Asianet Suvarna News Asianet Suvarna News

ಐಪಿಎಲ್ 2019: ಪ್ರಶಸ್ತಿ ಗೆಲ್ಲಲು ಮುಂಬೈ ಇಂಡಿಯನ್ಸ್‌ಗಿದೆ 5 ಕಾರಣ!

2019ರ ಐಪಿಎಲ್ ಪ್ರಶಸ್ತಿಗಾಗಿ 8 ತಂಡಗಳು ತಯಾರಿ ಆರಂಭಿಸಿದೆ. ಆದರೆ ಈ ಬಾರಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಗೆಲುವಿಗೆ ಇರೋ 5 ಕಾರಣಗಳೇನು? ಇಲ್ಲಿದೆ ವಿವರ.

IPl 2019 five reasons for Mumbai Indians to lift the trophy
Author
Bengaluru, First Published Feb 6, 2019, 5:07 PM IST

ಮುಂಬೈ(ಫೆ.06): ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. 3 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಮುಂಬೈ, ಇದೀಗ ನಾಲ್ಕನೇ ಟ್ರೋಫಿಯತ್ತ ಕಣ್ಣಿಟ್ಟಿದೆ. ಕಳೆದ ಬಾರಿ ಪ್ಲೇ ಆಫ್‌ಗೆ ಲಗ್ಗೆ ಇಡಲು ವಿಫಲವಾದ ಮುಂಬೈ ಈ ಬಾರಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ 2019ರ ಐಪಿಎಲ್ ಪ್ರಶಸ್ತಿ ಗೆಲ್ಲಲು 5 ಕಾರಣಗಳಿವೆ.

1 ತಂಡದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ
ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಹೆಚ್ಚಿನ ಆಟಗಾರರನ್ನ ರಿಟೈನ್ ಮಾಡಿಕೊಂಡಿದೆ. ಹೀಗಾಗಿ ತಂಡ ಈಗಾಗಲೇ ಸೆಟ್ಲ್ ಆಗಿದೆ. ಆಟಗಾರರು ಈಗಾಗಲೇ ತಂಡದ ಸ್ಟ್ರೆಂಥ್, ವೀಕ್ನೆಸ್ ಅರ್ಥ ಮಾಡಿಕೊಂಡಿದ್ದಾರೆ. ಇದು ತಂಡದ ಪ್ರದರ್ಶನಕ್ಕೂ ಸಹಕಾರಿಯಾಗಲಿದೆ.

ಇದನ್ನೂ ಓದಿ: ಏಕದಿನ ವಿಶ್ವಕಪ್‌ಗೆ ಸ್ಟೀವ್‌ ಸ್ಮಿತ್‌ ಆಡೋದು ಡೌಟ್!

2 ಐಪಿಎಲ್ ಟೂರ್ನಿಯ ಯಶಸ್ವಿ ನಾಯಕ
ಸಚಿನ್ ತೆಂಡೂಲ್ಕರ್ ನಾಯಕತ್ವದಿಂದ ಕೆಳಗಿಳಿದ ಬಳಿಕ, ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಗೊಂದಲದ ಗೂಡಾಗಿತ್ತು. 2013ರಲ್ಲಿ ರಿಕಿ ಪಾಂಟಿಂಗ್‌ನಿಂದ ನಾಯಕತ್ವ ವಹಿಸಿಕೊಂಡ  ರೋಹಿತ್ ಶರ್ಮಾ  2015 ಹಾಗೂ 2017ರಲ್ಲಿ ಐಪಿಎಲ್ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದಾರೆ.

3 ಬೆಸ್ಟ್ ಆಲ್ರೌಂಡರ್ಸ್
8 ಐಪಿಎಲ್ ಫ್ರಾಂಚೈಸಿಗಳ ಪೈಕಿ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಆಲ್ರೌಂಡರ್ಸ್ ಹೊಂದಿದೆ. ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ ಹಾಗೂ ವೆಸ್ಟ್ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಸೇರಿದ ಮುಂಬೈ ಆಲ್ರೌಂಡರ್ಸ್ ಬಲಿಷ್ಠವಾಗಿದೆ. ಯುವರಾಜ್ ಸಿಂಗ್ ಹಾಗೂ ಬ್ಯಾಕ್ ಅಪ್ ಆಲ್ರೌಂಡರ್ ಸ್ಥಾನದಲ್ಲಿ ಬೆನ್ ಕಟ್ಟಿಂಗ್ ಕೂಡ ನೆರವಾಗಲಿದ್ದಾರೆ.

ಇದನ್ನೂ ಓದಿ: ಸಂಕಷ್ಟದಲ್ಲಿದ್ದ ಮಾಜಿ ಯೋಧನಿಗೆ ನೆರವಾದ ಗಂಭೀರ್..!

4 ಅತ್ಯುತ್ತಮ ಕೋಚಿಂಗ್ ಸ್ಟಾಫ್
ಮುಂಬೈ ತಂಡದ ದಿಗ್ಗಜ ಕೋಚಿಂಗ್ ಸ್ಟಾಫ್‌ಗಳನ್ನೇ ಹೊಂದಿದೆ. ಮೆಂಟರ್ ಸಚಿನ್ ತೆಂಡೂಲ್ಕರ್, ಮುಖ್ಯ ಕೋಚ್ ಮಹೇಲಾ ಜಯವರ್ದನೆ, ಬ್ಯಾಟಿಂಗ್ ಕೋಚ್ ರಾಬಿನ್ ಸಿಂಗ್, ಬೌಲಿಂಗ್ ಕೋಚ್ ಶೇನ್ ಬಾಂಡ್, ಡೈರೆಕ್ಟರ್ ಆಫ್ ಕ್ರಿಕೆಟ್ ಜಹೀರ್ ಖಾನ್, ಫೀಲ್ಡಿಂಗ್ ಕೋಚ್ ಜೇಮ್ಸ್ ಪಮೆಂಟ್ ಸೇರಿದಂತ ಬಲಿಷ್ಠ ಕೋಚಿಂಗ್ ಸ್ಟಾಪ್ ಮುಂಬೈ ಫ್ರಾಂಚೈಸಿಯಲ್ಲಿದೆ.

5 ಪವರ್ ಪ್ಯಾಕ್ ಬೌಲಿಂಗ್
ವೇಗಿ ಜಸ್‌ಪ್ರೀತ್ ಬುಮ್ರಾ, ಅನುಭವಿ ವೇಗಿ ಲಸಿತ್ ಮಲಿಂಗ, ಮೆಚೆಲ್ ಮೆಕ್ಲೆನಾಘನ್, ಜಾಸೆನ್ ಬೆಹೆನ್‌ಡ್ರಾಫ್ ಸೇರಿದಂತೆ ಅತ್ಯುತ್ತಮ ಬೌಲಿಂಗ್ ವಿಭಾಗವನ್ನ ಹೊಂದಿದೆ. 5 ಕಾರಣಗಳಿಂದ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರಿತುಸಿಕೊಂಡಿದೆ.  

Follow Us:
Download App:
  • android
  • ios