Asianet Suvarna News Asianet Suvarna News

ಭಾರತ-ಆಫ್ಘಾನ್ ಚೊಚ್ಚಲ ಟೆಸ್ಟ್'ಗೆ ಬೆಂಗಳೂರು ಆತಿಥ್ಯ

ಕಳೆದ ವರ್ಷ ಜೂನ್‌'ನಲ್ಲಿ ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳು ಐಸಿಸಿಯಿಂದ ಟೆಸ್ಟ್ ಮಾನ್ಯತೆ ಪಡೆದುಕೊಂಡಿವೆ. ಕಳೆದ ವರ್ಷದ(2017) ಆವೃತ್ತಿಯಲ್ಲಿ ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ 13 ಆಫ್ಘಾನ್ ಆಟಗಾರರು ಜನವರಿ 27 ಹಾಗೂ 28ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಲಭ್ಯರಿದ್ದಾರೆ.

India vs Afghanistan Test match from 14 June in Bengaluru

ನವದೆಹಲಿ(ಜ.16): ಆಫ್ಘಾನಿಸ್ತಾನ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಭಾರತ ವಿರುದ್ಧ ಆಡಲಿದ್ದು, ಈ ಐತಿಹಾಸಿಕ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಇಂದು ಸಭೆ ಸೇರಿದ್ದ ಬಿಸಿಸಿಐ ಹಾಗೂ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಜೂನ್ 14-18ರಂದು ನಡೆಸಲು ನಿರ್ಧಾರ ಕೈಗೊಂಡರು. ‘ಜೂನ್‌'ನಲ್ಲಿ ಮಳೆ ಸಾಧ್ಯತೆ ಹೆಚ್ಚಿರುವ ಕಾರಣ, ಪಂದ್ಯವನ್ನು ಬೆಂಗಳೂರಲ್ಲಿ ನಡೆಸುವುದೇ ಸೂಕ್ತ ಎನಿಸಿತು’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ. ಸಬ್-ಏರ್ ವ್ಯವಸ್ಥೆ ಹೊಂದಿರುವ ಕಾರಣ, ಬೆಂಗಳೂರು ಪಂದ್ಯದ ಆತಿಥ್ಯ ವಹಿಸಲು ಮುಂಚೂಣಿಯಲ್ಲಿತ್ತು.

ಕಳೆದ ವರ್ಷ ಜೂನ್‌'ನಲ್ಲಿ ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳು ಐಸಿಸಿಯಿಂದ ಟೆಸ್ಟ್ ಮಾನ್ಯತೆ ಪಡೆದುಕೊಂಡಿವೆ. ಕಳೆದ ವರ್ಷದ(2017) ಆವೃತ್ತಿಯಲ್ಲಿ ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ 13 ಆಫ್ಘಾನ್ ಆಟಗಾರರು ಜನವರಿ 27 ಹಾಗೂ 28ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಲಭ್ಯರಿದ್ದಾರೆ.

Follow Us:
Download App:
  • android
  • ios