Asianet Suvarna News Asianet Suvarna News

IPL 2019: ಚೆನ್ನೈನಲ್ಲಿ RCB ಪ್ರದರ್ಶನ- ಅಭಿಮಾನಿಗಳಿಗೆ ಆತಂಕ!

12ನೇ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಹೋರಾಟಕ್ಕೆ ರೆಡಿಯಾಗಿದೆ. ಆದರೆ ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ RCB ಗೆಲುವು ದಾಖಲಿಸಲು ಹೆಚ್ಚಿನ ಶ್ರಮವಹಿಸಬೇಕು ಅನ್ನೋದರಲ್ಲಿ ಎರಡು ಮಾತಿಲ್ಲ. ಕಾರಣ ಅಂಕಿ ಅಂಶ ಕೂಡ RCBಗೆ ವಿರುದ್ಧವಾಗಿದೆ.

IPL 2019 RCB Confident to break Chennai Chepauk stadium  jinx
Author
Bengaluru, First Published Mar 22, 2019, 7:44 PM IST

ಚೆನ್ನೈ(ಮಾ.22): ಇನ್ನೆರಡು ತಿಂಗಳು ಭಾರತದಲ್ಲಿ ಚುಟುಕು ಹಬ್ಬ. ಮಾ.23ರಿಂದ ಆರಂಭಗೊಳ್ಳುತ್ತಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೋರಾಟ ನಡೆಸಲಿದೆ. CKS vs RCB ನಡುವಿನ ಮೊದಲ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದೆ. ಆದರೆ RCB ಅಂಕಿ ಅಂಶ ಸಮಾಧಾನವಾಗಿಲ್ಲ.

ಇದನ್ನೂ ಓದಿ: ರೋರ್‌ ಆಫ್‌ ದ ಲಯನ್‌’: ಧೋನಿ-ಮ್ಯಾಚ್ ಫಿಕ್ಸಿಂಗ್ ಬಗ್ಗೆ ಹೇಳಿದ ಮಾತುಗಳಿವು

ಚೆನ್ನೈ ತವರಿನಲ್ಲಿ RCB ಹೋರಾಟ ಅಷ್ಟಕಷ್ಟೆ. ಯಾಕೆಂದರೆ ಕಳೆದ 11 ಆವೃತ್ತಿಗಳಲ್ಲಿ ಚೆನ್ನೈ ತವರಿನಲ್ಲಿ RCB ಗೆದ್ದಿರೋದು ಕೇವಲ 1 ಪಂದ್ಯ ಮಾತ್ರ. ಇದೀಗ ಸೋಲಿನ ಸರಮಾಲೆಯನ್ನು RCB ಬ್ರೇಕ್ ಮಾಡುತ್ತಾ ಅನ್ನೋದು ಸದ್ಯದ ಪ್ರಶ್ನೆ. ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ CSK ಹಾಗೂ  RCB 7 ಪಂದ್ಯಗಳನ್ನು ಆಡಿದೆ. ಇದರಲ್ಲಿ 6 ರಲ್ಲಿ RCB ಸೋಲು ಕಂಡಿದೆ.

ಇದನ್ನೂ ಓದಿ: IPL 2019: RCB ಆಟಗಾರರ ಕಂಪ್ಲೀಟ್ ಲಿಸ್ಟ್!

ಇತರ ಮೈದಾನದಲ್ಲಿ RCB ಗೆಲುವಿನ ಸರಾಸರಿ 14.2%. ಆದರೆ ಚೆನ್ನೈನಲ್ಲಿ ಮಾತ್ರ ಊಹಿಸಲು ಅಸಾಧ್ಯವಾಗಿದೆ. 2008ರ ಮೊದಲ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಕ್ರೀಡಾಂಗಣದಲ್ಲಿ CSK ವಿರುದ್ಧ ಗೆಲುವು ಸಾಧಿಸಿತ್ತು. ಬಳಿಕ 10 ಆವೃತ್ತಿಗಳಲ್ಲಿ ತಂಡ ಸಂಪೂರ್ಣ ಬದಲಾದರೂ ಗೆಲುವು ಮಾತ್ರ ಸಿಕ್ಕಿಲ್ಲ.

ಇದೀಗ ಈ ಸಂಪ್ರದಾಯವನ್ನು ಪುಡಿ ಮಾಡಲು ವಿರಾಟ್ ಕೊಹ್ಲಿ ಸೈನ್ಯ ಸಜ್ಜಾಗಿದೆ. ಈ ಹಿಂದಿನ ತಂಡಗಳಿಗೆ ಹೋಲಿಸಿದರೆ ಈ ಬಾರಿ  ರಾಯಲ್ ಚಾಲೆಂಜರ್ಸ್ ತಂಡ ಬಲಿಷ್ಠಕ್ಕಿಂತ ಬ್ಯಾಲೆನ್ಸ್ ಆಗಿದೆ. ಹೀಗಾಗಿ ಗೆಲವು ನಿಶ್ಚಿತ ಅನ್ನೋದು ಅಭಿಮಾನಿಗಳ ಮಾತು. ಈ ಕುತೂಹಲಕ್ಕೆ ಉತ್ತರ ಮಾ.23ಕ್ಕೆ ಸಿಗಲಿದೆ.
 

Follow Us:
Download App:
  • android
  • ios