Asianet Suvarna News Asianet Suvarna News

IPL 2019: RCB ವಿರುದ್ಧ ಟಾಸ್ ಗೆದ್ದ DC ಫೀಲ್ಡಿಂಗ್ ಆಯ್ಕೆ

ಗೋ ಗ್ರೀನ್ ಅಭಿಯಾನದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೆಡ್ ಜರ್ಸಿ ಬದಲು ಗ್ರೀನ್ ಜರ್ಸಿ ಹಾಕಿದೆ. ಇದರ ಜೊತೆಗೆ ತಂಡದ ಲಕ್ ಕೂಡ ಬದಲಾಗಲಿದೆ ಅನ್ನೋ ವಿಶ್ವಾಸ RCBಗಿದೆ. RCB  ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

IPL 2019  Delhi Won the toss and elected to field first against Delhi
Author
Bengaluru, First Published Apr 7, 2019, 3:34 PM IST

ಬೆಂಗಳೂರು(ಏ.07): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ 5 ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಹೊಸ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದೆ. ಗೋ ಗ್ರೀನ್ ಅಭಿಯಾನದಡಿ ಹಸಿರು ಜರ್ಸಿಯಲ್ಲಿ ಕಣಕ್ಕಿಳಿದಿರುವ RCB ಲಕ್ ಕೂಡ ಬದಲಾಗಲಿದೆ ಅನ್ನೋ ವಿಶ್ವಾಸದಲ್ಲಿದೆ.RCB ವಿರುದ್ಧ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ವಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.ಬೆಂಗಳೂರು ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

 

 

ಇದನ್ನೂ ಓದಿ: 5 ಪಂದ್ಯ ಸೋತರೂ RCBಗೆ ಇನ್ನೂ ಇದೇ ಪ್ಲೇ ಆಫ್ ಅವಕಾಶ!

ಡೆಲ್ಲಿ ಕ್ಯಾಪಿಟಲ್ಸ್ ಕೂಡ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಟಾಸ್‌ಗೂ ಮುನ್ನ ಬೆಂಗಳೂರು ತಂಡ ಗೋ ಗ್ರೀನ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಗ್ರೀನ್ ಜರ್ಸಿ ಮೇಲೆ ಸಹಿ ಮಾಡಿದರು.ಬಳಿಕ ಗಿಡ ಹಸ್ತಾಂತರಿಸಿದರು. RCB ತಂಡ ರೆಡ್ ಜರ್ಸಿ ಬದಲು ಹಸಿರು ಜರ್ಸಿ ತೊಟ್ಟಿದೆ. ಜರ್ಸಿ ಬದಲಾಂತೆ RCB ಲಕ್ ಕೂಡ ಬದಲಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

RCB ಆಡಿದ 5 ರಲ್ಲಿ 5 ಪಂದ್ಯ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ತವರಿನಿಂದ ಹೊಸ ಅಭಿಯಾನ ಆರಂಭಿಸಲು ಕೊಹ್ಲಿ ಬಾಯ್ಸ್ ಸಜ್ಜಾಗಿದ್ದಾರೆ.  ಇತ್ತ ಯುವ ಕ್ರಿಕೆಟಿಗರನ್ನೇ ತುಂಬಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಆಡಿದ 5 ಪಂದ್ಯದಲ್ಲಿ 2ರಲ್ಲಿ ಗೆಲುವು ಹಾಗೂ 3ರಲ್ಲಿ ಸೋಲು ಅನುಭವಿಸೋ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 

 

 

Follow Us:
Download App:
  • android
  • ios