Asianet Suvarna News Asianet Suvarna News

ಸುಧಾರಿತ ಶೂ ಪಡೆಯಲು ಜರ್ಮನಿಗೆ ಹಾರಿದ ಸ್ವಪ್ನಾ ಬರ್ಮನ್

ಏಷ್ಯನ್ ಗೇಮ್ಸ್ ವೇಳೆ 21 ವರ್ಷದ ಸ್ವಪ್ನಾ, ತಮ್ಮ ಎರಡೂ ಪಾದಗಳಲ್ಲಿ 6 ಬೆರಳುಗಳಿರುವುದನ್ನು ತೋರಿಸಿ, ಅದಕ್ಕೆ ಸರಿಹೊಂದು ವಂತಹ ಶೂ ದೊರಕಿಸಿಕೊಡುವಂತೆ ಕೇಳಿಕೊಂಡಿದ್ದರು. ಸ್ವಪ್ನಾ ಮನವಿಯನ್ನು ಪರಿಗಣಿಸಿದ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಕ್ರೀಡಾ ಇಲಾಖೆಗೆ ಅಗತ್ಯ ನೆರವು ನೀಡುವಂತೆ ಸೂಚಿಸಿದ್ದರು. 

Heptathlete Swapna Barman heads to Germany for her custom made shoe
Author
New Delhi, First Published Oct 31, 2018, 11:05 AM IST

ನವದೆಹಲಿ(ಅ.31): ಏಷ್ಯನ್ ಗೇಮ್ಸ್‌ನ ಹೆಪ್ಟಾಥ್ಲಾನ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಪಶ್ಚಿಮ ಬಂಗಾಳದ ಹೆಪ್ಟಾಥ್ಲೀಟ್ ಸ್ವಪ್ನಾ ಬರ್ಮನ್, ತಮ್ಮ ಪಾದಕ್ಕೆ ಹೊಂದುವಂತಹ ಸುಧಾರಿತ ಶೂಗಳನ್ನು ಪಡೆಯಲು ಜರ್ಮನಿಗೆ ತೆರಳಿದ್ದಾರೆ. 

ಇದನ್ನು ಓದಿ: ಪದಕ ವಿಜೇತ ಸ್ವಪ್ನ ಬರ್ಮನ್‌ಗೆ 6 ಬೆರಳಿನ ಶೂ ನೀಡಲಿದೆ ಅಡಿಡಾಸ್!

ಏಷ್ಯನ್ ಗೇಮ್ಸ್ ವೇಳೆ 21 ವರ್ಷದ ಸ್ವಪ್ನಾ, ತಮ್ಮ ಎರಡೂ ಪಾದಗಳಲ್ಲಿ 6 ಬೆರಳುಗಳಿರುವುದನ್ನು ತೋರಿಸಿ, ಅದಕ್ಕೆ ಸರಿಹೊಂದು ವಂತಹ ಶೂ ದೊರಕಿಸಿಕೊಡುವಂತೆ ಕೇಳಿಕೊಂಡಿದ್ದರು. ಸ್ವಪ್ನಾ ಮನವಿಯನ್ನು ಪರಿಗಣಿಸಿದ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಕ್ರೀಡಾ ಇಲಾಖೆಗೆ ಅಗತ್ಯ ನೆರವು ನೀಡುವಂತೆ ಸೂಚಿಸಿದ್ದರು. 

ಇದನ್ನು ಓದಿ: ಏಷ್ಯನ್ ಗೇಮ್ಸ್ 2018: ಹೆಪ್ಟಥ್ಲಾನ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

ಈ ವೇಳೆ ಜರ್ಮನಿ ಮೂಲದ ಪ್ರತಿಷ್ಠಿತ ಕ್ರೀಡಾ ಪರಿಕರಗಳ ಸಂಸ್ಥೆ, ಸ್ಪಪ್ನಾ ಪಾದಗಳಿಗೆ ಹೊಂದುವ ಶೂಗಳನ್ನು ತಯಾರಿಸಿಕೊಡುವುದಾಗಿ ತಿಳಿಸಿತ್ತು. 2020ರ ಒಲಿಂಪಿಕ್ಸ್ ಮೇಲೆ ಸ್ವಪ್ನಾ ಕಣ್ಣಿಟ್ಟಿದ್ದಾರೆ.

Follow Us:
Download App:
  • android
  • ios