Asianet Suvarna News Asianet Suvarna News

ಮೊದಲ ಟಿ20: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ವಿರೋಚಿತ ಸೋಲು!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ಅತ್ಯಂತ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಗೆಲುವಿನ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ  ಕಾಂಗರೂಗಳು ಶಾಕ್ ನೀಡಿದ್ದಾರೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

India vs Australia t20 Cricket Australia register 4 run win in thrilling match
Author
Bengaluru, First Published Nov 21, 2018, 5:37 PM IST

ಬ್ರಿಸ್ಬೇನ್(ನ.21): ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತ  ವಿರೋಚಿತ 4 ರನ್‌ಗಳ ಸೋಲು ಅನುಭವಿಸಿದೆ. ಆದರೆ ಸತತ ಸೋಲಿನಿಂದ ಕಂಗೆಟ್ಟಿದ್ದ ಆಸ್ಟ್ರೇಲಿಯಾ ಗೆಲುವಿನ ಖಾತೆ ತೆರೆದಿದೆ.  ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಪಡೆದಿದೆ.

 

 

ಆಸ್ಟ್ರೇಲಿಯಾ ನೀಡಿದ 174 ರನ್ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾಗೆ ಶಿಖರ್ ಧವನ್ ಆಸರೆಯಾದರು. ಆದರೆ ಇತರ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲಿಲ್ಲ. ರೋಹಿತ್ ಶರ್ಮಾ ಕೇವಲ 7 ರನ್ ಸಿಡಿಸಿ ಔಟಾದರು.ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಆಸಿಸ್ ಬೌಲರ್‌ಗಳ ನಿದ್ದೆಗೆಡಿಸಿದರು. ಟಿ20 ಕ್ರಿಕೆಟ್‌ನಲ್ಲಿ 9ನೇ ಅರ್ಧಶತಕ ದಾಖಲಿಸಿದ ಧವನ್ ಭಾರತೀಯ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರಿಸಿದರು.

ಧವನ್‌ಗೆ ಟೀಂ ಇಂಡಿಯಾದ ಇತರ ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಕೆಎಲ್ ರಾಹುಲ್ 13 ಹಾಗೂ ನಾಯಕ ವಿರಾಟ್ ಕೊಹ್ಲಿ4 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಧವನ್ 76 ರನ್ ಸಿಡಿಸಿ ಔಟಾದರು.

ಅಂತಿಮ ಹಂತದಲ್ಲಿ  ರಿಷಬ್ ಪಂತ್  ಹಾಗೂ ದಿನೇಶ್ ಕಾರ್ತಿಕ್ ಜೊತೆಯಾಟ ಪಂದ್ಯದ ರೋಚಕತೆ ಹೆಚ್ಚಿಸಿತು. ಆದರೆ ಪಂತ್ 20 ರನ್ ಸಿಡಿಸಿ ಔಟಾದರು. ಇನ್ನು ಕ್ರುನಾಲ್ ಪಾಂಡ್ಯ 2 ರನ್ ಸಿಡಿಸಿ ಔಟಾದರು. ಅಂತಿಮ 3 ಎಸೆತದದಲ್ಲಿ 11 ರನ್‌ಗಳ ಅವಶ್ಯಕತೆ ಇತ್ತು. ಅಷ್ಟರಲ್ಲೇ 30 ರನ್ ಸಿಡಿಸಿದ ದಿನೇಶ್ ಕಾರ್ತಿಕ್ ಕೂಡ ಪೆವಿಲಿಯನ್ ಸೇರಿಕೊಂಡರು.

ಕೊನೆಯ ಎಸೆತದಲ್ಲಿ ಕುಲ್ದೀಪ್ ಯಾದವ್ ಬೌಂಡರಿ ಸಿಡಿಸದರೂ ಗೆಲುವು ಸಿಗಲಿಲ್ಲ. ಭಾರತ 17 ಓವರ್ಗಳಲ್ಲಿ 7 ವಿಕೆಟ್ ವಿಕೆಟ್ ನಷ್ಟಕ್ಕೆ 169 ರನ್ ಸಿಡಿಸಿತು. ಈ ಮೂಲಕ 4 ರನ್‌ಗಳ ಸೋಲು ಅನುಭವಿಸಿತು. ಸರಣಿಯಲ್ಲಿ ಭಾರತ 0-1 ಹಿನ್ನಡೆ ಅನುಭವಿಸಿದೆ. 

ಮಳೆಯಿಂದಾಗಿ ಪಂದ್ಯವನ್ನ 17 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಆಸ್ಟ್ರೇಲಿಯಾ 17 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತು. ಡಕ್‌ವರ್ತ್ ನಿಯಮದಿಂದಾಗಿ ಭಾರತಕ್ಕೆ 174 ರನ್ ಟಾರ್ಗೆಟ್ ನೀಡಲಾಗಿತ್ತು.
 

Follow Us:
Download App:
  • android
  • ios