Asianet Suvarna News Asianet Suvarna News

ರೋಹಿತ್- ರಾಯುಡು ಏಟಿಗೆ ವಿಂಡೀಸ್ ಧೂಳಿಪಟ: ಭಾರತಕ್ಕೆ ಭರ್ಜರಿ ಜಯ..!

ಇಂದು ನಡೆದ ಭಾರತ ಮತ್ತು ವೆಸ್ಟ್​ ಇಂಡೀಸ್ ನಡುವಿನ 4ನೇ ಏಕದಿನ ಕ್ರಿಕೆಟ್ ಪಂದ್ಯ ಹಲವು ರೋಮಾಂಚನಕಾರಿ ಕ್ಷಣಗಳಿಗೆ ಸಾಕ್ಷಿ ಆಯಿತು.ಪಂದ್ಯ ಏನಾಯ್ತು? ಇಲ್ಲಿದೆ ಹೈಲೇಟ್ಸ್

india win against West Indies in 4th odi Cricket
Author
Bengaluru, First Published Oct 29, 2018, 8:52 PM IST

ಮುಂಬೈ, [ಅ.29]: ರೋಹಿತ್ ಶರ್ಮಾ, ಅಂಬಟಿ ರಾಯುಡು ಅಮೋಘ ಶತಕದ ನೆರವಿನಿಂದ ಭಾರತ, ವೆಸ್ಟ್​ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಇಂದು ನಡೆದ ಭಾರತ ಮತ್ತು ವೆಸ್ಟ್​ ಇಂಡೀಸ್ ನಡುವಿನ 4ನೇ ಏಕದಿನ ಕ್ರಿಕೆಟ್ ಪಂದ್ಯ ಹಲವು ರೋಮಾಂಚನಕಾರಿ ಕ್ಷಣಗಳಿಗೆ ಸಾಕ್ಷಿ ಆಯಿತು.

ಮೊದಲ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿ ಭಾರತ 50 ಓವರ್ ಗಳಲ್ಲಿ ಭಜರಿ 378 ರನ್​​ಗಳ ಗರಿನೀಡಿತು. ಇದನ್ನು ಬೆನ್ನತ್ತಿದ ವಿಂಡೀಸ್, ಟೀಂ ಇಂಡಿಯಾ ಬೌಲರ್​ಗಳ ಮಾರಕ ದಾಳಿಗೆ ಮಂಕಾಯಿತು.

ಅಂತಿಮವಾಗಿ ವಿಂಡೀಸ್ ಕೇವಲ 36.2 ಓವರ್​​ಗೆ 153 ರನ್​ಗಳಿಸಿ ಸರ್ವಪತನ ಕಂಡು ಸೋಲೋಪ್ಪಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ, ವಿಂಡೀಸ್ ಬೌಲರ್​ಗಳನ್ನ ಮನಬಂದಂತೆ ದಂಡಿಸಿದರು. ಅದರಲ್ಲೂ ರೋಹಿತ್, ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದ್ರು. 

ಶತಕ ಸಿಡಿಸೋವರೆಗೂ ಬಾಲ್ ಟು ಬಾಲ್ ರನ್​ಸ್ಕೋರ್ ಮಾಡಿದ ರೋಹಿತ್, ನಂತರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. 137 ಎಸೆತಗಳಲ್ಲಿ 162 ರನ್ ಸಿಡಿಸಿದ ರೋಹಿತ್, ಕ್ರೀಡಾಂಗಣದಲ್ಲಿ ನೆರದಿದ್ದ ಸಾವಿರಾರೂ ಮಂದಿ ಅಭಿಮಾನಿಗಳನ್ನ ರಂಜಿಸಿದರು.

ಮತ್ತೊಂದೆಡೆ ರೋಹಿತ್​ ಶರ್ಮಾಗೆ ಸೂಪರ್ ಸಾಥ್ ನೀಡಿದ ಅಂಬಟಿ ರಾಯುಡು, ಏಕದಿನ ಕ್ರಿಕೆಟ್​ನಲ್ಲಿ 3ನೇ ಶತಕ ದಾಖಲಿಸಿದ್ರು. ಅಷ್ಟೇ ಅಲ್ಲ, 3ನೇ ವಿಕೆಟ್​ಗೆ ರೋಹಿತ್ ಶರ್ಮಾ ಜೊತೆಗೂಡಿ 211 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದ್ರು. 

ಅಂತಿಮವಾಗಿ ಟೀಮ್ ಇಂಡಿಯಾ ನಿಗಧಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 377 ರನ್​ಗಳಿಸಿತು. ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 162 ರನ್, ಅಂಬಟಿ ರಾಯುಡು 100 ರನ್​, ಶಿಖರ್ ಧವನ್ 38 ರನ್, ಎಂ.ಎಸ್.ಧೋನಿ 23 ರನ್​ಗಳಿಸಿದ್ರು. ವಿಂಡೀಸ್ ಪರ ಕೆಮರ್ ರೋಚ್ 2 ವಿಕೆಟ್, ಆ್ಯಶ್ಲೆ ನರ್ಸ್ ಮತ್ತು ಕಿಮೊ ಪೌಲ್ ತಲಾ ವಿಕೆಟ್ ಪಡೆದ್ರು.

Follow Us:
Download App:
  • android
  • ios