Asianet Suvarna News Asianet Suvarna News

ವೈಜಾಗ್ ಟೆಸ್ಟ್: ಟೀಂ ಇಂಡಿಯಾದ ಮೊದಲ ವಿಕೆಟ್ ಪತನ

ಟೀಂ ಇಂಡಿಯಾದ ಮೊದಲ ವಿಕೆಟ್ ಕೊನೆಗೂ ಪತನವಾಗಿದೆ. ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹರಾಜ್ ಹರಿಣಗಳ ಪಡೆಗೆ ಮೊದಲ ಯಶಸ್ಸು ದಕ್ಕಿಸಿಕೊಟ್ಟಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾದ 317 ರನ್‌ಗಳ ಮೊದಲ ವಿಕೆಟ್ ಜತೆಯಾಟಕ್ಕೆ ತೆರೆಬಿದ್ದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

India vs South Africa 1st Test Keshav Maharaj Removes Rohit Sharma To Break Incredible Stand
Author
Vizag, First Published Oct 3, 2019, 11:27 AM IST

ವಿಶಾಖಪಟ್ಟಣಂ[ಅ.03]: ದಕ್ಷಿಣ ಆಪ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಮೊದಲ ವಿಕೆಟ್ ಪತನವಾಗಿದೆ. ರೋಹಿತ್ ಶರ್ಮಾ 176 ರನ್ ಬಾರಿಸಿ ಕೇಶವ್ ಮಹರಾಜ್ ಬೌಲಿಂಗ್ ನಲ್ಲಿ ಸ್ಟಂಪೌಟ್ ಆಗಿದ್ದಾರೆ. ಇದರೊಂದಿಗೆ 317 ರನ್ ಗಳ ಮೊದಲ ವಿಕೆಟ್ ಜತೆಯಾಟಕ್ಕೆ ತೆರೆಬಿದ್ದಿದೆ.

ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಕನ್ನಡಿಗ ಮಯಾಂಕ್ ಅಗರ್‌ವಾಲ್

ಮೊದಲ ದಿನದಾಟದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ ಎರಡನೇ ದಿನವೂ ದಕ್ಷಿಣ ಆಫ್ರಿಕಾ ಬೌಲರ್’ಗಳನ್ನು ಪರದಾಡುವಂತೆ ಮಾಡಿತು. ಮಯಾಂಕ್ ಅಗರ್‌ವಾಲ್ ಹಾಗೂ ರೋಹಿತ್ ಶರ್ಮಾ ಎರಡನೇ ದಿನದಾಟದ ಮೊದಲ ಸೆಷನ್ ನಲ್ಲೂ ಅನಾಯಾಸವಾಗಿ ಬ್ಯಾಟ್ ಬೀಸಿದರು. ರೋಹಿತ್ ಶರ್ಮಾ ನೋಡ ನೋಡುತ್ತಿದ್ದಂತೆ 150 ರನ್ ಪೂರೈಸಿದರು. ಬರೋಬ್ಬರಿ 244 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 176 ರನ್ ಸಿಡಿಸಿದರು. 82ನೇ ಓವರ್ ನಲ್ಲೇ ಕೇಶವ್ ಮಹರಾಜ್ ಹಾಕಿದ 4ನೇ ಎಸೆತವನ್ನು ಲಾಂಗ್ ಆಪ್’ನತ್ತ ಸಿಕ್ಸರ್’ಗಟ್ಟಿದ ರೋಹಿತ್, 5ನೇ ಎಸೆತವನ್ನು ಓವರ್ ಎಕ್ಸ್’ಟ್ರಾ ಕವರ್ ಮೂಲಕ ಬೌಂಡರಿಗಟ್ಟಿದರು. ಮರು ಎಸೆತದಲ್ಲೇ ಸ್ಟಂಪ್ ಔಟ್ ಆದರು.

ರೋಹಿತ್ ಒಂದು ಶತಕ; ಹಲವಾರು ದಾಖಲೆ ನಿರ್ಮಾಣ..!

ಆರಂಭಿಕನಾಗಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ ರೋಹಿತ್ ಶರ್ಮಾ, ಮಯಾಂಕ್ ಅಗರ್‌ವಾಲ್ ಜತೆ 300+ ರನ್’ಗಳ ಜತೆಯಾಟ ನಿಭಾಯಿಸಿದರು.  ಇದರ ಜತೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಗರಿಷ್ಠ ವೈಯುಕ್ತಿಕ ರನ್ ಬಾರಿಸಿದ ಎರಡನೇ ಆಟಗಾರ ಎನಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಸೆಹ್ವಾಗ್ 319 ರನ್ ಬಾರಿಸಿದ್ದರೆ, ರೋಹಿತ್ ಇದೀಗ 176 ರನ್ ಬಾರಿಸುವ ಮೂಲಕ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

Follow Us:
Download App:
  • android
  • ios