Asianet Suvarna News Asianet Suvarna News

ನೋ ಬಾಲ್ ಪಜೀತಿ- ಸಚಿನ್ ತೆಂಡುಲ್ಕರ್ ಕಾಲೆಳೆದ ಐಸಿಸಿ

ಸದ್ಯ ಕ್ರಿಕೆಟ್‌ನಲ್ಲ್ ನೋ ಬಾಲ್ ಚರ್ಚೆ ಜೋರಾಗುತ್ತಿದೆ. ಇದರ ಬೆನ್ನಲ್ಲೇ ಐಸಿಸಿ, ಸಚಿನ್ ತೆಂಡೂಲ್ಕರನ್ನು ನೋ ಬಾಲ್ ಕುರಿತು ಕಾಲೆಳೆದಿದೆ. ಐಸಿಸಿ ಸಚಿನ್ ನೋ ಬಾಲ್ ಕುರಿತು ಟ್ವೀಟ್ ವಿವರ ಇಲ್ಲಿದೆ.

ICC dig at sachin tendulkar front foot no ball against vindo kambli
Author
Bengaluru, First Published May 12, 2019, 5:58 PM IST

ಮುಂಬೈ(ಮೇ.12): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಹೆಚ್ಚಾಗಿ ಮೈದಾನದಲ್ಲೇ ಕಾಣಿಸಿಕೊಳ್ಳುತ್ತಾರೆ. ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ, ಚಾರಿಟಿ ಕ್ರಿಕೆಟ್ ಪಂದ್ಯ ಸೇರಿದಂತೆ ಕ್ರಿಕೆಟ್ ಜೊತೆ ಸಕ್ರೀಯರಾಗಿದ್ದಾರೆ. ಇದೀಗ ಸಚಿನ್ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಜೊತೆ ಕ್ರಿಕೆಟ್ ಆಡೋ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಐಸಿಸಿ ಸಚಿನ್ ಕಾಲೆಳೆದಿದೆ.

ಇದನ್ನೂ ಓದಿ: IPL ಪ್ರಶಸ್ತಿ ಗೆಲ್ಲಲು ಟಾಸ್ ಗೆದ್ರೆ ಯಾವ ಆಯ್ಕೆ ಉತ್ತಮ?

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ವಿನೋದ್ ಕಾಂಬ್ಳಿ ನೆಟ್ಸ್‌ನಲ್ಲಿ ಕ್ರಿಕೆಟ್ ಆಡಿದ್ದಾರೆ. ಆರಂಭದಲ್ಲಿ ಸಚಿನ್, ಗೆಳೆಯ ವಿನೋದ್ ಕಾಂಬ್ಳಿಗೆ ಬೌಲಿಂಗ್ ಮಾಡಿದ್ದಾರೆ. ಅತ್ತ ಕಾಂಬ್ಳಿ ಅಷ್ಟೇ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಬಳಿಕ ವಿನೋದ್ ಕಾಂಬ್ಳಿ, ಸಚಿನ್‌ಗೆ ಬೌಲಿಂಗ್ ಮಾಡಿದ್ದಾರೆ. ನಾವಿಬ್ಬರು ಜೊತೆಯಾಗಿ ಆಡಿದ್ದೇವೆ, ಆದರೆ ಎದುರಾಳಿಯಾಗಿ ಇದೇ ಮೊದಲು ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

 

 

ಇದನ್ನೂ ಓದಿ: ವಿಶ್ವಕಪ್‌ಗೂ ಮುನ್ನ ಯುದ್ಧಭೂಮಿಗೆ ಆಸಿಸ್ ಕ್ರಿಕೆಟ್‌ ತಂಡ ಭೇಟಿ!

ಇದಕ್ಕೆ ಪ್ರತಿಕ್ರಿಯಿಸಿರುವ ಐಸಿಸಿ, ಸಚಿನ್ ಬೌಲಿಂಗ್ ಮಾಡುವಾಗ ಗೆರೆ ದಾಟಿದ್ದಾರೆ. ಇದಕ್ಕೆ ಪೂರಕವಾಗಿ ಸಚಿನ್ ಬೌಲಿಂಗ್ ಪೋಟೋ ಹಾಕಿದ್ದಾರೆ. ಇಷ್ಟೇ ಅಲ್ಲ ಇದು ನೋ ಬಾಲ್ ಎಂದು ಐಸಿಸಿ ಸಚಿನ್ ಕಾಲೆಳೆದಿದೆ. ಐಪಿಎಲ್ ಟೂರ್ನಿ ಸೇರಿದಂತೆ ಪ್ರಮುಖ ಕ್ರಿಕೆಟ್‌ಗಳಲ್ಲಿ ಇದೀಗ ನೋ ಬಾಲ್ ಚರ್ಚೆ ಜೋರಾಗುತ್ತಿದೆ. ಇದರ ಬೆನ್ನಲ್ಲೇ ಐಸಿಸಿ ಸಚಿನ್ ಕಾಲೆಳೆದಿದೆ.

 

 

Follow Us:
Download App:
  • android
  • ios