟವಾಗದೇ ಉಳಿದ ಟೀಂ ಇಂಡಿಯಾ ಕ್ರಿಕೆಟಿಗ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.

IPL Auction 2019 Unsold team India player express his feeling in the twitter
Author
Bengaluru, First Published Dec 19, 2018, 5:34 PM IST

ಕೋಲ್ಕತಾ(ಡಿ.19): ಜೈಪುರದಲ್ಲಿ ನಡೆದ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಹರಾಜು ಹಲವರಿಗೆ ಜಾಕ್‌ಪಾಟ್ ಹೊಡೆದಿದ್ದರೆ, ಕೆಲವರಿಗೆ ತೀವ್ರ ನಿರಾಸೆ ಉಂಟು ಮಾಡಿದೆ. ಪ್ರತಿ ಐಪಿಎಲ್ ಟೂರ್ನಿಯ ಭಾಗವಾಗಿದ್ದ ಪ್ರಮುಖ ಆಟಗಾರರು ಸೇಲಾಗದೇ ಉಳಿದರೆ, ಯುವ ಪ್ರತಿಭೆಗಳು ಕೋಟಿ ಕೋಟಿ ರೂಪಾಯಿ ಬಾಚಿಕೊಂಡರು.

ಇದನ್ನೂ ಓದಿ: ಹರಾಜಿನ ಬಳಿಕ ಒಂದಾದ ಗುರು-ಶಿಷ್ಯರು..! ತೆಂಡುಲ್ಕರ್ ಟ್ವೀಟ್ ಅಪ್ಪಟ ಬಂಗಾರ 

ಈ ಬಾರಿಯ ಹರಾಜಿನಲ್ಲಿ ಮನೋಜ್ ತಿವಾರಿ ಹೆಸರು ಕೂಗಿದಾಗ ಯಾವ ಫ್ರಾಂಚೈಸಿಗಳು ಖರೀದಿಸಲು ಮುಂದೆ ಬರಲಿಲ್ಲ. ಮೂಲ ಬೆಲೆಗೂ ಯಾರೂ ಕೂಡ ಖರೀದಿಸಲಿಲ್ಲ. ಇದಕ್ಕೆ ಗರಂ ಆಗಿರುವ ಮನೋಜ್ ತಿವಾರಿ ಟ್ವಿಟರ್ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ. 

 

 

ಎಲ್ಲಿ ತಪ್ಪಾಯ್ತು? ಟೀಂ ಇಂಡಿಯಾ ಪರ ಪಂದ್ಯ ಶ್ರೇಷ್ಠ  ಪ್ರಶಸ್ತಿ ಸ್ವೀಕರಿಸಿದ  ಬೆನ್ನಲ್ಲೇ 14 ಪಂದ್ಯದಿಂದ ಹೊರಗುಳಿಯಬೇಕಾಯ್ತು. 2017ರ ಐಪಿಎಲ್‌ನಲ್ಲಿ ಗಳಿಸಿದ ಪ್ರಶಸ್ತಿಯನ್ನ ನೋಡುತ್ತಿದ್ದಾಗ ನಾನೆನಲ್ಲಿ ಎಡವಿದೆ ಅನ್ನೋದೆ ತಿಳಿಯುತ್ತಿಲ್ಲ ಎಂದು ಮನೋಜ್ ತಿವಾರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Exclusive ಸಂದರ್ಶನ: RCB ತಂಡ ಸೇರಿಕೊಂಡ ಏಕೈಕ ಕನ್ನಡಿಗ ದೇವದತ್!

2008ರಿಂದ 2018ರ ವರೆಗಿನ 11 ಐಪಿಎಲ್ ಆವೃತ್ತಿಗಳಲ್ಲಿ 2016ರ ಆವೃತ್ತಿ ಹೊರತು ಪಡಿಸಿದರೆ ಉಳಿದೆಲ್ಲಾ ಆವೃತ್ತಿಗಳಲ್ಲಿ ಮನೋಜ್ ತಿವಾರಿ ಒಂದಲ್ಲ ಒಂದು ತಂಡದ ಪರ ಆಡಿದ್ದಾರೆ.  98 ಐಪಿಎಲ್ ಪಂದ್ಯದಿಂದ 5 ಅರ್ಧಶತಕ ಸೇರಿದಂತೆ 1695 ರನ್ ಸಿಡಿಸಿದ್ದಾರೆ.

ಇದನ್ನೂ ಓದಿ: ಮೈದಾನದಲ್ಲೇ ಕಿತ್ತಾಡಿಕೊಂಡ ಜಡೇಜಾ-ಇಶಾಂತ್..! ವಿಡಿಯೋ ವೈರಲ್

Follow Us:
Download App:
  • android
  • ios