Asianet Suvarna News Asianet Suvarna News

INDvsAUS:ಹುತಾತ್ಮ ಯೋಧರಿಗೆ ವೀಕ್ಷಕ ವಿವರಣೆಗಾರರ ಸಲಾಂ!

ರಾಂಚಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯ ಹುತಾತ್ಮ ಯೋಧರಿಗೆ ಅರ್ಪಿಸಲಾಗಿದೆ. ಪಂದ್ಯದ ಸಂಭಾವನೆ ಕೂಡ ಹುತಾತ್ಮ ಯೋಧರ ಕುಟಂಬಕ್ಕೆ ನೀಡಲಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗರು ಗೌರವ ಸೂಚಿಸಿದ ಬೆನ್ನಲ್ಲೇ, ಪಂದ್ಯದ ವೀಕ್ಷಕ ವಿವರಣೆಗಾರರು ಭಾರತೀಯ ಸೇನೆಗೆ ಗೌರವ ಸೂಚಿಸಿದ್ದಾರೆ.
 

India vs Australia Odi match commentators were army cap tribute to pulwama martyrs
Author
Bengaluru, First Published Mar 8, 2019, 3:08 PM IST

ರಾಂಚಿ(ಮಾ.08): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ ಹಲವು ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ರಾಂಚಿ ಪಂದ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಭಾರತೀಯ ಸೇನೆಯ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸೂಚಿಸಿದರೆ, ಇದೀಗ ಪಂದ್ಯದ ವೀಕ್ಷಕ ವಿವರಣೆಗಾರರು ಗೌರವ ಸೂಚಿಸಿದ್ದಾರೆ.

ಇದನ್ನೂ ಓದಿ: ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಂ ಇಂಡಿಯಾ

ರಾಂಚಿ ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿರುವ ಹರ್ಷಾ ಬೋಗ್ಲೆ,  ಮರಳಿ ಕಾರ್ತಿಕ್, ಮ್ಯಾಥ್ಯೂ ಹೇಡನ್, ಶಿವರಾಮ ಕೃಷ್ಣನ್ ಹಾಗೂ ಸಂಜಯ್ ಮಂಜ್ರೇಕರ್‌ಗೆ ಟೀಂ ಇಂಡಿಯಾ ಮಾಜಿ ನಾಯಕ, ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಸೇನಾ ಕ್ಯಾಪ್ ನೀಡಿದರು. 

 

 

ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು - ಭಾರತೀಯರ ಹೃದಯ ಗೆದ್ದ ಬಿಸಿಸಿಐ!

ಪಂದ್ಯಕ್ಕೂ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಕ್ಯಾಪ್ ವಿತರಿಸಿದರು. ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಭಾರತ ಏರ್‌ಸ್ಟ್ರೈಕ್ ನಡೆಸಿತ್ತು.  
 

Follow Us:
Download App:
  • android
  • ios