Asianet Suvarna News Asianet Suvarna News

IPL 2019: ಪಂದ್ಯಕ್ಕೂ ಮೊದಲೇ ಮುಂಬೈಗೆ ಆಘಾತ- BCCI ಆಯ್ಕೆ ಸಮಿತಿಗೆ ಅತಂಕ!

ಪಂಜಾಬ್ ವಿರುದ್ಧದ ಹೋರಾಟಕ್ಕೆ ಮುಂಬೈ ಭರ್ಜರಿ ತಯಾರಿ ನಡೆಸಿದೆ. ಆದರೆ ಪಂದ್ಯ ಆರಂಭಕ್ಕೂ ಕೆಲ ಗಂಟೆಗಳ ಮೊದಲೇ ಮುಂಬೈ ತಂಡ ಆತಂಕಕ್ಕೆ ಒಳಗಾಗಿದೆ. ಇದು ಬಿಸಿಸಿಐ ಚಿಂತೆಗೂ ಕಾರಣವಾಗಿದೆ. ಅಷ್ಟಕ್ಕೂ ಮುಂಬೈಗೆ ಎದುರಾಗಿರೋ ಸಮಸ್ಯೆ ಏನು? ಇಲ್ಲಿದೆ ವಿವರ.

IPL 2019 Rohit sharma injured in mumbai indians training camp concern over 2019 world cup
Author
Bengaluru, First Published Apr 10, 2019, 3:29 PM IST

ಮುಂಬೈ(ಏ.10): ಐಪಿಎಲ್ ಟೂರ್ನಿಯಲ್ಲಿಂದು ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಖಾಮುಖಿಯಾಗಲಿದೆ. ಪಂದ್ಯ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತವಾಗಿದೆ. ಅಭ್ಯಾಸದ ವೇಳೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಹೀಗಾಗಿ ಇಂದಿನ ಪಂದ್ಯ ಆಡುವುದು ಅನುಮಾನವಾಗಿದೆ. 

ಇದನ್ನೂ ಓದಿ: ಬೂಮ್ರಾ ಗಾಯದ ಬಗ್ಗೆ ಆತಂಕ ಬೇಡ: ಬಿಸಿಸಿಐ

ಅಭ್ಯಾಸದ ನಡುವೆ ರೋಹಿತ್ ಶರ್ಮಾ ಇಂಜುರಿಗೆ ತುತ್ತಾದರು. ತಕ್ಷಣವೇ ಮುಂಬೈ ಫಿಸಿಯೋ ನಿತಿನ್ ಪಟೇಲ್ ಮೈದಾನಕ್ಕೆ ಆಗಮಿಸಿ ಪ್ರಾಥಮಿಕಿ ಚಿಕಿತ್ಸೆ ನೀಡಿದರು. ಆದರೆ ರೋಹಿತ್ ನೋವಿನಿಂದ ಅಭ್ಯಾಸ ಮೊಟಕುಗೊಳಿಸಿ ಡ್ರೆಸ್ಸಿಂಗ್ ರೂಂ ಸೇರಿಕೊಂಡರು. ರೋಹಿತ್ ಇಂಜುರಿ ತಂಡದ  ಆತಂಕಕ್ಕೆ ಕಾರಣವಾಗಿದೆ. ಪಂಜಾಬ್ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಯೋದು ಅನುಮಾನವಾಗಿದೆ.

ಇದನ್ನೂ ಓದಿ: ವಿಶ್ವಕಪ್ 2019: ಏ.15ಕ್ಕೆ ಟೀಂ ಇಂಡಿಯಾ ಪ್ರಕಟ!

ರೋಹಿತ್ ಇಂಜುರಿ ವಿಚಾರ ಇದೀಗ ಬಿಸಿಸಿಐ ಹಾಗೂ ನಾಯಕ ವಿರಾಟ್ ಕೊಹ್ಲಿ ಚಿಂತೆಗೂ ಕಾರಣವಾಗಿದೆ. ಎಪ್ರಿಲ್ 15 ರಂದು ವಿಶ್ವಕಪ್ ತಂಡದ ಆಯ್ಕೆ ನಡೆಯಲಿದೆ. ಇದರ ಬೆನ್ನಲ್ಲೇ ರೋಹಿತ್ ಇಂಜುರಿಯಾಗಿದ್ದಾರೆ. ಇಂಜುರಿ ಪ್ರಮಾಣ ಹೆಚ್ಚಾಗಿದ್ದಲ್ಲಿ, ಮೇ 30 ರಂದು ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಇದು ಟೀಂ ಇಂಡಿಯಾ ಲೆಕ್ಕಾಚಾರವನ್ನೇ ಬುಡಮೇಲು ಮಾಡಲಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios